Site icon Vistara News

Rameshwaram Cafe Blast: ಐಟಿ ಬಿಟಿ ಜನರೇ ರಾಮೇಶ್ವರಂ ಕೆಫೆ ಬಾಂಬರ್‌ಗಳ ಟಾರ್ಗೆಟ್ ಆಗಿದ್ದರು!

Rameshwaram Cafe

Bengaluru Rameshwaram Cafe blast case: NIA probe Points To Pakistan connection

ಬೆಂಗಳೂರು: ರಾಜಧಾನಿಯ ವೈಟ್‌ಫೀಲ್ಡ್‌ನಲ್ಲಿರುವ (Blast in bengaluru) ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ (Rameshwaram Cafe Blast) ಪ್ರಕರಣದಲ್ಲಿ ಬಂಧಿಸಲಾಗಿರುವ ಇಬ್ಬರು ಪ್ರಮುಖ ಉಗ್ರರನ್ನು (cafe bombers) ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಬೆಚ್ಚಿ ಬೀಳಿಸುವ ಕೆಲವು ಸಂಗತಿಗಳನ್ನು ಇವರು ಹೊರಗೆಡಹಿದ್ದಾರೆ. ಬೆಂಗಳೂರಿಗೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟ ಐಟಿ ಬಿಟಿ ಹಬ್‌ (IT hub) ಮೇಲೆಯೇ ಇವರು ಬಾಂಬ್‌ ದಾಳಿ (Bomb Blast) ನಡೆಸಲು ಸ್ಕೆಚ್‌ ಹಾಕಿದ್ದರು ಎಂಬುದು ಗೊತ್ತಾಗಿದೆ.

ರಾಮೇಶ್ವರಂ ಕೆಫೆ (Rameshwaram Cafe Blast) ಬಾಂಬರ್‌ಗಳನ್ನು ಎನ್‌ಐಎ (NIA) ಸತತವಾಗಿ ಡ್ರಿಲ್‌ ಮಾಡುತ್ತಿದ್ದು ವಿಚಾರಣೆಯ ವೇಳೆ ಬಾಂಬರ್‌ಗಳು ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಬಾಂಬರ್‌ಗಳ ಟಾರ್ಗೆಟ್‌ ಮುಖ್ಯವಾಗಿ ಹಿಂದೂಗಳಾಗಿದ್ದು, ಐಟಿ ಬಿಟಿ ಕಂಪನಿಗಳ ನಡುವೆಯೇ ಬಾಂಬ್‌ ಇಡಲು ಮೊದಲು ಪ್ಲಾನ್‌ ಮಾಡಿದ್ದರು. ಎಸ್ಇಜೆಡ್ ಏರಿಯಾದಲ್ಲಿ ಸ್ಫೋಟ ಮಾಡಬೇಕು ಅಂತ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಹುಸೇನ್ ಟಾರ್ಗೆಟ್ ಮಾಡಿದ್ದರು.

ಅದಕ್ಕೆ ಕಾರಣವೂ ಇತ್ತು. ಎಸ್ಎಜೆಡ್ ಏರಿಯಾದಲ್ಲಿ ಸ್ಫೋಟ ನಡೆಸಿದರೆ ದೇಶ ಹಾಗೂ ವಿದೇಶಗಳಲ್ಲೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಎಸ್ಇಜೆಡ್ ಏರಿಯಾದಲ್ಲಿ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಐಟಿಬಿಟಿ ಕಂಪನಿಗಳಿವೆ. ಸಾವಿರಾರು ಜನ ಟೆಕ್ಕಿಗಳು ಕೆಲಸ ಮಾಡುತ್ತಾರೆ. ಸಾಕಷ್ಟು ಸುದ್ದಿಯಾಗಿ ತಮ್ಮ ಕೃತ್ಯ ಅಂತಾರಾಷ್ಟ್ರೀಯವಾಗಿ ಮಿಂಚುತ್ತದೆ ಎಂದು ಪಾತಕಿಗಳು ವೈಟ್‌ಫೀಲ್ಡ್‌ನ ಹಲವೆಡೆ ಓಡಾಡಿದ್ದರು.

ಅದರೆ ಐಟಿಬಿಟಿ ಏರಿಯಾದಲ್ಲಿ ಬಾಂಬ್ ಇಡುವುದು ಅಷ್ಟು ಸುಲಭವಲ್ಲ‌ ಎಂದು ಅವರಿಗೆ ಮನವರಿಕೆಯಾಗಿತ್ತು. ಕಂಪನಿಗಳು ಇರುವ ಪ್ರದೇಶದಲ್ಲಿ ಟೈಟ್ ಸೆಕ್ಯುರಿಟಿ, ಸಿಸಿಟಿವಿಗಳ ಕಣ್ಗಾವಲು, ಮೆಟಲ್ ಡಿಟೆಕ್ಟರ್ಸ್ ಕಂಡುಬಂದಿದ್ದು, ಕಂಪನಿ ಕಂಪೌಂಡ್‌ಗಳ ಒಳಗೆ ಹೋಗುವುದು ಅಷ್ಟು ಸುಲಭವಲ್ಲ ಎಂದು ಅರ್ಥವಾಗಿತ್ತು. ನಂತರ ಫ್ಲಾನ್ ಚೇಂಜ್‌ ಮಾಡಿ, ಅದೇ ಪ್ರದೇಶದಲ್ಲಿ ಬ್ಲಾಸ್ಟ್ ಮಾಡಬೇಕು ಎಂದು ತೀರ್ಮಾನಿಸಿದ್ದರು.

ಈ ವೇಳೆ ಅವರಿಗೆ ಕಂಡಿದ್ದು ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆ. ಅತಿ ಹೆಚ್ಚು ಜನ ಸೇರುತ್ತಾರೆ, ಇಲ್ಲಿಗೂ ಟೆಕ್ಕಿಗಳು ಬರುತ್ತಾರೆ. ಕೆಫೆ ಎಂಟ್ರಿಯಾಗಲು ಯಾವುದೇ ಅಡೆತಡೆ ಇರುವುದಿಲ್ಲ. ಸೆಕ್ಯುರಿಟಿ, ಮೆಟಲ್ ಡಿಟೆಕ್ಟರ್ ಕೂಡ ಇಲ್ಲ. ಆದ್ದರಿಂದ ಬಾಂಬ್ ಸ್ಫೋಟ ನಡೆಸಲು ರಾಮೇಶ್ವರಂ ಕೆಫೆ ಸೂಕ್ತ ಸ್ಥಳ ಎಂದು ಸೆಲೆಕ್ಟ್ ಮಾಡಿದ್ದರು. ಅಲ್ಲದೆ ಇದೇ ವೇಳೆ ರಾಮಮಂದಿರ ಕೂಡ ಉದ್ಘಾಟನೆಯಾಗಿದ್ದು, ಈ ಸಮಯದಲ್ಲಿ ಕೆಫೆ ಮುಂಭಾಗದಲ್ಲಿ ಸಂಭ್ರಮಾಚರಣೆ ಕೂಡ ನಡೆದಿತ್ತು.

ಮಾರ್ಚ್ 1ರಂದು ಕೆಫೆಯಲ್ಲಿ ಬಾಂಬ್ ಇಟ್ಟು ಸ್ಫೋಟ ನಡೆಸಲಾಗಿತ್ತು. ಕೇವಲ ಸಿಸಿಟಿವಿ ಫೂಟೇಜ್‌ನ ಪ್ರಾಥಮಿಕ ಸಾಕ್ಷ್ಯಗಳನ್ನು ಇಟ್ಟುಕೊಂಡು ಎನ್‌ಐಎ ದೇಶಾದ್ಯಂತ ಭಾರಿ ಪ್ರಮಾಣದ ತಲಾಶೆ ನಡೆಸಿತ್ತು. ಕೊನೆಗೂ ಕೋಲ್ಕತ್ತಾದಲ್ಲಿ ಪಾತಕಿಗಳು ಸಿಕ್ಕಿಬಿದ್ದಿದ್ದಾರೆ.

ಉಗ್ರರ ಕ್ಲೂ ಸಿಕ್ಕಿದ್ದು ಹೀಗೆ

ಉಗ್ರರು ಕೋಲ್ಕತ್ತಾದಲ್ಲಿಯೇ ಇದ್ದಾರೆ ಎಂಬುದು ಎನ್‌ಐಎಗೆ ಗೊತ್ತಾದದ್ದು ಹೇಗೆ? ಇದೂ ಕುತೂಹಲಕಾರಿಯಾಗಿದೆ. ಮಾರ್ಚ್ 1ರಂದು ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ನಡೆಸಿದ ನಂತರ ಇಬ್ಬರೂ ರಾಜ್ಯದಿಂದ ಎಸ್ಕೇಪ್ ಆಗಿದ್ದರು. ತಮಿಳುನಾಡು, ಒಡಿಶಾಗಳಲ್ಲಿ ಸುತ್ತಾಡಿ ಪಶ್ಚಿಮ ಬಂಗಾಳ ಸೇರಿಕೊಂಡಿದ್ದರು. ಹಲವಾರು ದಿನ ಸುತ್ತಾಡಿ ಕೈಯಲ್ಲಿದ್ದ ಹಣ ಖಾಲಿಯಾಗಿತ್ತು.

ಹ್ಯಾಂಡ್ಲರ್ ಮೂಲಕ ಇವರ ಬೇನಾಮಿ ಅಕೌಂಟ್‌ಗೆ ಹಣ ವರ್ಗಾವಣೆಯಾಗುತ್ತಿತ್ತು. ಶಂಕಿತರು ಬಳಸುತ್ತಿದ್ದ ಅಕೌಂಟ್ ಮಾಹಿತಿಯನ್ನು NIA ಸಂಗ್ರಹಿಸಿತ್ತು. ಇದೇ ಆಧಾರದ ಮೇಲೆ ತನಿಖೆ ಮುಂದುವರಿದಿತ್ತು. ಅಂತಿಮವಾಗಿ ಕೋಲ್ಕತ್ತಾದಲ್ಲಿ ಹಣದ ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಹಾಗಾಗಿ ಕೋಲ್ಕತ್ತಾದಲ್ಲಿ ತನಿಖಾ ತಂಡ ಬೀಡುಬಿಟ್ಟಿತ್ತು.

ನಂತರ ಅಲ್ಲಿನ ಲಾಡ್ಜ್‌ಗಳ ಲೆಡ್ಜರ್‌ಗಳು ಹಾಗೂ ಸಿಸಿಟಿವಿ ಫೂಟೇಜ್‌ಗಳನ್ನು ಇಟ್ಟುಕೊಂಡು ಪರಿಶೀಲಿಸಲಾಗಿತ್ತು. ನಕಲಿ ಗುರುತಿನ ದಾಖಲೆ ನೀಡಿ ಲಾಡ್ಜ್‌ನಲ್ಲಿ ವಾಸವಾಗಿದ್ದ ಉಗ್ರರ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ದಾಳಿ ಮಾಡಿದಾಗ ಸಿಕ್ಕಿಬಿದ್ದಿದ್ದರು.

ಇದನ್ನೂ ಓದಿ: Rameshwaram Cafe Blast: ರಾಮೇಶ್ವರಂ ಕೆಫೆ ಬಾಂಬರ್‌ಗಳಿಗೆ 10 ದಿನ ಎನ್‌ಐಎ ಕಸ್ಟಡಿ; ಮತ್ತಷ್ಟು ಗ್ರಿಲ್‌ ಮಾಡಲು ಪೊಲೀಸರು ಸಜ್ಜು

Exit mobile version