Site icon Vistara News

Physical Abuse: ಹಿಂದು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಮುಸ್ಲಿಂ ಯುವಕರಿಗೆ ಜೀವಾವಧಿ ಶಿಕ್ಷೆ

Physical Abuse

Physical Abuse

ಪಟ್ನ: ಎರಡು ವರ್ಷಗಳ ಹಿಂದೆ ಅಪ್ರಾಪ್ತ ಹಿಂದು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ (Physical Abuse) ಎಸಗಿದ್ದ ನಾಲ್ವರಿಗೆ ಬಿಹಾರದ ಮಧುಬನಿ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಮೊಹಮ್ಮದ್ ಜಾಫರ್ ಅನ್ಸಾರಿ, ಮೊಹಮ್ಮದ್ ಜಿಬ್ರಿಲ್, ಮೊಹಮ್ಮದ್ ಅಹ್ಮದ್ ಮತ್ತು ಅಖ್ತರ್ ಅನ್ಸಾರಿ ಇವರೇ ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಜತೆಗೆ ನ್ಯಾಯಾಲಯವು ಅಪರಾಧಿಗಳಿಗೆ ತಲಾ 25,000 ರೂ.ಗಳ ದಂಡವನ್ನೂ ವಿಧಿಸಿದೆ (Crime News).

ಮಧುಬನಿಯ ಹರ್ಲಾಖಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2022ರ ಸೆಪ್ಟೆಂಬರ್ 5ರಂದು ಈ ಘಟನೆ ನಡೆದಿತ್ತು. 16 ವರ್ಷದ ಸಂತ್ರಸ್ತೆ ಮೇಲೆ ಎರಗಿದ ಈ ನಾಲ್ವರು ಸಾಮೂಹಿಕ ಅತ್ಯಚಾರ ಎಸಗಿದ್ದರು.

ಘಟನೆಯ ವಿವರ

ಅಂದು ಸಂತ್ರಸ್ತೆ ತನ್ನ ಸಹೋದರನೊಂದಿಗೆ ಕಸೆರಾ ಗ್ರಾಮದ ಜಾತ್ರೆಗೆ ಹೋಗಿದ್ದಳು. ಸ್ವಲ್ಪ ಸಮಯದ ನಂತರ ಆಕೆ ಸಮೀಪದ ಶಾಲೆಯೊಂದರ ಶೌಚಾಲಯಕ್ಕೆ ತೆರಳಿದ್ದಳು. ಈ ವೇಳೆ ಮೊಹಮ್ಮದ್ ಜಾಫರ್ ಅನ್ಸಾರಿ, ಮೊಹಮ್ಮದ್ ಜಿಬ್ರಿಲ್, ಮೊಹಮ್ಮದ್ ಅಹ್ಮದ್ ಮತ್ತು ಅಖ್ತರ್ ಅನ್ಸಾರಿ ಕೂಡ ಅಲ್ಲಿಗೆ ಆಗಮಿಸಿದ್ದರು. ಶೌಚಾಲಯದಿಂದ ಹೊರಬಂದ ಆಕೆಯನ್ನು ಬಲವಂತವಾಗಿ ಶಾಲೆಯ ಛಾವಣಿಗೆ ಕರೆದೊಯ್ದರು. ಅಲ್ಲಿ ಅವರು ಸರದಿಯಂತೆ ಸಾಮೂಹಿಕ ಅತ್ಯಾಚಾರ ಎಸಗಿದರು. ಬಾಲಕಿಯ ಕೂಗು ಕೇಳಿದ ಸ್ಥಳೀಯರು ಜಮಾಯಿಸಲು ಆರಂಭಿಸುತ್ತಿದ್ದಂತೆ ತಾವು ಸಿಕ್ಕಿಬೀಳುತ್ತೇವೆ ಎಂಬ ಭಯದಿಂದ ಈ ಎಲ್ಲ ನಾಲ್ಕು ಅಪರಾಧಿಗಳು ಅಲ್ಲಿಂದ ತಲೆ ಮರೆಸಿಕೊಂಡಿದ್ದರು. ಬಳಿಕ ಸ್ಥಳೀಯರು ಬೆನ್ನಟ್ಟಿ ಜಾಫರ್ ಅನ್ಸಾರಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ತನಿಖೆ ವೇಳೆ ಮೊಹಮ್ಮದ್ ಜಿಬ್ರಿಲ್, ಮೊಹಮ್ಮದ್ ಅಹ್ಮದ್ ಮತ್ತು ಅಖ್ತರ್ ಅನ್ಸಾರಿ ಅವರೂ ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡು ಬಂದಿತ್ತು. ಬಳಿಕ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನೂ ಬಂಧಿಸಿದ್ದರು. ಘಟನೆ ನಡೆದ ಮಾರನೇ ದಿನ ಅಂದರೆ 2022ರ ಸೆಪ್ಟೆಂಬರ್‌ 6ರಂದು ಅಪರಾಧಿಗಳ ವಿರುದ್ಧ ಬಾಲಕಿಯ ತಾಯಿ ದೂರು ದಾಖಲಿಸಿದ್ದರು. ಇದರ ಆಧಾರದಲ್ಲಿ ನಾಲ್ವರ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 376 (ಡಿ) ಮತ್ತು ಪೋಕ್ಸೊ ಕಾಯ್ದೆಯಡಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಿದ್ದರು.

ಸಂತ್ರಸ್ತೆಯ ಸಹೋದರಿಯ ಮೇಲೂ ನಡೆದಿತ್ತು ದೌರ್ಜನ್ಯ

ʼʼನ್ಯಾಯಾಲಯವು ತನ್ನ ತೀರ್ಪಿನಲ್ಲಿ ಎಲ್ಲ ಅಪರಾಧಿಗಳನ್ನು ಅವರ ಕೊನೆಯ ಉಸಿರಿರುವವರೆಗೂ ಜೈಲಿನಲ್ಲಿಡಲು ಆದೇಶಿಸಿದೆ. ಒಂದೂವರೆ ವರ್ಷಗಳ ಕಾಲ ನಡೆದ ವಿಚಾರಣೆಯ ಸಮಯದಲ್ಲಿ, ಅಪರಾಧಿಗಳು ಅನೇಕ ಬಾರಿ ವಕೀಲರನ್ನು ಬದಲಾಯಿಸಿದ್ದಾರೆ. ಆದಾಗ್ಯೂ ಅವರಿಗೆ ಯಾವುದೇ ಪ್ರಯೋಜನ ಸಿಗಲಿಲ್ಲ. ಕೊನೆಗೂ ಅಪರಾಧಿಗಳಿಗೆ ಶಿಕ್ಷೆಯಾಗಿದೆʼʼ ಎಂದು ಸಂತ್ರಸ್ತೆಯ ಪರ ವಕೀಲರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 5 ಲಕ್ಷ ರೂ. ಪರಿಹಾರ ಪಾವತಿಸುವಂತೆಯೂ ಬಿಹಾರ ಸರ್ಕಾರಕ್ಕೆ ಕೋರ್ಟ್‌ ಸೂಚಿಸಿದೆ. ʼʼದೌರ್ಭಾಗ್ಯ ಎಂದರೆ ಸಂತ್ರಸ್ತೆಯ ಸಹೋದರಿಯ ಮೇಲೂ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಜೂನ್‌ನಲ್ಲಿ ಕೈಗೆತ್ತಿಕೊಳ್ಳಲಿದೆʼʼ ಎಂದು ವಕೀಲರು ಹೇಳಿದ್ದಾರೆ.

ಇದನ್ನೂ ಓದಿ: Physical Abuse & Murder: ಬಾಲಕಿ ಮೇಲೆ ಅತ್ಯಾಚಾರ, ಸಜೀವ ದಹನ ಕೇಸ್‌; ಹಂತಕರಿಗೆ ಮರಣದಂಡನೆ

Exit mobile version