Site icon Vistara News

Road Accident: ಕೂಡ್ಲಿಗಿಯಲ್ಲಿ ಮತ್ತೊಂದು ರಸ್ತೆ ಅಪಘಾತ; ಇಬ್ಬರ ಸಾವು

Road Accident

Road Accident

ವಿಜಯನಗರ: ಕೂಡ್ಲಿಗಿಯ ಎನ್‌ಎಚ್‌ 50 (NH 50) ರಸ್ತೆ ಮೃತ್ಯಕೂಪವಾಗಿ ಪರಿಣಮಿಸುತ್ತಿದೆ. ಈ ರಸ್ತೆ ಪದೇ ಪದೆ ಅಪಘಾತಗಳಿಂದ ಸದ್ದು ಮಾಡುತ್ತಿದೆ. ಇದೀಗ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು, 5 ಮಂದಿ ಗಾಯಗೊಂಡಿದ್ದಾರೆ (Road Accident).

ಇತ್ತೀಚೆಗೆ ಕೂಡ್ಲಿಗಿಯ ಎನ್‌ಎಚ್‌ 50ರಲ್ಲಿ ಟಿಟಿ ಟ್ರಾವೆಲರ್‌ ಅಪಘಾತವಾಗಿ ಓರ್ವ ಮೃತಪಟ್ಟಿದ್ದರು. ಅದು ಮಾಸುವ ಮುನ್ನ ಈಗ ಮತ್ತೆ ಅದೇ ರೀತಿಯ ಅಪಫಾತ ನಡೆದು ಇಬ್ಬರನ್ನು ಬಲಿ ಪಡೆದಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅಪಘಾತ ನಡೆದಿದ್ದು, ಮೃತರನ್ನು ಕಾರು ಚಾಲಕ ವಿನಯ್ (27) ಮತ್ತು ಚನ್ನವಸವ (27) ಎಂದು ಗುರುತಿಸಲಾಗಿದೆ.

ರಾಯಚೂರಿನ ಲಿಂಗಸೂಗೂರಿನಿಂದ ಕೇರಳದ ವಯನಾಡಿಗೆ ಹೊರಟಿದ್ದ ಗೆಳೆಯರ ತಂಡವಿದ್ದ ಕಾರು ಪಲ್ಟಿ ಹೊಡೆದು ಅವಘಡ ನಡೆದಿದೆ. ಅತೀ ವೇಗದಿಂದ ಬಂದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಗಾಯಗೊಂಡ 5 ಮಂದಿಯನ್ನು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೂವರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಯತ್ನ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದ ಕೆನರಾ ಬ್ಯಾಂಕ್ ಬಳಿ ಕುಡಿದು ಗಲಾಟೆ ನಡೆದಿದ್ದು, ವ್ಯಕ್ತಿಯೊಬ್ಬನಿಗೆ ಗಾಯಗಳಾಗಿವೆ. ಕುಡಿದ ಅಮಲಿನಲ್ಲಿ ತೃತೀಯ ಲಿಂಗಿ ಹಾಗೂ ಇಬ್ಬರು ವ್ಯಕ್ತಿಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ತೃತೀಯ ಲಿಂಗಿ ಮತ್ತು ವ್ಯಕ್ತಿಯೊಬ್ಬ ಸೇರಿ ಕತ್ತು ಕೊಯ್ದರೂ ಅದೃಷ್ಟವಶಾತ್‌ ನೌಷದ್ ಎನ್ನುವ ವ್ಯಕ್ತಿ ಬದುಕುಳಿದಿದ್ದಾನೆ.

ಆರೋಪಿಗಳಾದ ಶಕೀಲ ಹಾಗೂ ಸಾದಿಕ್.

ಘಟನೆ ಹಿನ್ನಲೆ

ಮುರುಗಮಲ್ಲ ಗ್ರಾಮದ ಕೆನರಾ ಬ್ಯಾಂಕ್ ಬಳಿಯ ಬಾರ್‌ನಲ್ಲಿ ಕುಡಿದು ಗ್ಯಾಂಗ್ ಗಲಾಟೆ ಮಾಡಿಕೊಂಡಿತ್ತು. ಈ ವೇಳೆ ಮಂಗಳಮುಖಿ ಶಕೀಲ ಹಾಗೂ ಸಾದಿಕ್ ಸೇರಿ ನೌಷದ್ ಮೇಲೆ ದಾಳಿ ನಡೆಸಿ ಕೊಲೆಗೆ ಯತ್ನಿಸಿದರು. ಅವರು ಹರಿತವಾದ ಚಾಕುವಿನಿಂದ ನೌಷದ್ ಕತ್ತು ಕೊಯ್ದಿದ್ದಾರೆ. ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಸದ್ಯ ನೌಷದ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಸ್ಥಳಕ್ಕೆ ಕೆಂಚಾರ್ಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಕೊಲೆ ಯತ್ನ ನಡೆಸಿದ ಶಕೀಲ ಹಾಗು ಸಾದಿಕ್‌ನನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Road Accident: ಮುಧೋಳ ಬಳಿ ಶಾಲಾ ಬಸ್‌ ಹರಿದು 4 ವರ್ಷದ ಬಾಲಕ ಸಾವು

Exit mobile version