Site icon Vistara News

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

Physical Abuse The public prosecutor called the client woman to the lodge

ಬೆಂಗಳೂರು: ಕಕ್ಷಿದಾರ ಮಹಿಳೆಗೆ ಪ್ರಕರಣವೊಂದರ ಆದೇಶ ಪ್ರತಿ ಕೊಡುವುದಾಗಿ ಹೇಳಿ ಲೈಂಗಿಕ ದೌರ್ಜನ್ಯ (Physical Abuse) ನಡೆಸಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಕಾಟನ್‌ಪೇಟೆ ಪೊಲೀಸರು ಪಬ್ಲಿಕ್ ಪ್ರಾಸಿಕ್ಯೂಟರ್‌ ಶ್ರೀರಾಂ ಬಂಧಿಸಲಾಗಿದೆ.

ಮಹಿಳೆ ನೀಡಿದ್ದ ಹಳೆಯ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು. ಹೀಗಾಗಿ ಆ ಮಹಿಳೆ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಲು ಆದೇಶ ಪ್ರತಿಯನ್ನು ಪಬ್ಲಿಕ್‌ ಪ್ರಾಸಿಕ್ಯೂಟರ್ ಬಳಿ ಕೇಳಿದ್ದಳು. ಮೆಜೆಸ್ಟಿಕ್‌ ಬಳಿ ಇರುವ ಹೋಟೆಲ್‌ ಸಮೀಪ ಪ್ರಾಸಿಕ್ಯೂಟರ್ ಶ್ರೀರಾಂ ಆದೇಶ ಪ್ರತಿ ಕೊಡುವುದಾಗಿ ಮಾತನಾಡಿದ್ದಾನೆ. ಇಲ್ಲೇ ಕಾಟನ್‌ಪೇಟೆಯ ಲಾಡ್ಜ್‌ವೊಂದಕ್ಕೆ ಬನ್ನಿ ಕೇಸ್ ಬಗ್ಗೆ ಮಾತಾಡೋಣ ಎಂದಿದ್ದಾನೆ. ಮಹಿಳೆಯನ್ನು ನಾನಾ ರೀತಿಯಲ್ಲಿ ಒತ್ತಾಯ ಮಾಡಿ ಲಾಡ್ಜ್‌ ಹೋಗೊಣಾ ಎಂದಿದ್ದಾನೆ. ಲೈಂಗಿಕವಾಗಿ ಸಹಕರಿಸಲು ಕೋರಿದ್ದಾನೆ ಎಂದು ಆರೋಪಿಸಿದ್ದಾರೆ.

ಈ ವೇಳೆ ಪಬ್ಲಿಕ್‌ ಪ್ರಾಸಿಕ್ಯೂಟರ್ ವರ್ತನೆಗೆ ಪ್ರತಿರೋಧ ತೋರಿದ ಮಹಿಳೆ, ಆತನಿಗೆ ಗೊತ್ತಿಲ್ಲದಂತೆ ಕೂಡಲೆ ಪತಿಗೆ ಕರೆ ಮಾಡಿ ಅಸಭ್ಯ ವರ್ತನೆ ಮಾಡುತ್ತಿರುವ ಬಗ್ಗೆ ತಿಳಿಸಿದ್ದಾಳೆ. ತಕ್ಷಣ ಮಾಹಿತಿ ಪಡೆದು ಬಂದ ಮಹಿಳೆಯ ಪತಿ ಹಾಗೂ ಅವರ ಸ್ನೇಹಿತರು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಲಾಡ್ಜ್‌ಗೆ ಕರೆಯುವುದನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದಾರೆ. ರಸ್ತೆಯಲ್ಲೇ ನಿಂತು ಮಹಿಳೆಯನ್ನು ಲಾಡ್ಜ್‌ಗೆ ಕರೆದಿದ್ದಾನೆ. ಈ ವೇಳೆ ಮಹಿಳೆಯ ಪತಿ ಹಾಗೂ ಸ್ನೇಹಿತರು ಸಹಾಯಕ್ಕೆ ದೌಡಾಯಿಸಿದ್ದಾರೆ. ಯಾವ ಲಾಡ್ಜ್‌ಗೆ ಬರಬೇಕೆಂದು ಪ್ರಶ್ನೆ ಮಾಡಿದಾಗ ಇವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರು ಎಲ್ಲರೂ ಸೇರಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಾಟನ್ ಪೇಟೆ ಪೊಲೀಸರು ಆರೋಪಿ ಶ್ರೀರಾಂನನ್ನು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿ ಶ್ರೀಂರಾಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version