ಹಾಸನ: ಪೊಲೀಸ್ ಕಾನ್‌ಸ್ಟೇಬಲ್ (Police Constable) ಒಬ್ಬ ತನ್ನ ಪತ್ನಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ಕಚೇರಿ ಆವರಣದಲ್ಲೇ ಇರಿದು (Stabbed) ಕೊಂದುಹಾಕಿದ (Murder Case) ಘಟನೆ ಹಾಸನದಲ್ಲಿ ನಡೆದಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕಾನ್‌ಸ್ಟೇಬಲ್, ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ. ಹಾಸನ ನಗರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಲೋಕನಾಥ್ ಪತ್ನಿಗೆ ಚಾಕುವಿನಿಂದ ಇರಿದ ಆರೋಪಿ. ಪತ್ನಿ ಮಮತಾ ಹತ್ಯೆಯಾದವರು. ಲೋಕನಾಥ್ ಹಾಗು ಮಮತಾಗೆ 17 ವರ್ಷಗಳ ಹಿಂದೆ ವಿವಾಹ ಆಗಿತ್ತು. ಇಬ್ಬರು ಮಕ್ಕಳೂ ಇದ್ದರು. ಕೌಟುಂಬಿಕ ಕಲಹ ಇವರ ಬಾಳ್ವೆಯ ಹದಗೆಡಿಸಿತ್ತು. ಲೋಕನಾಥ್ ಶಾಂತಿಗ್ರಾಮ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ.
ಕಳೆದ ನಾಲ್ಕೈದು ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ನಡೆದಿತ್ತು. ಇಂದು ಪತಿ ವಿರುದ್ಧ ದೂರು ನೀಡಲು ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣಕ್ಕೆ ಪತ್ನಿ ಬಂದಿದ್ದರು. ಇದರಿಂದ ಕ್ರುದ್ಧನಾದ ಕಾನ್‌ಸ್ಟೇಬಲ್ ಲೋಕನಾಥ್, ಪತ್ನಿಗೆ ಎಲ್ಲರ ಮುಂದೆಯೇ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾನೆ.
ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಮತಾ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿಗಾಗಿ ಹುಡುಕಾಟ ನಡೆದಿದೆ.
ರೌಡಿಯಾಗಲು ಹವಾ ಸೃಷ್ಟಿಸಿದ್ದವನನ್ನು ಇರಿದು ಕೊಂದರು!
ಬೆಂಗಳೂರು: ಬೆಂಗಳೂರಿನ ಪುಲಿಕೇಶಿನಗರದ ಅಪ್ಪು ಕೊಲೆ ಪ್ರಕರಣದಲ್ಲಿ (Murder case) ನಾಲ್ವರು ಆರೋಪಿಗಳ ಬಂಧನವಾಗಿದೆ. ರೌಡಿಯಾಗಬೇಕೆಂದು ಹೊರಟಿದ್ದ ಅಪ್ಪು ಎಂಬಾತನನ್ನು ಅದೇ ಏರಿಯಾದ ಹುಡುಗರ ಗ್ಯಾಂಗ್ ಕೊಂದು ಹಾಕಿತ್ತು.
ಮಹಾಲಕ್ಷ್ಮಿಲೇಔಟ್ ನಿವಾಸಿಯಾಗಿರುವ ಅಪ್ಪು ಹುಡುಗರ ಮೇಲೆ ದರ್ಪ ಮೆರೆದು ಹಲ್ಲೆ ನಡೆಸಿ ಕೊಲೆಗೆ ಸ್ಕೆಚ್ ಹಾಕಿದ್ದ. ಏರಿಯಾದಲ್ಲಿ ಹವಾ ತೋರಿಸಲು ಸಿಕ್ಕ ಸಿಕ್ಕವರಿಗೆ ಹೊಡಿತ್ತಿದ್ದ. ಅಪ್ಪುವಿನ ವರ್ತನೆಗೆ ಬೇಸತ್ತಿದ್ದ ಏರಿಯಾ ಹುಡುಗರು, ಮಾತನಾಡುವ ನೆಪದಲ್ಲಿ ಕರೆಸಿಕೊಂಡಿದ್ದರು.
ಜೀವನಹಳ್ಳಿ ರೈಲ್ವೆ ಟ್ರಾಕ್ ಬಳಿ ಬಂದಿದ್ದ ಅಪ್ಪು ಮೇಲೆ ಏಕಾಏಕಿ ನಾಲ್ಕೈದು ಮಂದಿ ದಾಳಿ ಮಾಡಿದ್ದರು. ಇವರಿಂದ ತಪ್ಪಿಸಿಕೊಳ್ಳಲು ಹೋದಾಗ ಅಪ್ಪುನನ್ನು ಅಟ್ಟಾಡಿಸಿಕೊಂಡು ಹೋಗಿ ಚಾಕುವಿನಿಂದ ಇರಿದು ಬಳಿಕ ತಲೆ ಮೇಲೆ ಕಲ್ಲುಎತ್ತಿ ಹಾಕಿ ಕೊಂದು ಹಾಕಿದ್ದರು.
ಕೃತ್ಯದ ಬಳಿಕ ಎಲ್ಲರೂ ತಲೆಮರೆಸಿಕೊಂಡಿದ್ದರು. ಇದೀಗ ಕೊಲೆಯಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪುಲಿಕೇಶಿನಗರ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Renuka swamy Murder : ರೇಣುಕಾಸ್ವಾಮಿ ಕೊಲೆ ಕೇಸ್‌ನ 17ನೇ ಆರೋಪಿಯಿಂದ ಜಾಮೀನು ಅರ್ಜಿ ಸಲ್ಲಿಕೆ