Site icon Vistara News

Murder Case : ಪತಿಯ ಡೆಡ್ಲಿ ಅಟ್ಯಾಕ್‌ಗೆ ಪತ್ನಿ ಸಾವು; ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ

Murder case

ರಾಮನಗರ/ಯಾದಗಿರಿ: ರಾಮನಗರದ (Ramanagar News) ದೊಡ್ಡ ಮುದುವಾಡಿ ಗ್ರಾಮದಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ (Murder case) ನಡೆದಿದೆ. ರಾಜೇಶ್ ಎಂಬಾತ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದು, ಮಹಿಳೆ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಕನಕಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಆರೋಪಿಗಾಗಿ ಹುಡುಕಾಟ ನಡೆದಿದ್ದು, ಯಾಕಾಗಿ ಹತ್ಯೆ ನಡೆದಿದೆ ಎಂಬುದು ತಿಳಿದು ಬಂದಿಲ್ಲ.

ರೈಲಿಗೆ ತಲೆ ಕೊಟ್ಟು ಯುವಕ ಸೂಸೈಡ್‌

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಯರಗೊಪ್ಪ ಸಮೀಪ ರೈಲಿಗೆ ತಲೆ ಕೊಟ್ಟು ಅಪರಿಚಿತ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೈಲು ಹರಿದು ರುಂಡ, ಮುಂಡ ಬೇರೆ ಬೇರೆಯಾಗಿದೆ. ಯುವಕನ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Drowned in water : ಕೆರೆಯಲ್ಲಿ ಈಜುವ ಸವಾಲು; ಜೋಶ್‌ನಲ್ಲಿ ನೀರಿಗೆ ಇಳಿದ ಟೆಕ್ಕಿ ಮೃತ್ಯು

ಯಾದಗಿರಿಯಲ್ಲಿ ಯುವಕನನ್ನು ಅಟ್ಟಾಡಿಸಿ ಹೊಡೆದ ಗುಂಪು

ಯಾದಗಿರಿಯ ಸೈದಾಪುರ ಪಟ್ಟಣದಲ್ಲಿ ಹತ್ತಾರ ಜನರ ಗುಂಪೊಂದು ಮಾರಕಾಸ್ತ್ರ ಹಾಗೂ ದೊಣ್ಣೆಗಳಿಂದ ಯುವಕನ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಲಾಗಿದೆ. ಭಾನುವಾರ ನಸುಕಿನ ಜಾವ ಘಟನೆ ನಡೆದಿದೆ.

ಒಂದು ಸಮುದಾಯದ ಯುವಕರ ಗುಂಪಿನಿಂದ ಮತ್ತೊಂದು ಸಮುದಾಯದ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಸಾಬಣ್ಣ ಆನಂಪಲ್ಲಿ ಹಲ್ಲೆಗೊಳಾದವರು. ನಸುಕಿನ ಜಾವ ಸಾಬಣ್ಣ ಎಂದಿನಂತೆ ಜಮೀನಿಗೆ ತೆರಳುತ್ತಿದ್ದರು. ಈ ವೇಳೆ ಸೈದಾಪುರ ಪಟ್ಟಣದ ಹೊರಭಾಗದಲ್ಲಿ ಯುವಕರ ಗುಂಪು ಕಾದು ಕುಳಿತು ಸಾಬಣ್ಣ ಬರುತ್ತಿದ್ದಂತೆ ಮನಬಂದಂತೆ ಹಲ್ಲೆ ಮಾಡಿ ಪರಾರಿ ಆಗಿದ್ದಾರೆ.

ಇನ್ನೂ ಗಂಭೀರ ಗಾಯಗೊಂಡಿದ್ದ ಸಾಬಣ್ಣನನ್ನು ರಾಯಚೂರುನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಳೆ ದ್ವೇಷಕ್ಕೆ ಸಾಬಣ್ಣನ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ. 15 ದಿನಗಳ ಹಿಂದೆ ಮದುವೆ ಮೆರವಣಿಗೆ ವಿಚಾರದಲ್ಲಿ ಯುವಕರ ಗ್ಯಾಂಗ್ ಹಾಗೂ ಸಾಬಣ್ಣ ನಡುವೆ ಜಗಳವಾಗಿತ್ತು. ಈ ಸಂಬಂಧ ಸೈದಾಪುರ ಠಾಣೆಯಲ್ಲಿ ಕೂಡ ಕೇಸ್ ದಾಖಲಾಗಿತ್ತು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಸಾಬಣ್ಣನ ಮೇಲೆ ಹಲ್ಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version