ಬೆಂಗಳೂರು: ಬಳ್ಳಾರಿ ಸಂಸದ ದೇವೇಂದ್ರಪ್ಪ (MP Devendrappa) ಅವರ ಪುತ್ರ, ಮೈಸೂರು ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಡಾ. ರಂಗನಾಥ್ (Lecturer Dr. Ranganath) ಅವರಿಂದ ಮೋಸ ಹೋಗಿದ್ದೇನೆ ಎಂದು ಹೇಳುತ್ತಿರುವ ಯುವತಿ ಇದೀಗ ಎರಡನೇ ಪತ್ನಿಯಾಗಿ (Ready to Become Second wife) ಬೇಕಾದರೂ ಇರುತ್ತೇನೆ, ಅವರು ನನಗೆ ಬೇಕೇ ಬೇಕು ಎಂದು ಹಠ ಹಿಡಿದಿದ್ದಾಳೆ.
ಒಂದುವರೆ ವರ್ಷದ ಹಿಂದೆ ಪರಿಚಯವಾಗಿ, ಪ್ರೀತಿಸಿ, ದೈಹಿಕ ಸಂಪರ್ಕವನ್ನೂ ಹೊಂದಿದ್ದ ಇವರಿಬ್ಬರ ನಡುವೆ ಈಗ ವೈಮನಸ್ಸು ಹುಟ್ಟಿಕೊಂಡಿದೆ. ರಂಗನಾಥ್ ತನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾರೆ ಎಂದು ಆಕೆ ಆರೋಪಿಸುತ್ತಿದ್ದರೆ, ಯುವತಿ ತನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ರಂಗನಾಥ್ ದೂರು ನೀಡಿದ್ದಾರೆ.
ಈ ನಡುವೆ, ವಿಸ್ತಾರ ನ್ಯೂಸ್ ಜತೆ ಮಾತನಾಡಿರುವ ಯುವತಿ ತನಗೆ ರಂಗನಾಥ್ ಬೇಕೇಬೇಕು ಎಂದು ಹಠ ಹಿಡಿದಿದ್ದಾಳೆ. ರಂಗನಾಥ್ ನನ್ನು ನನ್ನ ಮುಂದೆ ತಂದು ನಿಲ್ಲಿಸಿ ಎಂದು ಗೋಗರೆದಿದ್ದಾಳೆ. ಜತೆಗೆ ಮೈಸೂರಿನಲ್ಲಿರುವ ಮನೆಗೆ ಹೋಗುವುದಾಗಿ ಹೇಳಿದ್ದಾಳೆ. ಅತ್ತ ರಂಗನಾಥ್ ಈ ಪ್ರಕರಣ ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದಾರೆ. ಹಾಗಿದ್ದರೆ ಯುವತಿ ಹೇಳಿದ್ದೇನು? ಮುಂದೆ ಓದಿ..
ಮೊದಲ ಭೇಟಿಯಲ್ಲೇ ಸಂಬಂಧದ ಮಾತು ಶುರುವಾಗಿತ್ತು!
2022ರಲ್ಲಿ ಮೈಸೂರಿನಲ್ಲಿ ನಡೆದ ಪಾರ್ಟಿಯೊಂದರಲ್ಲಿ ನಮ್ಮ ಭೇಟಿ ಆಗಿತ್ತು. ಆಗ ನನ್ನನ್ನು ಮಾತನಾಡಿಸಿದ ಅವರು ನನಗಿನ್ನೂ ಮಗು ಆಗಿಲ್ಲ, ಯಾರಿಗೂ ಗೊತ್ತಾಗದಂತೆ ಮೆಂಟೇನ್ ಮಾಡೋಣ ಎಂದು ರಂಗನಾಥ್ ಹೇಳಿದರು ಎಂದು ಯುವತಿ ಹೇಳಿದ್ದಾಳೆ. ಬಳಿಕ ಮೈಸೂರಿನ ಹೋಟೆಲ್‌ನಲ್ಲಿ ಒಂದು ರಾತ್ರಿ ಸ್ಟೇ ಆದಾಗ ಪರಸ್ಪರ ಲೈಂಗಿಕ ಸಂಪರ್ಕ ನಡೆಸಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ.
ರಂಗನಾಥ್ ಮದುವೆ ಆಗಿದ್ದು ಮೊದಲು ಗೊತ್ತಿರಲಿಲ್ಲ
ರಂಗನಾಥ್‌ಗೆ ಮದುವೆ ಆಗಿದ್ದು ನನಗೆ ಮೊದಲು ಗೊತ್ತಿರಲಿಲ್ಲ. ಒಂದು ತಿಂಗಳ ನಂತರ ಸಂಶಯ ಬರಲು ಶುರುವಾಯಿತು ಎಂದು ಕೂಡಾ ಸಂತ್ರಸ್ತ ಯುವತಿ ಹೇಳಿದ್ದಾರೆ. ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಬಳಸಿಕೊಂಡಿದ್ದಾರೆ. ನಾನು ಅವರನ್ನು ಬ್ಲ್ಯಾಕ್ ಮೇಲ್ ಮಾಡಿಲ್ಲ ಎಂದು ಯುವತಿ ಹೇಳಿದ್ದಾರೆ.
ನನ್ನ ಬಳಿ ರಂಗನಾಥ್ ಹೆಂಡ್ತಿ ನಂಬರೂ ಇಲ್ಲ, ನಾನು ಜಾತಿ ಹೆಸರಲ್ಲಿ ಬೈದಿಲ್ಲ
ನನಗೆ ಮಗು ಇಲ್ಲ, ಕಾನ್ಫಿಡೆನ್ಶಿಯಲ್ಲಾಗಿ ಇರೋಣ ಎಂದು ಹೇಳಿ ನಂಬಿಸಿ ನನ್ನ ಜತೆ ಸಂಪರ್ಕ ಬೆಳೆಸಿದ್ದಾರೆ ರಂಗನಾಥ್ ಎಂದು ಸಂತ್ರಸ್ತ ಯುವತಿ ಹೇಳಿದ್ದಾರೆ. ಇದೇ ವೇಳೆ ರಂಗನಾಥ್ ಜತೆಗಿರುವ ಚಿತ್ರಗಳನ್ನು ಪತ್ನಿಗೆ ಕಳುಹಿಸಿಕೊಟ್ಟಿರುವ ಆಪಾದನೆಯನ್ನು ತಳ್ಳಿ ಹಾಕಿದ್ದಾರೆ. ತಾನು ಆ ರೀತಿ ಮಾಡಿಲ್ಲ. ರಂಗನಾಥ್ ಹೆಂಡ್ತಿಯ ಫೋನ್ ನಂಬರ್ ಕೂಡಾ ಇಲ್ಲ ಎಂದಿದ್ದಾರೆ.
ಮೋಸ ಮಾಡಲು ಯತ್ನಿಸುತ್ತಿರುವ ರಂಗನಾಥ್‌ಗೆ ಬಾಯಿಗೆ ಬಂದಂತೆ ಬೈದಿದ್ದು ನಿಜ. ಆದರೆ, ಎಲ್ಲೂ ಜಾತಿಯ ಹೆಸರಿನಲ್ಲಿ ಬೈದಿಲ್ಲ. ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ ಎಂದು ಹೇಳಿದ್ದಾರೆ ಯವತಿ.
ನನ್ನನ್ನು ಹೆಂಡತಿಯಾಗಿ ಸ್ವೀಕರಿಸಲೇಬೇಕು, ಅದೊಂದೇ ಬೇಡಿಕೆ
ಅವನಿಗೆ ಒಂದು ಮಗು ಕೊಡಿಸಬೇಕು ಎಂಬ ಸೆಂಟಿಮೆಂಟ್ ಆಧಾರದಲ್ಲಿ ನಾನು ಅವನ ಜತೆ ಸೇರಿದೆ. ಆದರೆ, ಅವನು ಅವಾಯ್ಡ್ ಮಾಡಲು ಶುರು ಮಾಡಿದ. ಕೊನೆಗೆ ನನ್ನನ್ನು ದೂರ ಮಾಡಲು ಮುಂದಾದ. ಮದುವೆ ಮಾಡಿಕೊಳ್ಳಿ ಎಂದು ಕಾಲಿಗೆ ಬಿದ್ದಾಗಲೂ ತಿರಸ್ಕರಿಸಿದ. ಹಣ ಕೊಟ್ಟು ನನ್ನನ್ನು ದೂರ ಮಾಡಲು ಅವನ ಸ್ನೇಹಿತರು ಮುಂದಾದರು. ಆದರೆ, ನಾನು ಹಣಕ್ಕಾಗಿ ಏನನ್ನೂ ಮಾಡಿಲ್ಲ. ಹೀಗಾಗಿ ತಿರಸ್ಕರಿಸಿದೆ. ರಂಗನಾಥ್ ಅಪ್ಪನಿಗೂ ವಿಷಯ ತಲುಪಿಸಿದ್ದೇನೆ. ಅವರು ಕಾನೂನು ಪ್ರಕಾರ ಕೈಗೊಳ್ಳಬಹುದು ಎಂದು ಹೇಳಿದ್ದಾರೆ. ಈಗಲೂ ನನ್ನ ಬೇಡಿಕೆ ಒಂದೇ. ನನ್ನನ್ನು ಹೆಂಡತಿಯಾಗಿ ಸ್ವೀಕರಿಸಲೇಬೇಕು ಎಂದು ಯುವತಿ ಹೇಳಿದ್ದಾಳೆ.
ಮಗನನ್ನು ನನ್ನ ಮುಂದೆ ಕರೆಸಿ ಎಂದು ದೇವೇಂದ್ರಪ್ಪಗೆ ಫೋನ್
ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯ ಮುಂದೆ ವಿಸ್ತಾರ ನ್ಯೂಸ್ ಜತೆ ಮಾತನಾಡಿದ ಯುವತಿ ಅಲ್ಲಿಂದಲೇ ಬಳ್ಳಾರಿ ಸಂಸದ ದೇವೇಂದ್ರಪ್ಪ ಅವರಿಗೆ ಕರೆ ಮಾಡಿ ನಿಮ್ಮ ಮಗನನ್ನು ನನ್ನ ಮುಂದೆ ಕಳುಹಿಸಿ ಎಂದು ಆಗ್ರಹಿಸಿದರು. ಜತೆಗೆ ಸಂಸದರನ್ನೂ ತರಾಟೆಗೆ ತೆಗೆದುಕೊಂಡರು.
ಹಣ ಕೇಳಿಲ್ಲ, ಮನೆ ಲೀಸ್‌ಗೆ ಹಾಕಿಸಿಕೊಡಿ ಎಂದು ಹೇಳಿದ್ದು ನಿಜ
ಡಾ. ರಂಗನಾಥ್ ಮತ್ತು ನನ್ನ ಮಧ್ಯೆ ಮೇ ತಿಂಗಳಲ್ಲಿ ಜಗಳ ಆಗಿತ್ತು. ಕೊನೆಗೆ ಮೈಸೂರು ದಸರಾ ಆದ ಬಳಿ ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು. ಅದರ ನಡುವೆ ನಾನು ಒಂದು ಮನೆಯಾದರೂ ಲೀಸ್‌ಗೆ ಹಾಕಿಸಿಕೊಡಿ ಎಂದು ಗೆಳೆಯರ ಮೂಲಕ ಕೇಳಿಸಿದ್ದು ನಿಜ. ಆದರೆ, ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿಲ್ಲ ಎಂದಿದ್ದಾರೆ ಯುವತಿ.
ಇದನ್ನೂ ಓದಿ: Physical Abuse : ಅವನಿಗೆ 42, ಅವಳಿಗೆ 24 : ಸಂಸದ ದೇವೇಂದ್ರಪ್ಪ ಪುತ್ರನಿಂದ ಯುವತಿಗೆ ವಂಚನೆ; ಏನಿದು ಲವ್ವಿಡವ್ವಿ?