Site icon Vistara News

Prajwal Revanna Case: ಪ್ರಜ್ವಲ್‌, ರೇವಣ್ಣಗೆ ಮತ್ತೊಂದು ನೋಟಿಸ್‌; ವಿಚಾರಣೆಗೆ ಬಾರದಿದ್ದರೆ ಅರೆಸ್ಟ್‌: ಡಾ. ಜಿ. ಪರಮೇಶ್ವರ್

Vistara Editorial

Vistara Editorial: Let there be an impartial investigation In Hassan Pendrive Case

ಬೆಂಗಳೂರು: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಪ್ರಜ್ವಲ್‌ ರೇವಣ್ಣ ಅವರನ್ನು ಬಂಧಿಸಲು ಎಸ್‌ಐಟಿಗೆ ಅಧಿಕಾರ ಇದೆ. ಎರಡನೇ ನೋಟಿಸ್‌ಗಾದರೂ 24 ಗಂಟೆಯ ಒಳಗೆ ವಿಚಾರಣೆಗೆ ಹಾಜರಾಗಬೇಕು. ಹಾಜರಾಗದೇ ಇದ್ದರೆ ಕಾನೂನಿನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಇನ್ನು ರೇವಣ್ಣ ಅವರಿಗೂ ಮತ್ತೊಂದು ನೋಟಿಸ್‌ ನೀಡಿದ್ದು, ಸ್ಪಂದಿಸದಿದ್ದರೆ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಜಿ. ಪರಮೇಶ್ವರ್‌, ರೇವಣ್ಣಗೂ ಕೂಡ 41ಎ ಅಡಿ ಇನ್ನೊಂದು ನೋಟಿಸ್ ನೀಡಿದ್ದೇವೆ. ರೇವಣ್ಣ ಕೂಡ 24 ಗಂಟೆ ಸಮಯ ಕೇಳಿದ್ದಾರೆ. ಕಾನೂನು ಪ್ರಕಾರ ಮತ್ತೊಂದು ನೋಟಿಸ್‌ ನೀಡಿದ್ದೇವೆ. ಅದಕ್ಕೂ ಸ್ಪಂದನೆ ಮಾಡದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಮಹಿಳೆಯ ಕಿಡ್ನ್ಯಾಪ್ ವಿಚಾರವಾಗಿಯೂ ಎಸ್‌ಐಟಿಯವರು ಕ್ರಮ ಕೈಗೊಳ್ಳುತ್ತಾರೆ. ಎಲ್ಲದರ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನು ನಾವು ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ರದ್ದು ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಡಾ. ಜಿ. ಪರಮೇಶ್ವರ್‌ ತಿಳಿಸಿದರು.

ನಾವು ಸಂತ್ತಸ್ತ ಮಹಿಳೆಯರಿಗೆ ರಕ್ಷಣೆ ನೀಡುತ್ತೇವೆ. ಭಯದ ವಾತಾವರಣ ಸೃಷ್ಟಿಯಾದರೆ ಯಾರು ಬಂದು ಹೇಳುತ್ತಾರೆ. ಸಾವಿರಾರು ವಿಡಿಯೊ ಇದೆ ಅಂತ ಹೇಳುತ್ತಿದ್ದಾರೆ. ಕೆ.ಆರ್. ನಗರದ ಸಂತ್ರಸ್ತೆ ಬಗ್ಗೆ ನನಗೆ ಗೊತ್ತಿಲ್ಲ. ಟೆಕ್ನಿಕಲ್ ವಿಷಯದಲ್ಲಿ ನಾವ್ಯಾರೂ ಎಕ್ಸ್‌ಪರ್ಟ್ ಅಲ್ಲ. ಯಾವ ಯಾವುದೋ ಸೆಕ್ಷನ್ಸ್ ಹಾಕಲು ಸಾಧ್ಯವಿಲ್ಲ. ದೂರಿನಲ್ಲಿ ಏನಿದೆಯೋ ಅದರ ಆಧಾರದ ಮೇಲೆ ಸೆಕ್ಷನ್‌ಗಳನ್ನು ಹಾಕುತ್ತಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂತ್ರಸ್ತೆಯರು ಮುಂದೆ ಬಂದು ಹೇಳಿಕೆ ಕೊಡಬಹುದು. ಹೀಗಾಗಿ ಕೇಸ್ ಮತ್ತಷ್ಟು ಕಾಂಪ್ಲಿಕೇಟೇಡ್ ಆಗಬಹುದು ಎಂದು ಗೃಹ ಸಚಿವ ಡಾ. ಪರಮೇಶ್ವರ್ ಅಭಿಪ್ರಾಯಪಟ್ಟರು.

ಮ್ಯಾಜಿಸ್ಟ್ರೇಟ್ ಮುಂದೆ ಸಿಆರ್‌ಪಿಸಿ 164 ಹೇಳಿಕೆ

ಸಂತ್ರಸ್ತೆಯರಿಂದ ಸಿಆರ್‌ಪಿಸಿ ಸೆಕ್ಷನ್‌ 164 ಹೇಳಿಕೆಯನ್ನು ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನನೀಡಲಾಗಿದೆ. ಯಾರು ಕೂಡ ಮುಂದೆ ಎಸ್ಐಟಿ ಮೇಲೆ ಬೆರಳು ತೋರಿಸಬಾರದು. ಹೀಗಾಗಿ ನೇರವಾಗಿ ಮ್ಯಾಜಿಸ್ಟ್ರೇಟ್ ಮುಂದೆ ಸಿಆರ್‌ಪಿಸಿ 164 ಹೇಳಿಕೆಯನ್ನು ಕೊಡಿಸಲಾಗುತ್ತಿದೆ. ಈ ಮಧ್ಯೆ 41ಎ ಅಡಿಯಲ್ಲಿ ನೋಟಿಸ್ ಕೊಟ್ಟಿದ್ದೇವೆ. ನೋಟಿಸ್‌ಗೆ ಪ್ರಜ್ವಲ್ ರೇವಣ್ಣ ಪರ ವಕೀಲ ಸಮಯ ಕೊಡಿ ಅಂತ ಕೇಳಿದ್ದಾರೆ. ಅದಕ್ಕೆ ಸಮಯ ಕೊಡುವುದಕ್ಕೆ ಪ್ರಾವಿಷನ್ ಇಲ್ಲ ಅಂತ ತಿಳಿಸಿದ್ದೇವೆ. ಪ್ರಜ್ವಲ್‌ ಪ್ರಕರಣದಲ್ಲಿ ಕಾನೂನಿನಡಿ ಏನೆಲ್ಲ ಕ್ರಮ ಕೈಗೊಳ್ಳಬಹುದು ಎಂದು ಪರಿಶೀಲನೆ ಮಾಡಲಾಗಿದೆ. ಈಗಾಗಲೇ ಲುಕ್‌ಔಟ್ ನೋಟಿಸ್‌ ಅನ್ನು ಕೊಟ್ಟಿದ್ದೇವೆ. ಇದನ್ನು ಸಹ ಕಾನೂನಿನ ಪ್ರಕಾರವೇ ನೀಡಲಾಗಿದೆ ಎಂದು ಡಾ. ಜಿ. ಪರಮೇಶ್ವರ್‌ ತಿಳಿಸಿದರು.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ, ರೇವಣ್ಣ ಮನೆ ಇಂಚಿಂಚೂ ತಲಾಶ್, ಸಿಗ್ತಾ ಮಹತ್ವದ ಕ್ಲೂ?

ಗುರುವಾರವೂ ಒಂದು ದೂರು ದಾಖಲಾಗಿದೆ‌‌. ಅದೇ ಸ್ಟೇಟ್‌ಮೆಂಟ್‌ ಅನ್ನು ಮ್ಯಾಜಿಸ್ಟ್ರೇಟ್ ಮುಂದೆಯೇ ಮಾಡಿಸಲಾಗಿದೆ. ಆನಂತರ ಎಸ್‌ಐಟಿಯವರು ಒತ್ತಾಯ ಮಾಡಿ ಹೇಳಿಸಿದ್ದಾರೆ ಎಂದು ಹೇಳಬಾರದಲ್ಲವೇ? ಅದಕ್ಕೆ ಮ್ಯಾಜಿಸ್ಟ್ರೇಟ್ ಮುಂದೆಯೇ ಹೇಳಿಕೆ ಕೊಡಿಸಲಾಗಿದೆ. ಹಲವು ವಿಚಾರಗಳನ್ನು ಪಬ್ಲಿಕ್ ಡೊಮೈನ್‌ನಲ್ಲಿ ಹೇಳೋಕೆ ಆಗಲ್ಲ. ಅವರ ಮನೆ ಮೇಲೆ ರೈಡ್ ಆಗಿರುವ ಸಂಗತಿ ಗೊತ್ತಿಲ್ಲ. ಆದರೆ, ಲುಕ್‌ಔಟ್ ನೋಟಿಸ್ ಕೊಟ್ಟಿದ್ದೇವೆ. ಎಲ್ಲ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ರವಾನೆ ಆಗಿದೆ. ದುಬೈಗೆ ಪ್ರಜ್ವಲ್‌ ಹೋಗಿರುವುದು ಗೊತ್ತಿಲ್ಲ. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಅವರು ಜರ್ಮನಿಗೆ ಹೋಗಿದ್ದಾರೆ. ಜರ್ಮನಿಯಲ್ಲಿ ನಾವು ಹುಡುಕೋಕೆ ಹೋಗಿಲ್ಲ. ನಾವು ಅಲ್ಲಿ ಅದನ್ನು ಮಾಡೋಕೆ ಆಗಲ್ಲ. ನೋಟಿಸ್ ಕೊಟ್ಟ ಮೇಲೆ 24 ಗಂಟೆಯಲ್ಲಿ ಅವರು ಹಾಜರಾಗಬೇಕು. ಹಾಜರಾಗದಿದ್ದರೆ ಬಂಧನವೋ? ಮುಂದೇನು ಅನ್ನೋದನ್ನು ಎಸ್‌ಐಟಿಯವರು ತೀರ್ಮಾನ ಮಾಡ್ತಾರೆ ಎಂದು ಡಾ. ಜಿ. ಪರಮೇಶ್ವರ್‌ ಹೇಳಿದರು.

Exit mobile version