Site icon Vistara News

Murder Case: ಹಫ್ತಾ ಕೊಡದ ಯುವಕನನ್ನು ಕೊಚ್ಚಿ ಕೊಂದ ರೌಡಿಗಳು; ಗುಂಡು ಹಾರಿಸಿ ಆರೋಪಿ ಬಂಧನ

murder case hassan

ಹಾಸನ: ಹಾಸನದಲ್ಲಿ (Hassan News) ಪುಡಿ ರೌಡಿಗಳು (Rowdy Sheeters) ನಡೆಸಿರುವ ಹಲ್ಲೆಯಲ್ಲಿ (Assault Case) ಯುವಕನೊಬ್ಬ ತೀವ್ರವಾಗಿ ಗಾಯಗೊಂಡು (Murder Case) ಸಾವಿಗೀಡಾಗಿದ್ದಾನೆ. ಪೊಲೀಸರು ಹಲ್ಲೆ ಆರೋಪಿಯ ಕಾಲಿಗೆ ಗುಂಡು ಹಾರಿಸಿ (Police Firing) ಬಂಧಿಸಿದ್ದಾರೆ. ನಂದಿನಿ ಪಾರ್ಲರ್‌ (Nandini Parlor) ನಡೆಸುತ್ತಿದ್ದ ಈ ಯುವಕನನ್ನು ರೌಡಿಗಳು ಹಣಕ್ಕಾಗಿ ಹಲವು ತಿಂಗಳಿಂದ ಪೀಡಿಸುತ್ತಿದ್ದರು ಎಂದು ಗೊತ್ತಾಗಿದೆ.

ನಿನ್ನೆ ಮುಂಜಾನೆ ಪುಡಿ ರೌಡಿಗಳಿಂದ ಹಲ್ಲೆಗೊಳಗಾಗಿದ್ದ ಯುವಕ ಸತೀಶ್‌ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ರಾತ್ರಿ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನಿನ್ನೆ ಬೆಳಗ್ಗೆ ಹಾಸನ ಹೊರವಲಯದ ಕೌಶಿಕ ಗೇಟ್ ಬಳಿ ಸತೀಶ್ ಮೇಲೆ ಮಾರಕಾಸ್ತ್ರಗಳಿಂದ ರೌಡಿಗಳು ಹಲ್ಲೆ ನಡೆಸಿದ್ದರು. ನಂದಿನಿ ಪಾರ್ಲರ್ ನಡೆಸುತ್ತಿದ್ದ ಸತೀಶ್, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಸತೀಶ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಆರೋಪಿ ಮೇಲೆ ಫೈರಿಂಗ್‌

ಹಲ್ಲೆ ಆರೋಪಿಗಳನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಆರೋಪಿ ಹಲ್ಲೆ ನಡೆಸಲು ಯತ್ನಿಸಿದ್ದು, ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿ ಸಮುದ್ರವಳ್ಳಿ ರಾಜು ಎಂಬಾತನನ್ನು ಬಂಧಿಸಲು ಹಾಸನ ತಾಲ್ಲೂಕಿನ ಕುಂತಿಬೆಟ್ಟಕ್ಕೆ ಪೊಲೀಸರು ತೆರಳಿದ್ದರು. ಈ ವೇಳೆ ಆತ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಪೊಲೀಸರು ಗುಂಡು ಹಾರಿಸಿ ಆತನನ್ನು ಗಾಯಗೊಳಿಸಿ ಬಂದಿಸಿದ್ದು, ನಂತರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಹಲ್ಲೆ ಆರೋಪಿ ರಾಜು ಈ ಹಿಂದೆ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ. ಕ್ಷುಲ್ಲಕ ಕಾರಣಕ್ಕೆ ಯುವಕ ಸತೀಶ್‌ ಮೇಲೆ ಈತನ ಗ್ಯಾಂಗ್‌ ಮಾರಣಾಂತಿಕವಾಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಹಲವಾರು ಅಪರಾಧಗಳಲ್ಲಿ ರಾಜು ಗ್ಯಾಂಗ್ ಭಾಗಿಯಾಗಿದೆ. ಘಟನೆ ಹಿಂದೆ ರೌಡಿಶೀಟರ್ ಸಮುದ್ರವಳ್ಳಿ ಅಶೋಕ್ ಕೈವಾಡವಿದೆ ಎಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ. ʼತಿಂಗಳುಗಳ ಹಿಂದೆಯೇ ಈ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಿದ್ದೆವು. ಹಣಕ್ಕಾಗಿ ಅನೇಕ ತಿಂಗಳುಗಳಿಂದ ರೌಡಿಗಳು ಪೀಡಿಸುತ್ತಿದ್ದರು. ಆದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲʼ ಎಂದು ಆಸ್ಪತ್ರೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವಕನ ತಾಯಿ, ಪೊಲೀಸರ ಎದುರೇ ಪೊಲೀಸರಿಗೆ ಧಿಕ್ಕಾರ ಕೂಗಿದ್ದಾರೆ.

ಹಿಂಬಾಲಿಸಿಕೊಂಡು ಬಂದು ಹಲ್ಲೆ ಮಾಡಲು ಯತ್ನ, ರಾಜಧಾನಿ ಸೇಫಲ್ಲ!

ಬೆಂಗಳೂರು: ಕಾರೊಂದನ್ನು ಹಿಂಬಾಲಿಸಿಕೊಂಡು ಬಂದ ಕೆಲ ಪುಂಡರು ಚಾಲಕನ ಮೇಲೆ ಹಲ್ಲೆಗೆ (Assault Case) ಯತ್ನಿಸಿದ್ದಾರೆ. ಬೈಕ್‌ನಲ್ಲಿ ಬಂದ ಪುಂಡರು ತಡರಾತ್ರಿ ಕಾರನ್ನು ಚೇಸ್‌ ಮಾಡಿ ಎರಡು ಬಾರಿ ಕಾರಿಗೆ ಅಡ್ಡ ಹಾಕಿ ಹಲ್ಲೆಗೆ ಯತ್ನಿಸಿದ್ದಾರೆ. ಕಾರಿನ ಗ್ಲಾಸ್ ಹೊಡೆದು ದರ್ಪ ಮೆರೆದಿದ್ದಾರೆ. ಬೆಂಗಳೂರಿನ ವಿಜಯನಗರ ಸಮೀಪ ಪುಂಡರ ಕ್ರೌರ್ಯಕ್ಕೆ ಚಾಲಕರು ಬೆಚ್ಚಿ ಬಿದ್ದಿದ್ದಾರೆ. ಕಾರಿನ ಅಕ್ಕ ಪಕ್ಕ ಬೈಕ್‌ಗಳಲ್ಲಿ ಸುಮಾರು ಒಂದೂವರೆ ಕಿಲೋ ಮೀಟರ್‌ವರೆಗೂ ಚೇಸ್‌ ಮಾಡಿದ್ದಾರೆ. ಕಾರಿನ ಡ್ಯಾಷ್ ಬೋರ್ಡ್‌ನಲ್ಲಿ ಪುಂಡರ ಅಟ್ಟಹಾಸ ಬಯಲಾಗಿದೆ. ಡ್ಯಾನ್ಸರ್ ಹಾಗು ಕೋರಿಯಾಗ್ರಾಫರ್ ಆಗಿರುವ ಅರವಿಂದ್ ಎಂಬುವವರ ಕಾರಿನ್ನು ಚೇಸ್‌ ಮಾಡಿ ಗ್ಲಾಸ್‌ ಹೊಡೆದು, ಹಲ್ಲೆಗೆ ಯತ್ನಿಸಿದ್ದಾರೆ. ವಿಜಯನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವ್ಹೀಲಿಂಗ್‌ ಮಾಡಿ ಬೆದರಿಕೆ ಹಾಕಿದ ಪುಂಡಾರು

ರಸ್ತೆಯಲ್ಲಿ ವ್ಹೀಲಿಂಗ್‌ ಮಾಡಿ ಪುಂಡಾಟ ಮಾಡಿದ್ದಲ್ಲದೇ ಬೆದರಿಸಿ ಹಲ್ಲೆಗೆ ಯತ್ನಿಸಿದ ಕಿರಾತಕರನ್ನು ಪೊಲೀಸರು ಬಂಧಿಸಿದ್ದಾರೆ. ಕ್ರಿಮಿನಲ್ ಅಫೆನ್ಸ್ ಎಂಬ ಕಾರಣಕ್ಕೆ ಲಾ ಆ್ಯಂಡ್ ಆರ್ಡರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಇಬ್ಬರು ಅಪ್ರಾಪ್ತರು ಸೇರಿ ಸಂಜಯ್ ಎಂಬ ಯುವಕನನ್ನು ಬಂಧಿಸಲಾಗಿದೆ. ಸಿಲ್ಕ್ ಬೋರ್ಡ್ ಬಳಿ ಇರುವ ಹೊಸ ಫ್ಲೈ ಓವರ್ ಸಮೀಪ ಈ ಮೂವರು ವ್ಹೀಲಿಂಗ್‌ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಹೊರತು ಪಡಿಸಿ ಲಾ ಆ್ಯಂಡ್ ಆರ್ಡರ್‌ನಲ್ಲಿ ಕೇಸ್ ದಾಖಲು ಮಾಡಲಾಗಿತ್ತು. ಇದೀಗ ಸುಮೋಟೋ ಕೇಸ್ ದಾಖಲಿಸಿ ಸುದ್ಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Police Firing: ದರೋಡೆ, ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಸೆರೆ

Exit mobile version