Site icon Vistara News

PFI | ಕೆ.ಜೆ ಹಳ್ಳಿ ಪೊಲೀಸರಿಂದ ಪಿಎಫ್‌ಐ ವಿಚಾರಣೆ ವೇಳೆ ಕರಾಳ ಸಂಚು ಬಯಲು, ವಿಧ್ವಂಸಕ ಕೃತ್ಯಗಳಿಗೆ ತರಬೇತಿ

pfi ban

ಬೆಂಗಳೂರು: ಬೆಂಗಳೂರಿನ ಕೆ.ಜೆ.ಹಳ್ಳಿ ಪೊಲೀಸರಿಂದ, ನಿಷೇಧಿತ ಪಿಎಫ್ ಐ ( PFI ) ಮುಖಂಡರ ಬಂಧನ ಹಾಗೂ ವಿಚಾರಣೆಯ ವೇಳೆ, ಸಂಘಟನೆಯ ಕರಾಳ ಸಂಚು ಬಯಲಾಗಿದೆ.

ಬಂಧಿತ ಪಿಎಫ್ ಐ ಮುಖಂಡರು, ಭವಿಷ್ಯದ ದಿನಗಳಲ್ಲಿ ಭಾರಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಿದ್ಧತೆ ನಡೆಸುತ್ತಿದ್ದರು. ಇದಕ್ಕಾಗಿ ಸಂಘಟನೆಯ ಯುವಕರನ್ನು ಸಜ್ಜುಗೊಳಿಸಲಾಗುತ್ತಿತ್ತು ಎಂಬುದು ಗೊತ್ತಾಗಿದೆ.

ಹೆಲ್ತ್ ಇಂಡಿಯಾ , ಫಿಟ್ ಇಂಡಿಯಾ ಎಂಬ ಸೋಗಿನಲ್ಲಿ ಯುವಕರನ್ನು ಸೇರಿಸಿ ಅವರಿಗೆ ಕರಾಳ ಕೃತ್ಯಗಳನ್ನು ಎಸಗಲು ತರಬೇತಿ ನೀಡಲಾಗುತ್ತಿತ್ತು.

ಪಿಎಫ್ ಐ ಕಾರ್ಯಕರ್ತರನ್ನು ಸಜ್ಜುಗೊಳಿಸುತ್ತಿದ್ದ ಆರೋಪಿಗಳು 45 ಸಾವಿರ ಸದಸ್ಯರಿಗೆ ತರಬೇತಿ ನೀಡಲು ಉದ್ದೇಶಿಸಿದ್ದರು. ಆರೋಪಿಗಳ ವಿಚಾರಣೆ ವೇಳೆ ಹೆಲ್ತ್ ಇಂಡಿಯಾ ಫಿಟ್ ಇಂಡಿಯಾ ರಹಸ್ಯ ಬಯಲಾಗಿದೆ. ಪಿಎಫ್‌ಐನ ಮಂಗಳೂರು, ವಿಟ್ಲ ಮೀಟಿಂಗ್ ಸೆಂಟರ್‌ಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಜರ್ ನಡೆಸಲಾಗಿದೆ. ಯುವಕರನ್ನು ಬಳಸಿಕೊಂಡು ಕೋಮು ಗಲಭೆ ಸೃಷ್ಠಿಸಲು ನಡೆಸಿದ್ದ ಸಂಚು ಬಯಲಾಗಿದೆ.

Exit mobile version