ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ (Gollaradoddi Accident) ಬುಧವಾರ ರಾತ್ರಿ ಮನೆ ಪಾಠ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ, ಐವರು ಮಕ್ಕಳ ಮೇಲೆ ವಾಹನವೊಂದು ಡಿಕ್ಕಿ ಹೊಡೆದು (Road accident) ಇಬ್ಬರು ಮಕ್ಕಳು (Accident kills two children) ಮೃತಪಟ್ಟ ಘಟನೆಗೆ ಟ್ವಿಸ್ಟ್ ಸಿಕ್ಕಿದೆ. ರೋಹಿತ್(5), ಶಾಲಿನಿ(8) ಎಂಬ ಇಬ್ಬರು ಮಕ್ಕಳನ್ನು ಬಲಿ ಪಡೆದ ಟಾಟಾ ಏಸ್‌ನ ಚಾಲಕ (TATA Ace vehicle driver) ವಾಹನ ಸಹಿತ ಪೊಲೀಸರಿಗೆ ಶರಣಾಗಿದ್ದಾನೆ (Surrounder to police).
ಬುಧವಾರ ರಾತ್ರಿ ನಡೆದ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದರೆ, ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಈ ನಡುವೆ, ಘಟನೆ ಹೇಗಾಯಿತು, ಡಿಕ್ಕಿ ಹೊಡೆದು ಪರಾರಿಯಾದ ವಾಹನ ಯಾವುದು ಎಂಬುದರ ಬಗ್ಗೆ ತನಿಖೆ ನಡೆಯುತ್ತಿರುವಂತೆಯೇ ಅತ್ತ ಡಿಕ್ಕಿ ಹೊಡೆದು ಪರಾರಿಯಾದ ವಾಯುಪುತ್ರ ಎಂಬ ಹೆಸರಿನ ಟಾಟಾ ಏಸ್ ಮಾಲೀಕ ತನ್ನ ವಾಹನದೊಂದಿಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ.
ಬುಧವಾರ ರಾತ್ರಿ ಎಂಟು ಗಂಟೆಯ ಹೊತ್ತಿಗೆ ಈ ದುರಂತ ಸಂಭವಿಸಿದ್ದು, ಅಪಘಾತ ಮಾಡಿದ ವಾಹನ ನಿಲ್ಲಿಸದೆ ಪರಾರಿಯಾಗಿತ್ತು. ವಾಹನ ಯಾವುದು ಎನ್ನುವ ಬಗ್ಗೆ ಬೇರೆ ಬೇರೆಯವರು ಬೇರೆ ಬೇರೆ ಮಾತು ಆಡಿದ್ದರು. ಒಬ್ಬ ಗ್ರಾಮಸ್ಥ ಮಾತ್ರ ಅದು ಟಾಟಾ ಏಸ್ ವಾಹನ, ಅದರಲ್ಲಿ ವಾಯುಪುತ್ರ ಅಂತ ಹೆಸರಿತ್ತು ಎಂದು ಹೇಳಿದ್ದರು.
ಇದೀಗ ಗುರುವಾರ ಬೆಳಗ್ಗೆ ವಾಯುಪುತ್ರ ಎಂಬ ಹೆಸರಿನ ಟಾಟಾ ವಾಹನದ ಚಾಲಕ ವರದರಾಜು ವಾಹನದೊಂದಿಗೆ ಠಾಣೆಗೆ ಹೋಗಿ ತಪ್ಪೊಪ್ಪಿಕೊಂಡಿದ್ದಾನೆ.
ನಿಜವೆಂದರೆ, ಅಪಘಾತ ಮಾಡಿ ವಾಹನದೊಂದಿಗೆ ಪರಾರಿಯಾಗಿದ್ದ ಚಾಲಕ ವರದರಾಜು ವಾಹನವನ್ನು ದೂರದಲ್ಲಿ ಇಟ್ಟು ಬಂದು ತನಗೇನೂ ಗೊತ್ತಿಲ್ಲ ಎಂಬಂತೆ ನಾಟಕವಾಡಿದ್ದ. ಯಾರು ಅಪಘಾತ ಮಾಡಿದ್ದು ಎಂದು ಗ್ರಾಮಸ್ಥರನ್ನೇ ಕೇಳಿದ್ದ. ಆದರೆ, ಅಪಘಾತ ಮಾಡಿದ್ದು ಟಾಟಾ ಏಸ್. ಅದರ ಹೆಸರು ವಾಯುಪುತ್ರ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದರು. ಇದರ ಆಧಾರ ಮತ್ತು ಸಿಸಿ ಟಿವಿ ಫೂಟೇಜ್‌ಗಳ ಆಧಾರದಲ್ಲಿ ತನಿಖೆ ಮಾಡಿದಾಗ ಇದು ವಾಯುಪುತ್ರನದೇ ಕೃತ್ಯ ಎನ್ನುವುದು ಬಯಲಾಗಿತ್ತು. ಇದೆಲ್ಲದರ ವಿವರ ಪಡೆದುಕೊಂಡ ವರದರಾಜು ಪೊಲೀಸರಿಗೆ ಶರಣಾಗಿದ್ದಾನೆ.
ಇದನ್ನೂ ಓದಿ : Web Series : ವೆಬ್ ಸೀರಿಸ್ ನೋಡಿ ಜ್ಯೋತಿಷಿ ಮಗನ ಕಿಡ್ನಾಪ್; ಹಣಕ್ಕೆ ಬೇಡಿಕೆ ಇಟ್ಟವ ಮೂರೇ ಗಂಟೆಯಲ್ಲಿ ಸಿಕ್ಕಿಬಿದ್ದ!
ಗೊಲ್ಲರದೊಡ್ಡಿ ಅಪಘಾತ: ಕಂಬನಿ ಮಿಡಿದ ಎಚ್.ಡಿ ಕುಮಾರಸ್ವಾಮಿ
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದ ಮಕ್ಕಳಿಬ್ಬರು ಮನೆ ಪಾಠ ಮುಗಿಸಿಕೊಂಡು ಮನೆಗೆ ನಡೆದುಕೊಂಡು ವಾಪಸ್ ಬರುತ್ತಿದ್ದಾಗ ವೇಗವಾಗಿ ಚಲಿಸುತ್ತಿದ್ದ ಅಜಾಗರೂಕ ಸರಕು ವಾಹನದ ಅಪಘಾತಕ್ಕೆ ಸಿಲುಕಿ ದುರ್ಮರಣಕ್ಕೀಡಾಗಿರುವುದು ನನಗೆ ಅತೀವ ದುಃಖ, ಆಘಾತವನ್ನು ಉಂಟು ಮಾಡಿದೆ.
ಚಾಲಕನ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ. ಜೀವ ಕಳೆದುಕೊಂಡ ರೋಹಿತ್(5), ಶಾಲಿನಿ(8) ಕಂದಮ್ಮಗಳಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ. ಮಕ್ಕಳ ಆತ್ಮಕ್ಕೆ ಚಿರಶಾಂತಿ ಸಿಗಲಿ, ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಆ ಕುಟುಂಬಗಳಿಗೆ ನೀಡಲಿ. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಾದ ಸುಚಿತ್, ಗೌತಮಿ, ಲೇಖನಾ ಶೀಘ್ರ ಗುಣಮುಖರಾಗಲಿ.
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದ ಮಕ್ಕಳಿಬ್ಬರು ಮನೆ ಪಾಠ ಮುಗಿಸಿಕೊಂಡು ಮನೆಗೆ ನಡೆದುಕೊಂಡು ವಾಪಸ್ ಬರುತ್ತಿದ್ದಾಗ ವೇಗವಾಗಿ ಚಲಿಸುತ್ತಿದ್ದ ಅಜಾಗರೂಕ ಸರಕು ವಾಹನದ ಅಪಘಾತಕ್ಕೆ ಸಿಲುಕಿ ದುರ್ಮರಣಕ್ಕೀಡಾಗಿರುವುದು ನನಗೆ ಅತೀವ ದುಃಖ, ಆಘಾತವನ್ನು ಉಂಟು ಮಾಡಿದೆ.1/3 pic.twitter.com/zGYTpQqjx1
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) August 10, 2023
ರಾಜ್ಯ ಸರಕಾರವು ಮೃತ ಮಕ್ಕಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಗಾಯಾಳು ಮಕ್ಕಳ ಚಿಕಿತ್ಸೆಯ ವೆಚ್ಚ ಭರಿಸಬೇಕು. ರಸ್ತೆಗಳಲ್ಲಿ ಅತಿವೇಗ ಮತ್ತೂ ಅಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸುವ ಚಾಲಕರ ವಿರುದ್ಧ ಪೊಲೀಸರು ನಿಗಾ ವಹಿಸಿ ಕಠಿಣ ಕ್ರಮ ಜರುಗಿಸಬೇಕು. ಅದರಲ್ಲೂ ಶಾಲಾ ಮಕ್ಕಳ ಸುರಕ್ಷತೆಯ ಕಡೆಗೆ ಹೆಚ್ಚು ಒತ್ತು ನೀಡಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ.