ಮೈಸೂರು: ಸಾಲಗಾರರ ಕಿರುಕುಳಕ್ಕೆ ಬೇಸತ್ತು ಡೆತ್‌ನೋಟ್ (Death note) ಬರೆದು ನಾಪತ್ತೆಯಾಗಿದ್ದ ಆಟೋ ಡ್ರೈವರ್ ಶವವಾಗಿ ಪತ್ತೆಯಾಗಿದ್ದಾರೆ. ಮೈಸೂರಿನ (Mysuru News) ಹುಣಸೂರು ತಾಲೂಕಿನ ಕುಟ್ಟುವಾಡಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಆಟೋ ಡ್ರೈವರ್ ಪ್ರಸಾದ್ (40) ನಾಪತ್ತೆಯಾಗಿದ್ದವರು.
ಕಳೆದ ಜುಲೈ 20 ರಂದು ಕಟ್ಟುವಾಡಿಯಿಂದ ಪ್ರಸಾದ್ ಕಾಣೆಯಾಗಿದ್ದರು. ಎಚ್.ಡಿ.ಕೋಟೆಯ ಸರಗೂರಿನ ಕಪಿಲಾ ನದಿ ದಂಡೆ ಸೋಮೇಶ್ವರ ದೇವಸ್ಥಾನದ ಬಳಿ ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಪ್ರಸಾದ್ ಡೆತ್‌ನೋಟ್ ಆಟೋದಲ್ಲಿ ಇಟ್ಟು ನಾಪತ್ತೆಯಾಗಿದ್ದರು. ಪ್ರಸಾದ್ ನಾಪತ್ತೆಯಿಂದಾಗಿ ಕುಟುಂಬಸ್ಥರು ಕಂಗಾಲಾಗಿದ್ದರು. ಈ ಸಂಬಂಧ ಬಿಳಿಕೆರೆ ಪೊಲೀಸರು ಮಿಸ್ಸಿಂಗ್ ಕೇಸ್ ದಾಖಲಾಗಿದ್ದು, ಪ್ರಸಾದ್‌ಗಾಗಿ ಶೋಧ ನಡೆಸುತ್ತಿದ್ದರು. ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ಫೈನಾನ್ಸ್ ಮಧು, ಟೆಂಪೋ ಕಿರಣ್ ಕಾರಣ ಎಂದು ಉಲ್ಲೇಖಿಸಿದ್ದರು.
ಫೈನಾನ್ಸ್ ಮಧು ಬಳಿ ಕಿರಣ್ ಜಾಮೀನು ನೀಡಿ ಹಣ ಸಾಲ ಕೊಡಿಸಿದ್ದ.ನಿಗದಿತ ಸಮಯಕ್ಕೆ ಹಣ ಹಿಂದಿರುಗಿಸಿಲ್ಲ. ಹೀಗಾಗಿ ಕಿರಣ್ ಆಗಾಗ್ಗೆ ಮನೆಗೆ ಬಂದು ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಪ್ರಸಾದ್ ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದ.
ಎಚ್.ಡಿ.ಕೋಟೆ ಸರಗೂರಿನಲ್ಲಿ ಪ್ರಸಾದ್ ಮೃತದೇಹ ದೊರೆತಿದೆ. ಸರಗೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: Dog Meat: ಅಬ್ದುಲ್ ರಜಾಕ್ ತರಿಸುವ ಮಾಂಸದ ಮೇಲೆ ಹೆಚ್ಚುತ್ತಿದೆ ಅನುಮಾನ! ಹಲವು ಹೋಟೆಲ್ ಮಾಲಿಕರಿಗೆ ನೋಟೀಸ್
ಕೈ ಕಟ್ ಮಾಡಿದ ರೌಡಿಗಳ ಕಾಲಿಗೆ ಪೊಲೀಸರ ಗುಂಡೇಟು
ರಾಮನಗರ: ಬೆಳ್ಳಂಬೆಳಿಗ್ಗೆ ರೌಡಿಶೀಟರ್‌ಗಳ (Rowdysheeters) ಮೇಲೆ ಕನಕಪುರ ನಗರ ಪೊಲೀಸರು (Kanakapura Police) ಗುಂಡು ಹಾರಿಸಿ (Police Firing) ಬಂಧಿಸಿದ್ದಾರೆ. ವ್ಯಕ್ತಿಯೊಬ್ಬನ ಕೈ ಕತ್ತರಿಸಿ (Assault Case) ಪರಾರಿಯಾಗಿದ್ದ ರೌಡಿಗಳನ್ನು ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.
ಕನಕಪುರ ಟೌನ್ ಸಿಪಿಐ ಮಿಥುನ್ ಶಿಲ್ಪಿ ಹಾಗೂ ಪಿಎಸ್ಐ ಮನೋಹರ್ ಅವರಿಂದ ಫೈರಿಂಗ್ ನಡೆದಿದೆ. ಹರ್ಷ ಅಲಿಯಾಸ್ ಕೈಮ, ಕರುಣೇಶ್ ಅಲಿಯಾಸ್ ಕಣ್ಣ ಗಾಯಗೊಂಡ ರೌಡಿಶೀಟರ್‌ಗಳು. ಕಗ್ಗಲೀಪುರದ ವ್ಯಾಲಿ ಸ್ಕೂಲ್ ರೋಡ್ ಬಳಿ ಪೊಲೀಸರಿಂದ ಫೈರಿಂಗ್ ನಡೆದಿದೆ.
ಕಳೆದ ವಾರ ಕನಕಪುರದ ಮಾಳಗಾಳು ಬಡಾವಣೆಯಲ್ಲಿ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಒಬ್ಬ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಕೈ ಕಟ್ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಆರೋಪಿಗಳನ್ನು ಬಂಧಿಸುವಂತೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇಂದು ಮುಂಜಾನೆ ಆರೋಪಿಗಳನ್ನು ಬಂಧಿಸಲು ಪೊಲೀಸರು ಹೋಗಿದ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಈ ರೌಡಿಗಳು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹೊಡೆದು ಅವರನ್ನು ಬಂಧಿಸಿದ್ದಾರೆ. ಹಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ರಾಜಶೇಖರ್, ಶಿವಕುಮಾರ್ ಎಂಬವರಿಗೂ ಗಾಯಗಳಾಗಿವೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ