Site icon Vistara News

Physical Abuse: ಪಬ್‌ನಲ್ಲಿ ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ ನಾಲ್ವರ ಬಂಧನ

pub physical abuse

ಮಂಗಳೂರು: ಪಬ್‌ನಲ್ಲಿ (Pub) ಯುವತಿಯ ಮೇಲೆ ಅತ್ಯಾಚಾರಕ್ಕೆ (Physical Abuse) ಯತ್ನಿಸಿದ ನಾಲ್ವರನ್ನು ಬಂಧಿಸಲಾಗಿದೆ. ಮಂಗಳೂರಿನ (Mangalore news) ಪಾಂಡೇಶ್ವರ ಫೋರಮ್ ಮಾಲ್‌ನಲ್ಲಿರುವ ಶೆರ್‌ಲ್ಯಾಕ್ ಪಬ್‌ನಲ್ಲಿ ಘಟನೆ ನಡೆದಿತ್ತು.

ಸ್ನೇಹಿತೆಯೊಂದಿಗೆ ಪಬ್‌ಗೆ ಬಂದಿದ್ದ ಯುವತಿಯ ಮಾನಭಂಗ ಯತ್ನ ಮಾಡಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು ಬಿಯರ್ ಬಾಟ್ಲಿಯಲ್ಲಿ ಹಲ್ಲೆ ನಡೆಸಲು ನಾಲ್ವರು ಯತ್ನಿಸಿದ್ದರು. ಇವರನ್ನು ಪುತ್ತೂರಿನ ವಿನಯ (33), ಮಹೇಶ್ (27), ಪ್ರಿತೇಶ್ (34) ಹಾಗೂ ನಿತೇಶ್ (33) ಎಂದು ಗುರುತಿಸಲಾಗಿದೆ. ಇವರನ್ನು ಬಂಧಿಸಲಾಗಿದ್ದು, ಯುವತಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಾಂಡೇಶ್ವರ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ.

ಕುಡಿದ ಅಮಲಿನಲ್ಲಿ ತಾಯಿಯ ಮೇಲೇ ಅತ್ಯಾಚಾರಗೈದ ಪಾಪಿ ಮಗ

ಚಿಕ್ಕಬಳ್ಳಾಪುರ: ಹೆತ್ತ ತಾಯಿಯ (Mother) ಮೇಲೆಯೇ ಮಗ (Son) ಅತ್ಯಾಚಾರ (Physical Abuse) ಮಾಡಿ ಹತ್ಯೆಗೆ (Murder Attempt) ಯತ್ನಿಸಿ ವಿಕೃತಿ ಮೆರೆದ ಪೈಶಾಚಿಕ ಘಟನೆ ಚಿಕ್ಕಬಳ್ಳಾಪುರ (Chikkaballapur news) ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ನಡೆದಿದೆ.

ಗುಡಿಬಂಡೆ ತಾಲ್ಲೂಕಿನ ಚಿನ್ನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಅಶೋಕ್‌ ಎಂಬಾತ ಅತ್ಯಾಚಾರ ಮಾಡಿ ತಾಯಿಯ ಕೊಲೆಗೆ ಯತ್ನಿಸಿದ ಪಾಪಿ ಮಗ. ಕುಡಿದ ಅಮಲಿನಲ್ಲಿ ಪಾತಕಿ ಅಶೋಕ್‌ ಈ ಕೃತ್ಯ ಎಸಗಿದ್ದಾನೆ. ನಿನ್ನೆ ರಾತ್ರಿ ಕುಡಿದ ಅಮಲಿನಲ್ಲಿ ಹೆತ್ತ ತಾಯಿಯನ್ನು ವಿವಸ್ತ್ರಗೊಳಿಸಿ ತಿಪ್ಪೆಯಲ್ಲಿ ಎಳೆದೊಯ್ದು ಕೃತ್ಯ ಎಸಗಿದ್ದಾನೆ.

ಟಿಪ್ಪರ್ ಲಾರಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ ಅಶೋಕ, ಆಗಾಗ ಬಂದು ಜಗಳವಾಡುತ್ತಿದ್ದ. ಅಶೋಕನಿಗೆ ಮದುವೆಯಾಗಿದ್ದು, ಈತನ ವಿಕೃತಿ ಹಾಗೂ ಕಿರುಕುಳ ತಾಳಲಾರದೆ ಪತ್ನಿ ಮನೆ ಬಿಟ್ಟು ಹೋಗಿದ್ದರು. ತಾಯಿ ಚಿನ್ನಮ್ಮ ಅರವತ್ತು ವರ್ಷದವರಾಗಿದ್ದು, ಮಗನಿಂದ ಅತ್ಯಾಚಾರಕ್ಕೊಳಗಾಗಿ ಗಾಯಗೊಂಡು ಸದ್ಯ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೃತ್ಯದ ನಂತರ ತಾಯಿಯನ್ನು ತಿಪ್ಪೆಯಲ್ಲಿಯೇ ಬಿಟ್ಟು ಮಗ ಪರಾರಿಯಾಗಿದ್ದಾನೆ. ತಂದೆ ಹಾಗೂ ಸಹೋದರ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆತಂದಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿದಿಸಿ ತನಿಖೆ ನಡೆಸುತ್ತಿದ್ದಾರೆ.

ಶಾಲಾ ವ್ಯಾನ್‌ಗೆ ಶಿಕ್ಷಕ ಬಲಿ

ವಿಜಯನಗರ: ಬೈಕ್ ಹಾಗೂ ಶಾಲಾ ವಾಹನದ ಮಧ್ಯೆ ಅಪಘಾತ (Road Accident) ಸಂಭವಿಸಿದ್ದು, ಶಿಕ್ಷಕರೊಬ್ಬರು ಮೃತಪಟ್ಟಿದ್ದಾರೆ. ಸರ್ಕಾರಿ ಶಾಲೆಯ ಹಿಂದಿ ಶಿಕ್ಷಕ ಮುನಿಯಪ್ಪ (55) ಮೃತ ದುರ್ದೈವಿ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕುಪ್ಪಿನಕೇರಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಮುನಿಯಪ್ಪನವರು ಅಮ್ಮನಕೇರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದರು. ಮೂಲತಃ ಹರಪನಹಳ್ಳಿ ತಾಲೂಕಿನ ಉಂಚಳ್ಳಿ ಗ್ರಾಮದವದ ಮುನಿಯಪ್ಪ ಅವರು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗೆ ಕೊಠಡಿ ನಿರೀಕ್ಷಕರಾಗಿ ಕರ್ಥವ್ಯಕ್ಕೆ ನಿಯೋಜನೆ ಆಗಿದ್ದರು.

ಇದನ್ನೂ ಓದಿ: Murder Case : ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ; ಕೈ-ಕಾಲು ಬಿಗಿದು, ಕಲ್ಲು ಕಟ್ಟಿ ಕೆರೆಗೆ ಎಸೆದ ಹಂತಕರು

Exit mobile version