Site icon Vistara News

Murder Case: ಒಂಟಿ ಕೈ ರೌಡಿಯಿಂದ ಇನ್ನೊಬ್ಬ ರೌಡಿಯ ಕೊಚ್ಚಿ ಕೊಲೆ

rowdy sheeter murder case

ಬೆಂಗಳೂರು: ಬೆಂಗಳೂರಿನಲ್ಲಿ (Bangalore crime) ರೌಡಿ ಗ್ಯಾಂಗ್‌ಗಳ ಬೀದಿಜಗಳ, ಹಲ್ಲೆಗಳು ತಾರಕಕ್ಕೇರಿದ್ದು, ಹೆಣಗಳು ಬೀಳುತ್ತಿವೆ. ಒಂಟಿ ಕೈಯ ರೌಡಿಶೀಟರ್ (Rowdy Sheeter) ಒಬ್ಬನ ಗ್ಯಾಂಗ್ ಇನ್ನೊಬ್ಬ ರೌಡಿಶೀಟರ್‌ನನ್ನು ಬರ್ಬರವಾಗಿ ಕೊಚ್ಚಿ ಕೊಲೆ (Murder Case) ಮಾಡಿದೆ.

ಸಿದ್ಧಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಐಸಾಕ್ (30) ಮೃತಪಟ್ಟ ರೌಡಿಶೀಟರ್. ವೆಂಕಟೇಶ ಅಲಿಯಾಸ್ ಒಂಟಿ ಕೈ ವೆಂಕಟೇಶ ಎಂಬಾತನ ಗ್ಯಾಂಗ್‌, ಐಸಾಕ್‌ನನ್ನು ಸುತ್ತುಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಂದುಹಾಕಿದೆ.

ಡ್ರಗ್ಸ್ ಹಾವಳಿ ಹಾಗೂ ವಹಿವಾಟಿನ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ಮೂಡಿದೆ. ಮೃತ ಐಸಾಕ್ ಹಲವು ಕಡೆ ಡ್ರಗ್ಸ್, ಗಾಂಜಾ ಮಾರಾಟ ಮಾಡುತ್ತಿದ್ದ. ಇದನ್ನು ಒಂಟಿ ಕೈ ವೆಂಕಟೇಶ ವಿರೋಧಿಸಿದ್ದ. ವೆಂಕಟೇಶನ ಸ್ನೇಹಿತರಿಗೂ ಕೂಡ ಐಸಾಕ್ ಗಾಂಜಾ ನೀಡಿ ಅಡಿಕ್ಟ್ ಆಗುವಂತೆ ಮಾಡಿದ್ದ. ಒಂದೇ ಏರಿಯಾ ಆದ ಕಾರಣ ಹುಡುಗರು ಗಾಂಜಾ ಚಟಕ್ಕೆ ಬಿದ್ದಿದ್ದರು.

ಈ ಹಿನ್ನೆಲೆಯಲ್ಲಿ ಐಸಾಕ್‌ಗೆ ಒಂಟಿ ಕೈ ವೆಂಕಟೇಶ್ ವಾರ್ನ್ ಮಾಡಿದ್ದ. ಆದರೂ ಐಸಾಕ್ ಗಾಂಜಾ ಮಾರಾಟ ನಿಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಬೆಳಗಿನ ಜಾವ 3-30ರ ಸಂದರ್ಭದಲ್ಲಿ ಐಸಾಕ್‌ನನ್ನು ಕೊಲೆ ಮಾಡಲಾಗಿದೆ. ಸದ್ಯ ನಿಖರ ಕಾರಣ ಹಾಗು ಆರೋಪಿಗಳಿಗಾಗಿ ಸಿದ್ದಾಪುರ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಒಂಟಿ ಕೈ ವೆಂಕಟೇಶ್ ಈ ಹಿಂದೆ ನಾಲ್ಕು ಕೊಲೆ ಕೇಸುಗಳಲ್ಲಿ ಭಾಗಿಯಾಗಿದ್ದಾನೆ.

ಆಡಿ ಕಾರು ಮರಕ್ಕೆ ಡಿಕ್ಕಿಯಾಗಿ ಮೂವರು ಸಾವು

ಕೋಲಾರ: ಕೋಲಾರದ (Kolar news) ಹೊರವಲಯದಲ್ಲಿ ಭೀಕರ ದುರಂತ ಸಂಭವಿಸಿದೆ. ಆಡಿ ಕಾರ್ ಮರಕ್ಕೆ ಡಿಕ್ಕಿಯಾಗಿ (Audi Car Accident) ನಡೆದ ಭೀಕರ ಅಪಘಾತದಲ್ಲಿ (Road Accident) ಮೂವರು ವಿದ್ಯಾರ್ಥಿಗಳು (Students Death) ಸ್ಥಳದಲ್ಲೇ ಮೃತಪಟ್ಟಿದ್ದು, ಇತ್ತೊಬ್ಬ ಆಶ್ಚರ್ಯಕರ ರೀತಿಯಲ್ಲಿ ಬಚಾವ್ ಆಗಿದ್ದಾನೆ.

ಕೋಲಾರ ‌ಹೊರವಲಯದ ಬಂಗಾರಪೇಟೆ ಮುಖ್ಯ ರಸ್ತೆಯ ಸಹಕಾರ ನಗರ ಬಳಿ ಘಟನೆ ನಡೆದಿದೆ. ಮೃತರು ರೇವಾ ಯೂನಿವರ್ಸಿಟಿ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಮೃತರನ್ನು ಹಾಸನ ಮೂಲದ ಹರ್ಷವರ್ಧನ್, ಬಳ್ಳಾರಿ ಮೂಲದ‌ ಬಸವರಾಜ್ ಹಾಗೂ ಬಂಗಾರಪೇಟೆಯ ನಿಚ್ಚಲ್ ಎಂದು ಗುರುತಿಸಲಾಗಿದೆ.

ಬಂಗಾರಪೇಟೆ ಮೂಲದ ಸಾಯಿ ಗಗನ್ ಬಚಾವ್ ಆಗಿದ್ದಾನೆ. ಅಪಘಾತದ ರಭಸಕ್ಕೆ ಆಡಿ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಚಾವಾದ ಸಾಯಿಗಗನ್‌ ಮನೆಗೆ ಸ್ನೇಹಿತರು ಬಂದಿದ್ದರು. ಮನೆಯಿಂದ ಕೋಲಾರಕ್ಕೆ ಮರಳುವಾಗ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಅತಿ ವೇಗ ಕಾರಣ ಎನ್ನಲಾಗಿದೆ. ಮದ್ಯ ಸೇವನೆಯ ಸಾಧ್ಯತೆಯನ್ನು ಪೋಸ್ಟ್‌ ಮಾರ್ಟಂ ಮೂಲಕ ನಿರ್ಣಯಿಸಲಿದ್ದಾರೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಅಪಘಾತದ ಭೀಕರತೆಗೆ ಕಾರು ಚಿಂದಿಚಿಂದಿಯಾಗಿದೆ. ಕಾರಿನಲ್ಲಿದ್ದ ಏರ್‌ಬ್ಯಾಗ್‌ಗಳು ಕೂಡ ಚಿಂದಿಚಿಂದಿಯಾಗಿವೆ. ಸುಮಾರು 50 ಲಕ್ಷ ರೂಪಾಯಿ ಬೆಲೆಬಾಳುವ ಕಾರಿನಲ್ಲಿದ್ದ ಅಪಘಾತ ಸುರಕ್ಷತಾ ಕ್ರಮಗಳು ಕೆಲಸ ಮಾಡದಿರುವುದು ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ: PSI Death: ನಿನ್ನೆ ಬೀಳ್ಕೊಡುಗೆ ಪಡೆದ ಪಿಎಸ್‌ಐ ಇಂದು ಹೃದಯಾಘಾತದಿಂದ ಸಾವು; 30 ಲಕ್ಷ ರೂ. ಲಂಚಕ್ಕೆ ಶಾಸಕ ಒತ್ತಡ ಹಾಕಿದ್ದರಿಂದ ಖಿನ್ನತೆ?

Exit mobile version