ಭೋಪಾಲ್: ಮಧ್ಯಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, 10ನೇ ತರಗತಿಯ ವಿದ್ಯಾರ್ಥಿನಿಯನ್ನು ಅಪಹರಿಸಿ, ಹಲ್ಲೆ ನಡೆಸಿ, ಸಾಮೂಹಿಕ ಅತ್ಯಾಚಾರ (Physical Abuse) ಎಸಗಲಾಗಿದೆ. ಗ್ವಾಲಿಯರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ (Crime News).
ಘಟನೆ ಸೋಮವಾರ (ಜನವರಿ 29) ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರ ಎಸಗಿದ ಬಳಿಕ ಪಾಪಿಗಳು ಅಪ್ರಾಪ್ತೆಯನ್ನು ಸೇತುವೆಯೊಂದರ ಬಳಿ ಇರಿಸಿ ತೆರಳಿದ್ದರು. ಆರೋಪಿಗಳು ಯಾರೆನ್ನುವುದು ತಿಳಿದು ಬಂದಿದೆ. ಆದರೆ ಅವರೆಲ್ಲ ಪರಾರಿಯಾಗಿದ್ದು, ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡ ಬಾಲಕಿ
ʼʼಘಟನೆಯಿಂದ ಬಾಲಕಿಗೆ ತೀವ್ರವಾದ ಗಾಯಗಳಾಗಿವೆ. ಬಾಲಕಿಯನ್ನು ಗಂಭೀರ ಸ್ಥಿತಿಯಲ್ಲಿ ಗ್ವಾಲಿಯರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆʼʼ ಎಂದು ತನಿಖಾಧಿಕಾರಿ ಯಶವಂತ್ ಗೋಯಲ್ ತಿಳಿಸಿದ್ದಾರೆ. ʼʼಆಕೆಯ ಪಕ್ಕೆಲುಬುಗಳು ಮತ್ತು ಕಾಲುಗಳು ಮುರಿದಿದ್ದು, ಖಾಸಗಿ ಭಾಗಗಳಲ್ಲಿ ಆಳವಾದ ಗಾಯಗಳಾಗಿವೆʼʼ ಎಂದು ಅವರು ಹೇಳಿದ್ದಾರೆ. ಸದ್ಯ ಆಕೆಗೆ ಚಿಕಿತ್ಸೆ ಮುಂದುವರಿದಿದೆ.
ʼʼಬುಧವಾರ ಬಾಲಕಿಗೆ ಪ್ರಜ್ಞೆ ಮರಳಿ ಬಂದಿದ್ದು, ಆಕೆಯ ಹೇಳಿಕೆ ದಾಖಲಿಸಿ ದೂರು ಸ್ವೀಕರಿಸಲಾಗಿದೆ. ಅಪರಾಧಿಗಳಿಗಾಗಿ ಬಲೆ ಬೀಸಲಾಗಿದೆ. ಶೀಘ್ರ ಕಾನೂನಿನ ಮುಂದೆ ಹಾಜರು ಪಡಿಸುತ್ತೇವೆʼʼ ಎಂದು ಎಎಸ್‌ಪಿ ನಿರಂಜನ್ ಶರ್ಮ ತಿಳಿಸಿದ್ದಾರೆ.
ಘಟನೆ ವಿವರ
ʼʼಕೋಚಿಂಗ್‌ಗಾಗಿ ತೆರಳುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದರು ಎಂದು 16 ವರ್ಷದ ಸಂತ್ರಸ್ಥೆ ತಿಳಿಸಿದ್ದಾಳೆ. ಅತೀ ಕ್ರೂರವಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಬಳಿಕ ಸೇತುವೆ ಬಳಿ ಆಕೆಯನ್ನು ಎಸೆದು ಹೋಗಿದ್ದಾರೆ. ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿದ್ದ ಆಕೆಯನ್ನು ಗಮನಿಸಿದ ದಾರಿಹೋಕರೊಬ್ಬರು ಈ ಬಗ್ಗೆ ಬಾಲಕಿಯ ಮನೆಯವರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆʼʼ ಎಂದು ಯಶವಂತ್ ಗೋಯಲ್ ವಿವರಿಸಿದ್ದಾರೆ.
ʼʼಆರೋಪಿಗಳನ್ನು ಬಂಧಿಸಲು ವಿಶೇಷ ಘಟಕವನ್ನು ರಚಿಸಲಾಗಿದೆ. ಆರೋಪಿಗಳ ವಿರುದ್ಧ ಪೋಕ್ಸೊ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಡಿ) (ಸಾಮೂಹಿಕ ಅತ್ಯಾಚಾರ), 366 (ಅಪಹರಣ) ಮತ್ತು 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆʼʼ ಎಂದು ಯಶವಂತ್ ಗೋಯಲ್ ಗೋಯಲ್ ತಿಳಿಸಿದ್ದಾರೆ.
ಇದನ್ನೂ ಓದಿ: Physical Abuse : ಬೆಂಗಳೂರಲ್ಲಿ ಯುವತಿ ಪ್ರಜ್ಞೆ ತಪ್ಪಿಸಿ ಗ್ಯಾಂಗ್ ರೇಪ್!
ಚಲಿಸುತ್ತಿದ್ದ ರೂಲಿನಲ್ಲಿ ಅತ್ಯಾಚಾರ
ಚಲಿಸುತ್ತಿದ್ದ ಮೆಮು ರೈಲಿನಲ್ಲಿ 30 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ (Physical Abuse) ಘಟನೆ ಇತ್ತೀಚೆಗೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಡೆದಿತ್ತು. ಸತ್ನಾ ಮತ್ತು ಕಟ್ನಿ ವಿಭಾಗಗಳ ನಡುವಿನ ಪಕಾರಿಯಾ ನಿಲ್ದಾಣದಲ್ಲಿ ಮಹಿಳೆ ಜಬಲ್ಪುರ್-ರೇವಾ ಮೆಮು ರೈಲನ್ನು ಹತ್ತಿದ್ದರು. ಮಾರ್ಗ ಮಧ್ಯದಲ್ಲಿ ಆರೋಪಿಯು ಅತ್ಯಾಚಾರ ಮಾಡಿದ್ದ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಾಂಡಾ (ಉತ್ತರ ಪ್ರದೇಶ) ನಿವಾಸಿ ಪಂಕಜ್ ಕುಶ್ವಾಹ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಪಂಕಜ್ ಯುವತಿಯನ್ನು ರೈಲಿನ ಶೌಚಾಲಯದಲ್ಲಿ ಅತ್ಯಾಚಾರ ಮಾಡಿದ್ದ. ತಪ್ಪಿಸಿಕೊಂಡು ಹೊರಗೆ ಬಂದಿದ್ದ ಆಕೆ ಸತ್ನಾ ನಿಲ್ದಾಣದ ಪೊಲೀಸರಿಗೆ ಮಾಹಿತಿ ನೀಡಿದ್ದಳು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ