ಮೈಸೂರು: ಮೈಸೂರಿನಲ್ಲಿ ಗುರಾಯಿಸಿದ್ದಕ್ಕೆ ಯುವಕನ (Murder case) ಕೊಲೆಯಾಗಿದೆ. ಯುವಕನ ಸಾವಿನ ಕೊನೆ ಕ್ಷಣದ ವಿಡಿಯೊಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅರ್ಬಾಜ್ ಖಾನ್ (18) ಕೊಲೆಯಾದವನು.
ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರದಲ್ಲಿ ಘಟನೆ ನಡೆದಿದೆ. ಶಾಂತಿನಗರದ ಲಾಲ್ ಮಸೀದಿ ಬಳಿ ಅರ್ಬಾಜ್ ಖಾನ್ ಗುರಾಯಿಸಿದ ಎಂಬ ಕಾರಣಕ್ಕೆ ಯುವಕರ ಮಧ್ಯೆ ಗಲಾಟೆ ಶುರುವಾಗಿತ್ತು. ಗಲಾಟೆ ವಿಕೋಪಕ್ಕೆ ತಿರುಗಿತ್ತು. ನೋಡನೋಡುತ್ತಲೇ ನಾಲ್ವರು ಆರೋಪಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಈ ವೇಳೆ ಕುತ್ತಿಗೆಗೆ ಸೀಳಿದ ಕಾರಣಕ್ಕೆ ಅರ್ಬಾಜ್ ಖಾನ್ ನಡುರಸ್ತೆಯಲ್ಲಿ ರಕ್ತಕಾರುತ್ತಾ ಒದ್ದಾಡುತ್ತಿದ್ದ. ಸ್ಥಳೀಯ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು, ಕೂಡಲೇ ಆಟೋದಲ್ಲಿ ಗಾಯಾಳು ಅರ್ಬಾಜ್ ಖಾನ್‌ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಯಲ್ಲಿ ಅರ್ಬಾಜ್ ಖಾನ್ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಇನ್ನೂ ಪರಸ್ಪರ ಗಲಾಟೆಯಲ್ಲಿ ಆರೋಪಿ ಶಹಬಾಜ್ ಎಂವಾತನಿಗೂ ಗಾಯವಾಗಿದ್ದ, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಪ್ರಕರಣ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: Shatru Bhairavi Yaga: ಶತ್ರು ಭೈರವಿ ಯಾಗ ನಡೆದಿಲ್ಲ, ಪ್ರಾಣಿಬಲಿಯೂ ಇಲ್ಲ: ಕೇರಳ ಸರಕಾರದಿಂದಲೇ ತನಿಖೆ, ಸ್ಪಷ್ಟನೆ
ಬಿಹಾರದಲ್ಲಿ ಬಿಸಿಲಾಘಾತ; ಶಾಖಕ್ಕೆ 10 ಮತಗಟ್ಟೆ ಸಿಬ್ಬಂದಿ ಸೇರಿ 14 ಮಂದಿ ಬಲಿ
ಪಟನಾ: ದೇಶದಲ್ಲಿ ಕಂಡು ಕೇಳರಿಯದ ಪ್ರಮಾಣದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದೆ. ಜತೆಗೆ ಉತ್ತರ ಭಾರತದ ವಿವಿಧ ಭಾಗದಲ್ಲಿ ಬಿಸಿಗಾಳಿ (Heat Wave) ಬೀಸುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲಿಯೂ ಬಿಹಾರ(Bihar)ದಲ್ಲಿ ಬಿಸಿಗಾಳಿಯ ಶಾಖಕ್ಕೆ ಜನ ತತ್ತರಿಸಿ ಹೋಗಿದ್ದಾರೆ. 24 ಗಂಟೆಗಳಲ್ಲಿ 10 ಮತಗಟ್ಟೆ ಸಿಬ್ಬಂದಿ ಸೇರಿ ಸುಮಾರು 14 ಮಂದಿ ಬಿಸಿಲಿನ ಶಾಖಕ್ಕೆ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಪತ್ತು ನಿರ್ವಹಣಾ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ಈ ವಿವರಗಳನ್ನು ನೀಡಲಾಗಿದೆ. ಹೆಚ್ಚಿನ ಸಾವು ನೋವು ಭೋಜ್‌ಪುರದಲ್ಲಿ ನಡೆದಿದ್ದು, ಅಲ್ಲಿ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ 5 ಮಂದಿ ಮೃತಪಟ್ಟಿದ್ದಾರೆ. ರೋಹ್ಟಾಸ್‌ನಲ್ಲಿ ಮೂವರು ಚುನಾವಣಾ ಅಧಿಕಾರಿಗಳು, ಕೈಮೂರ್ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಜೀವ ಕಳೆದುಕೊಂಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
#WATCH | Sasaram, Bihar: Security personnel deployed at a polling station fall ill due to extreme temperatures.
— ANI (@ANI) May 31, 2024
Sadar Hospital's Dr Ajeet Kumar says, "Due to the heatwave and excessive temperatures, the security personnel suffered heat stroke. 1-2 out of them are in a serious… pic.twitter.com/p3chzCXyIN
ಇದನ್ನೂ ಓದಿ: Heat Wave: ಬಿಸಿಗಾಳಿ ಶಾಖಕ್ಕೆ ಉತ್ತರ ಭಾರತ ಸಂಪೂರ್ಣ ತತ್ತರ; ಎಮರ್ಜೆನ್ಸಿ ಘೋಷಣೆ ಆಗುತ್ತಾ?
ಜತೆಗೆ ರಾಜ್ಯದ ವಿವಿಧ ಭಾಗಳಲ್ಲಿಯೂ ಅನೇಕರು ಬಿಸಿಲಿನ ಝಳಕ್ಕೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ. ರಾಜ್ಯದ ಹಲವೆಡೆ ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಗುರುವಾರ ಬಕ್ಸಾರ್‌ನಲ್ಲಿ ಅತೀ ಹೆಚ್ಚು 47.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಬಿಸಿ ಗಾಳಿ ವ್ಯಾಪಕವಾಗಿ ಬೀಸುತ್ತಿರುವ ಪರಿಣಾಮ ಎಲ್ಲ ಶಾಲೆಗಳು, ಕೋಚಿಂಗ್ ಸೆಂಟರ್‌ಗಳು ಮತ್ತು ಅಂಗನವಾಡಿಗಳಿಗೆ ಜೂನ್ 8ರ ತನಕ ರಜೆ ಸಾರಲಾಗಿದೆ.
ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಶಾಲೆಗಳಿಗೆ ಶಿಕ್ಷಕರು ಬರಬೇಕು ಎನ್ನುವ ಸರ್ಕಾರದ ಆದೇಶದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ “ಪ್ರತಿಪಕ್ಷಗಳ ಒತ್ತಡದಿಂದಾಗಿ ಸರ್ಕಾರಿ ಶಾಲೆಗಳನ್ನು ಈಗಾಗಲೇ ಮುಚ್ಚಲಾಗಿದೆ. ಈ ತೀವ್ರ ಶಾಖದ ಅಲೆ ಎಲ್ಲೆಡೆ ವ್ಯಾಪಿಸಿರುವಾಗ ಶಿಕ್ಷಕರನ್ನು ಶಾಲೆಗಳಿಗೆ ಬರಲು ಏಕೆ ಹೇಳಲಾಗುತ್ತಿದೆ? ವಿದ್ಯಾರ್ಥಿಗಳು ಸ್ವತಃ ಶಾಲೆಯಲ್ಲಿ ಇಲ್ಲದಿದ್ದಾಗ ಶಿಕ್ಷಕರು ಏನು ಮಾಡುತ್ತಾರೆ? ಈ ಸುಡುವ ಬಿಸಿಲಿನಲ್ಲಿ ಶಿಕ್ಷಕರಿಗೂ ರಜೆ ನೀಡಬೇಕುʼʼ ಎಂದು ಆಗ್ರಹಿಸಿದ್ದಾರೆ. ಲೋಕಸಭಾ ಚುನಾವಣೆ ಕೊನೆಯ ಹಂತದ ಮತದಾನ ಇಂದು (ಶನಿವಾರ) ನಡೆಯುತ್ತಿದ್ದು, ಉಷ್ಣಾಂಶದ ಹೆಚ್ಚಳ ಪರಿಣಾಮ ಬೀರುವ ಸಾಧ್ಯತೆ ಇದೆ.
ನಾಗ್ಪುರದಲ್ಲಿ 56 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಾಖಲೆಯ 52.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿರುವ ಎರಡು ದಿನಗಳ ನಂತರ ಮಹಾರಾಷ್ಟ್ರದ ನಾಗ್ಪುರದಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ಮೀರಿದೆ. ಗುರುವಾರ ಇದು 56 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರದ ಉತ್ತರ ಅಂಬಾಜಾರಿ ರಸ್ತೆಯ ರಾಮದಾಸ್ಪೇಟ್ನ ಪಿಡಿಕೆವಿಯಲ್ಲಿರುವ 24 ಹೆಕ್ಟೇರ್ ತೆರೆದ ಕೃಷಿ ಕ್ಷೇತ್ರದಲ್ಲಿರುವ ಹವಾಮಾನ ಕೇಂದ್ರದಲ್ಲಿ 56 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಸೋನೆಗಾಂವ್ನ ಪ್ರಾದೇಶಿಕ ಹವಾಮಾನ ಕೇಂದ್ರದಲ್ಲಿ 54 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಿಸಿದೆ. ವಾರ್ಧಾ ರಸ್ತೆಯ ಖಾಪ್ರಿಯಲ್ಲಿರುವ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕಾಟನ್ ರಿಸರ್ಚ್ ಪ್ರದೇಶದ ಹೊಲಗಳಲ್ಲಿನ ಅಂಗನವಾಡಿ ಕೇಂದ್ರವು 44 ಡಿಗ್ರಿ ಸೆಲ್ಸಿಯಸ್ ಮತ್ತು ರಾಮ್ಟೆಕ್ ಎಡಬ್ಲ್ಯೂಎಸ್ 44 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ