Site icon Vistara News

26 ವರ್ಷ ಹಿಂದಿನ ಹಲ್ಲೆ ಪ್ರಕರಣದಲ್ಲಿ ನಟ ರಾಜ್‌ ಬಬ್ಬರ್‌ಗೆ 2 ವರ್ಷ ಜೈಲು ಶಿಕ್ಷೆ

raj babbar

ಮುಂಬಯಿ: 1996ರ ಪ್ರಕರಣದಲ್ಲಿ ಚುನಾವಣೆ ಮತಗಟ್ಟೆ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ನಟ, ರಾಜಕಾರಣಿ ರಾಜ್ ಬಬ್ಬರ್‌ ಅವರಿಗೆ ಮುಂಬಯಿ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ನಟ, ರಾಜಕಾರಣಿ ರಾಜ್ ಬಬ್ಬರ್‌ಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಮತಗಟ್ಟೆ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ. ರಾಜ್ ಕೊನೆಯದಾಗಿ 2021 ರ ಹಾಟ್‌ಸ್ಟಾರ್ ವೆಬ್ ಸರಣಿ ದಿಲ್ ಬೇಕಾರಾರ್‌ನಲ್ಲಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ರಾಜ್ ಬಬ್ಬರ್ ಅವರನ್ನು ಅಮಿತಾಭ್ ಬಚ್ಚನ್, ಶಶಿ ಕಪೂರ್ ಚಿತ್ರಗಳಲ್ಲಿ ಬದಲಾಯಿಸಿದ್ದಾರೆಂದು ನೆನಪಿಸಿಕೊಂಡಾಗ

ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಯನ್ನು ತನ್ನ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದು, ಹಲ್ಲೆ ಮೂಲಕ ಗಾಯಗೊಳಿಸಿದ್ದು ಸೇರಿದಂತೆ ಮೂರು ಅಪರಾಧಗಳು ಸಾಬೀತಾದ ಹಿನ್ನೆಲೆಯಲ್ಲಿ ರಾಜ್‌ ಬಬ್ಬರ್‌ಗೆ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯ ರಾಜ್‌ಗೆ ₹ 8,500 ದಂಡವನ್ನೂ ವಿಧಿಸಿದೆ. ತೀರ್ಪು ಪ್ರಕಟವಾದಾಗ ರಾಜ್ ನ್ಯಾಯಾಲಯದಲ್ಲಿ ಹಾಜರಿದ್ದರು.

ಇದನ್ನೂ ಓದಿ: ಕಾಳಿಯ ಕೈಯಲ್ಲಿ ಸಿಗರೇಟು ಕೊಟ್ಟ ನಿರ್ದೇಶಕಿ ಯಾರೀಕೆ?

1996ರ ಮೇ ತಿಂಗಳಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ಚುನಾವಣಾಧಿಕಾರಿ ರಾಜ್ ವಿರುದ್ಧ ಈ ಕುರಿತು ಎಫ್‌ಐಆರ್ ದಾಖಲಿಸಿದ್ದರು. ವಜೀರ್‌ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಗ ಸಮಾಜವಾದಿ ಪಕ್ಷದಿಂದ ರಾಜ್ ಸ್ಪರ್ಧಿಸಿದ್ದರು.

1952ರಲ್ಲಿ ಜನಿಸಿದ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ಜನಿಸಿದ ರಾಜ್‌ ಬಬ್ಬರ್‌ ರಂಗಭೂಮಿಯಲ್ಲಿ ಪದವಿ ಪಡೆದಿದ್ದರು. ದೆಹಲಿಯ ಪ್ರತಿಷ್ಠಿತ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಅಧ್ಯಯನ ಮಾಡಿದರು. 1980ರಲ್ಲಿ ಇನ್ಸಾಫ್ ಕಾ ತರಾಜು ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಸಾಜಿಶ್, ಆಂಖೇನ್, ದಲಾಲ್, ದಿ ಗ್ಯಾಂಬ್ಲರ್, ಅಂದಾಜ್, ಯಾರಾನಾ, ಬರ್ಸಾತ್, ಜಿದ್ದಿ ಅವರ ಕೆಲವು ಗಮನಾರ್ಹ ಚಲನಚಿತ್ರಗಳು.

150ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು 30 ನಾಟಕಗಳಲ್ಲಿ ಕಾಣಿಸಿಕೊಂಡ ಬಳಿಕ ಅವರು ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದ್ದರು. 90ರ ದಶಕದ ಆರಂಭದಲ್ಲಿ ಸಮಾಜವಾದಿ ಪಕ್ಷವನ್ನು ಸೇರಿ, 1994ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡರು. ಗೃಹ ವ್ಯವಹಾರಗಳು, ನಾಗರಿಕ ವಿಮಾನಯಾನ ಸೇರಿದಂತೆ ವಿವಿಧ ಸಲಹಾ ಸಮಿತಿಗಳಲ್ಲಿ ಕೆಲಸ ಮಾಡಿದರು. 1999ರಲ್ಲಿ ಆಗ್ರಾ ಕ್ಷೇತ್ರದಲ್ಲಿ ಸ್ಪರ್ಧಿಸಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಬಿಎಸ್ ರಾವತ್ ಅವರನ್ನು 1,10,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು. 2008ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. ಮುಂದಿನ ವರ್ಷ ನಾಲ್ಕನೇ ಬಾರಿಗೆ ಸಂಸದರಾಗಿ ಗೆದ್ದರು. ಆದರೆ 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಸೋತರು.

ಇದನ್ನೂ ಓದಿ: ಕಾಳಿ ವಿವಾದ: ಅಣ್ಣಾವ್ರ ಬೇಡರ ಕಣ್ಣಪ್ಪ ಚಿತ್ರದ ಪೋಟೊ ಶೇರ್‌ ಮಾಡಿ ʼನನ್ನ ದೇವರು, ನನ್ನ ಹಕ್ಕುʼ ಎಂದ ನಟ ಕಿಶೋರ್

Exit mobile version