Site icon Vistara News

Murder Case: ಗಂಡನ ಕೈಕಾಲು ಕಟ್ಟಿಹಾಕಿ ಕೊಲ್ಲಿಸಿದಳು ಸುಂದರಿ ಹೆಂಡತಿ!

murder case wife killed husband

ಕಲಬುರಗಿ: ಪತ್ನಿಯೊಬ್ಬಳು ತನ್ನ ಗಂಡನನ್ನೇ ಕೈಕಾಲು ಕಟ್ಟಿಹಾಕಿ ಕೊಂದುಹಾಕಿದ (wife killed husband) ಪ್ರಕರಣ ಕಲಬುರಗಿಯಲ್ಲಿ (Kalaburagi news) ನಡೆದಿದೆ. ಹೆಂಡತಿ ಹಾಗೂ ಮಗುವನ್ನು ನೋಡಲು ಮಾವನ ಮನೆಗೆ ಬಂದಿದ್ದ ಪತಿ ಬರ್ಬರವಾಗಿ (Murder Case) ಕೊಲೆಯಾಗಿದ್ದಾನೆ.

ಕಲಬುರಗಿ ನಗರದ ಆರ್.ಜಿ ನಗರದಲ್ಲಿ ಈ ಘಟನೆ ನಡೆದಿದೆ. ಈಶ್ವರ್‌ (26) ಕೊಲೆಯಾದ ಪತಿ. ಈಶ್ವರ್ ಕಲಬುರಗಿ ನಗರದ ಕನಕನಗರದ ನಿವಾಸಿಯಾಗಿದ್ದು, ನಗರದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ನಾಲ್ಕು ವರ್ಷದ ಹಿಂದೆ ರಂಜಿತಾ ಎಂಬಾಕೆಯ ಜೊತೆಗೆ ಈಶ್ವರ್‌ಗೆ ವಿವಾಹವಾಗಿತ್ತು. ಇವರಿಗೆ ಒಂದು ಮಗುವಿತ್ತು. ಇಬ್ಬರ ನಡುವೆ ಸಂಸಾರಿಕ ಕಲಹವಿತ್ತು.

ಕಳೆದ ಹಲವು ತಿಂಗಳ ಹಿಂದೆ ರಂಜಿತಾ ಗಂಡನ ಜೊತೆಗೆ ಜಗಳವಾಡಿ ಮಗುವನ್ನು ಜೊತೆಗೆ ಕರೆದುಕೊಂಡು ತವರು ಮನೆ ಸೇರಿದ್ದಳು. ನಿನ್ನೆ ರಾತ್ರಿ ಗಂಡ ಈಶ್ವರ್‌ ಮಗುವನ್ನು ನೋಡಲು ಆಕೆಯ ಮನೆಗೆ ಬಂದಿದ್ದ. ಆ ಸಂದರ್ಭದಲ್ಲಿ ರಂಜಿತಾ ಹಾಗೂ ಆಕೆಯ ಮನೆಯವರು ಗಲಾಟೆ ತೆಗೆದು ಈಶ್ವರ್‌ನ ಕೈಕಾಲು ಕಟ್ಟಿಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಸಾಂಸಾರಿಕ ಬಿಕ್ಕಟ್ಟಿನ ಕಾರಣದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ. ವಿವಾಹೇತರ ಸಂಬಂಧ ಇತ್ಯಾದಿ ಕಾರಣಗಳ ಸಾಧ್ಯತೆಯನ್ನೂ ಪೊಲೀಸರು ಶೋಧಿಸುತ್ತಿದ್ದಾರೆ. ಕೊಲೆಯಾದಾತ ಹಾಗೂ ಆರೋಪಿಗಳ ಮೊಬೈಲ್‌ ಕಾಲ್‌ ಡೀಟೇಲ್ಸ್‌ ತೆಗೆದುಕೊಂಡು ಪೊಲೀಸರು ಶೋಧಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಹಾಡಹಗಲೇ ರೌಡಿಶೀಟರ್‌ ಕೊಲೆ

ಬೆಂಗಳೂರು: ಹಾಡಹಗಲೆ ಯುವಕನ ಬರ್ಬರ ಹತ್ಯೆ (Murder case) ನಡೆದಿದೆ. ಬೆಂಗಳೂರಿನ ಶೇಷಾದ್ರಿ ಪುರಂ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿ ಘಟನೆ ನಡೆದಿದೆ. ಅಜಿತ್ ಕುಮಾರ್‌ (25) ಕೊಲೆಯಾದವನು.

ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ರಶಿಲ್ಲಾರ್ ಸ್ಟ್ರೀಟ್‌ನಲ್ಲಿ ಅಜಿತ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕೊಲೆಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಭೇಟಿ ನೀಡಿದ್ದಾರೆ.

ಸ್ಥಳದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ನಡೆದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹಂತಕರಿಗಾಗಿ ಹುಡುಕಾಟ ನಡೆಸಿರುವ ಪೊಲೀಸರು, ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೊಲೆ ಕೇಸ್‌ನಲ್ಲಿ ಆರೋಪಿಯಾಗಿದ್ದ ಅಜಿತ್‌

ಬ್ಲಡ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಅಜಿತ್‌, 2022ರಲ್ಲಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಸಂಜೆ 4:15ರ ವೇಳೆಗೆ ಮನೆಯಿಂದ ಊಟ ಮುಗಿಸಿ ಹೊರಬಂದಿದ್ದ ಅಜಿತ್ ಮೇಲೆ ಏಕಾಏಕಿ ಹಂತಕರ ಗ್ಯಾಂಗ್‌ ಅಟ್ಯಾಕ್‌ ಮಾಡಿದೆ. ಮಚ್ಚು ಬೀಸಿದ ರಭಸಕ್ಕೆ ಅಜಿತ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಶೇಷಾದ್ರಿಪುರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಅಜಿತ್ ಹಾಗೂ ಸೋದರ ಕಾರ್ತಿಕ್ ಇಬ್ಬರು ಗಣೇಶ್ ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಏರಿಯಾದಲ್ಲಿ ನಾನೇ ಡಾನ್ ಎಂದು ಅಜಿತ್‌ ಮೆರೆಯುತ್ತಿದ್ದ. ಸಮಯ ಕಾದು ನೋಡಿ ಎದುರಾಳಿಗಳು ಸೇಡು ತೀರಿಸಿಕೊಂಡಿದ್ದಾರೆ.

ಇದನ್ನೂ ಓದಿ: Road Accident : ಬೆಂಗಳೂರಲ್ಲಿ ಮಳೆಗೆ ಬೈಕ್‌ ಸವಾರ ಬಲಿ; ಕಂಟ್ರೋಲ್‌ ತಪ್ಪಿ ಬಿದ್ದವನ ಮೇಲೆ ಹರಿದ ವಾಹನಗಳು!

Exit mobile version