Site icon Vistara News

Murder Case: ಇನ್ಶೂರೆನ್ಸ್‌ ಹಣಕ್ಕಾಗಿ ದಂಪತಿಯ ಖತರ್ನಾಕ್ ಪ್ಲಾನ್, ತನ್ನನ್ನೇ ಹೋಲುವ ವ್ಯಕ್ತಿಯ ಕೊಲೆ ಮಾಡಿ ಡ್ರಾಮಾ!

murder case for insurance money hassan

ಹಾಸನ: ಇನ್ಶೂರೆನ್ಸ್ (Insurance money) ಹಣ ಲಪಟಾಯಿಸಲು ದಂಪತಿ ಮಾಡಿದ ಖತರ್ನಾಕ್ ಪ್ಲಾನ್‌ ನೋಡಿದರೆ ನೀವು ಬೆಚ್ಚಿ ಬೀಳುವುದು ಖಚಿತ. ಇವರ ಭಯಾನಕ ಸಂಚಿಗೆ (Murder plot) ಅಮಾಯಕನೊಬ್ಬ ಬಲಿಯಾಗಿದ್ದಾನೆ. ತನ್ನನ್ನೆ ಹೋಲುವ ವ್ಯಕ್ತಿಯ ಪರಿಚಯ ಮಾಡಿಕೊಂಡು ನಂತರ ಆಕ್ಸಿಡೆಂಟ್ (Road Accident) ಮಾಡಿದ ರೀತಿಯಲ್ಲಿ ಕೊಲೆ (Murder Case) ಮಾಡಿದ್ದಾರೆ ಈ ದಂಪತಿ.

ಹಾಸನ (Hassan news) ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗಂಡಸಿ ಠಾಣೆ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದೆ. ಬೆಂಗಳೂರಿನ ಹೊಸಕೋಟೆ ತಾಲ್ಲೂಕಿನ ಚಿಕ್ಕಕೋಲಿಗದ ಮುನಿಶ್ವಾಮಿ ಗೌಡ ಮತ್ತು ಆತನ ಪತ್ನಿಯೇ ಈ ಕೊಲೆ ಕೃತ್ಯ ಎಸಗಿದ ದಂಪತಿ. ಒಂದು ಕೋಟಿ ರೂಪಾಯಿ ಹಣಕ್ಕಾಗಿ ಮುನಿಸ್ವಾಮಿ ಗೌಡ ಆಕ್ಸಿಡೆಂಟ್‌ನಲ್ಲಿ ಸತ್ತ ರೀತಿ ನಾಟಕವಾಡಿದ್ದಾನೆ. ಆಗಸ್ಟ್ 12ರ ರಾತ್ರಿ ಅಪಘಾತದ ರೀತಿಯಲ್ಲಿ ಈ ಕೊಲೆ ಎಸಗಲಾಗಿತ್ತು.

ಮುನಿಸ್ವಾಮಿ ಗೌಡನ ತನ್ನನ್ನೇ ಹೋಲುವವನ ರೀತಿ ಇದ್ದವನ ಗೆಳೆತನ ಬೆಳೆಸಿ, ಶಿಡ್ಲಘಟ್ಟಕ್ಕೆ ಹೋಗೋಣ ಎಂದು ಹೊರಡಿಸಿಕೊಂಡು ಆತನನ್ನು ಕರೆದೊಯ್ದಿದ್ದಾನೆ. ದಾರಿಯಲ್ಲಿ, ಕಾರು ಪಂಕ್ಚರ್ ಆಗಿದೆ ಟೈರ್ ಬದಲಿಸು ಅಂತ ಅಮಾಯಕನಿಗೆ ಹೇಳಿದ್ದ ಮುನಿಸ್ವಾಮಿ ಗೌಡ. ರಸ್ತೆ ಪಕ್ಕ ಕಾರು ನಿಲ್ಲಿಸಿಕೊಂಡು ಟೈರ್ ಬದಲಿಸುವಾಗ ಅಮಾಯಕನ ಮೇಲೆ ಲಾರಿ ಹರಿಸಿದ್ದ. ಈ ಮೊದಲೇ ಅಮಾಯಕನ ಮೇಲೆ ಲಾರಿ ಹರಿಸಿ ಕೊಲ್ಲಲು ಮುನಿಶ್ವಾಮಿ ಗೌಡ ಲಾರಿ ಚಾಲಕನ ಜೊತೆ ಸಂಚು ಹೂಡಿದ್ದ.

ಅಮಾಯಕ ಸತ್ತ ನಂತರ ಮುನಿಶ್ವಾಮಿ ಗೌಡ ಕಾರು ಬಿಟ್ಟು ಎಸ್ಕೇಪ್ ಆಗಿದ್ದ. ಜಿಲ್ಲಾಸ್ಪತ್ರೆಗೆ ಮೃತ ಅಮಾಯಕನ ಬಾಡಿ ಶಿಫ್ಟ್ ಮಾಡಲಾಗಿತ್ತು. ಮುನಿಶ್ವಾಮಿ ಗೌಡನ ಪತ್ನಿ ಶಿಲ್ಪಾರಾಣಿ ಹೆಣವನ್ನು ನೋಡಿ, ಈತ ತನ್ನ ಪತಿಯೇ ಎಂದು ದೃಢೀಕರಿಸಿದ್ದಳು. ಶಿಲ್ಪಾರಾಣಿಗೆ ಪೊಲೀಸರು ಮೃತದೇಹ ಕೊಟ್ಟಿದ್ದರು. ಚಿಕ್ಕಕೋಲಿಗದಲ್ಲಿ ಅಂತ್ಯಸಂಸ್ಕಾರ ಮಾಡಿ ಮುಗಿಸಲಾಗಿತ್ತು. ಸಂಬಂಧಿಕರೆಲ್ಲಾ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು

ಮೂರ್ನಾಲ್ಕು ದಿನದ ನಂತರ ತನ್ನ ಸಂಬಂಧಿ ಪೊಲೀಸ್ ಇನ್‌ಸ್ಪೆಕ್ಟರ್ ಶಿಡ್ಲಘಟ್ಟದ ಶ್ರೀನಿವಾಸ್ ಎದುರು ಮುನಿಶ್ವಾಮಿ ಗೌಡ ಪ್ರತ್ಯಕ್ಷನಾಗಿದ್ದ. ಶಿಡ್ಲಘಟ್ಟ ಇನ್ಸ್‌ಪೆಕ್ಟರ್, ಸತ್ತವನು ಎದ್ದು ಬಂದನೇ ಎಂದು ಶಾಕ್ ಆಗಿದ್ದರು. ಇನ್ಶೂರೆನ್ಸ್ ಕ್ಲೈಮ್ ಮಾಡಿ ಸಾಲ ತೀರಿಸಿಕೊಳ್ಳಲು ಬೇರೆಯವನ ಸಾಯಿಸಿ ತಾನೇ ಸತ್ತು ಹೋಗಿರುವ ರೀತಿ ಸಂಚು ಮಾಡಿದ್ದನ್ನು ಆರೋಪಿ ಅವರಿಗೆ ವಿವರಿಸಿದ್ದಾನೆ.

ಕೂಡಲೇ ಗಂಡಸಿ ಪೊಲೀಸರಿಗೆ ಶಿಡ್ಲಘಟ್ಟ ಇನ್‌ಸ್ಪೆಕ್ಟರ್ ಶ್ರೀನಿವಾಸ್ ವಿಷಯ ಮುಟ್ಟಿಸಿದ್ದಾರೆ. ನಂತರ ಗಂಡಸಿ ಪೊಲೀಸರು ಮುನಿಶ್ವಾಮಿ ಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಂಪೂರ್ಣ ಸಂಚು ಬಯಲಾಗಿದೆ. ಪತ್ನಿ ಹಾಗೂ ಮುನಿಶ್ವಾಮಿ ಗೌಡನನ್ನು ಗಂಡಸಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೋಟಿ ಕೋಟಿ ಇನ್ಶೂರೆನ್ಸ್ ಹಣಕ್ಕಾಗಿ ಅಮಾಯಕನ್ನು ಕೊಲ್ಲಿಸಿ ನಾಟಕವಾಡಿದ ದಂಪತಿ ಕೈಗೆ ಇದೀಗ ಕೋಳ ಬಿದ್ದಿದೆ.

ಇದನ್ನೂ ಓದಿ: Kolkata Doctor Murder Case: ಕೋಲ್ಕತಾ ವೈದ್ಯೆಯ ಹಂತಕನಲ್ಲಿ ಕ್ರೂರ ಮೃಗದ ಲಕ್ಷಣ! ಪಶ್ಚಾತ್ತಾಪವೇ ಇಲ್ಲ

Exit mobile version