ರಾಮನಗರ: ಕಳೆದ ಆಗಸ್ಟ್ 9ರಂದು ರಾತ್ರಿ 8 ಗಂಟೆಗೆ ರಾಮನಗರ ತಾಲೂಕಿನ ಗೊಲ್ಲರದೊಡ್ಡಿ (Gollaradoddi Accident) ಗ್ರಾಮದಲ್ಲಿ ಷಮ್ ಮುಗಿಸಿ ಮನೆಗೆ ಹೋಗುತ್ತಿದ್ದ ಐದು ಮಕ್ಕಳ ಮೇಲೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಘಟನೆಯಲ್ಲಿ (Road Accident) ಐದು ಮಕ್ಕಳ ಪೈಕಿ ನಾಲ್ಕನೇ ಮಗುವಿನ ಸಾವು (Fourth child death) ಭಾನುವಾರ ಸಂಭವಿಸಿದೆ. ಮಕ್ಕಳ ಸಾವಿನಿಂದ ನೊಂದ ಪೋಷಕರು ಮತ್ತು ಗ್ರಾಮಸ್ಥರು ಸೋಮವಾರ ಬೆಳಗ್ಗೆ ಮಗುವಿನ ಮೃತದೇಹವನ್ನು ರಸ್ತೆಯಲ್ಲಿ ಇಟ್ಟು ಪ್ರತಿಭಟನೆ ನಡೆಸಿದರು.
ರಾಮನಗರ ತಾಲೂಕಿನ ಲಕ್ಷ್ಮೀಪುರದಲ್ಲಿ ನಡೆದ ಘಟನೆಯಲ್ಲಿ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದರೆ ಇನ್ನೂ ಮೂವರು ಮಕ್ಕಳು ಗಾಯಗೊಂಡಿದ್ದರು. ಅಪಘಾತದ ದಿನವೇ ಪುಟಾಣಿಗಳಾದ ಶಾಲಿನಿ ಮತ್ತು ರೋಹಿತ್ ಮೃತಪಟ್ಟಿದ್ದರೆ ಕಳೆದ ಶುಕ್ರವಾರ ಸುಜಿತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಕಳೆದುಕೊಂಡಿದ್ದಾನೆ. ಇದೀಗ ಭಾನುವಾರ ಭುವನೇಶ್ವರಿ ಎಂಬ ಮಗು ಮೃತಪಟ್ಟಿದೆ.
ಇದೀಗ ಪೋಷಕರು ಮತ್ತು ಊರಿನವರು ತಮಗೆ ನ್ಯಾಯ ನೀಡಬೇಕು ಆಗ್ರಹಿಸಿ ರಸ್ತೆಯಲ್ಲಿ ಟಯರ್ ಸುಟ್ಟು ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಮಾತ್ರವಲ್ಲದೆ ಭಾನುವಾರ ಮೃತಪಟ್ಟ ಮಗುವಿನ ಶವವನ್ನೂ ರಸ್ತೆಗೆ ತಂದಿದ್ದಾರೆ. ಈ ಭಾಗದಲ್ಲಿ ವಾಹನಗಳ ವಿಪರೀತ ವೇಗದಿಂದ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದ್ದು, ಜನರ ಜೀವಗಳಿಗೆ ಬೆಲೆ ಇಲ್ಲದಂತಾಗಿದೆ. ಹೀಗಾಗಿ ವೇಗಕ್ಕೆ ಕಡಿವಾಣ ಹಾಕಬೇಕು ಎನ್ನುವುದು ಅವರ ಆಗ್ರಹ.
ಆಗಸ್ಟ್ 9ರಂದು ರಾತ್ರಿ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ (Gollaradoddi Accident) ಟಾಟಾ ಏಸ್ ಒಂದು ಟ್ಯೂಷನ್ ಮುಗಿಸಿ ಮನೆಗೆ ಮರಳುತ್ತಿದ್ದ ಮಕ್ಕಳ ಮೇಲೆ ಟಾಟಾ ಏಸ್ ಡಿಕ್ಕಿ ಹೊಡೆದಿತ್ತು. ಅಂದು ರೋಹಿತ್(5), ಶಾಲಿನಿ(8) ಎಂಬ ಇಬ್ಬರು ಮಕ್ಕಳು ಮೃತಪಟ್ಟಿದ್ದರು.
ಒಂದು ವಾರದ ಬಳಿಕ ಸುಜಿತ್ ಸಾವು
ಒಂದು ವಾರದ ಬಳಿಕ ಗುರುವಾರ ಬೆಳಗ್ಗೆ ಗ್ರಾಮದ ಅನಿಲ್ ಮತ್ತು ವನಿತಾ ದಂಪತಿಯ ಪುತ್ರ ಸುಜಿತ್ ಮೃತಪಟ್ಟಿದ್ದಾನೆ. ಅಂದು ನಡೆದ ಘಟನೆಯಲ್ಲಿ ಐದನೇ ತರಗತಿಯಲ್ಲಿ ಕಲಿಯುತ್ತಿದ್ದ ಸುಜಿತ್ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಅವನಿಗೆ ಮೊದಲು ರಾಮನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಬಿಜಿಎಸ್ ಆಸ್ಪತ್ರೆಯಲ್ಲಿ ಸುಜಿತ್ ತಲೆಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಜಿತ್ ಗುರುವಾರ ಬೆಳಗ್ಗೆ ಉಸಿರು ನಿಲ್ಲಿಸಿದ್ದಾನೆ. ಅಪಘಾತದಲ್ಲಿ ಸುಜಿತ್ ತಂಗಿ, ಮೂರನೇ ತರಗತಿಯಲ್ಲಿ ಕಲಿಯುತ್ತಿರುವ ಗೌತಮಿ ಕೂಡಾ ಗಾಯಗೊಂಡಿದ್ದಾಳೆ. ಆಕೆಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಭಾನುವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭುವನೇಶ್ವರಿ ಎಂಬ ಮಗು ಮೃತಪಟ್ಟಿದ್ದು, ಇದೀಗ ಜನಾಕ್ರೋಶ ಭುಗಿಲೆದ್ದಿದೆ.
ಇದನ್ನೂ ಓದಿ: Road Accident : ಅಪಘಾತದಲ್ಲಿ ಯುವಕ ಸಾವು; ಸುದ್ದಿ ತಿಳಿದು ಸ್ನೇಹಿತನಿಗೆ ಹೃದಯಾಘಾತ!
ಆಗಸ್ಟ್ 10ರಂದು ಒಂದೇ ವಠಾರದ ಐದು ಮಂದಿ ಮಕ್ಕಳು ಟ್ಯೂಷನ್ ಮುಗಿಸಿ ಮನೆಗೆ ಮರಳುತಿದ್ದಾಗ ವಾಹನವೊಂದು ಅವರ ಮೇಲೆ ಹರಿದು ಹೋಗಿತ್ತು. ಅವರಿಗೆ ಡಿಕ್ಕಿಯಾದ ವಾಹನ ಯಾವುದು ಎನ್ನುವುದನ್ನು ಪೊಲೀಸರು ಹುಡುಕಾಡಿದಾಗ ವಾಯುಪುತ್ರ ಎಂಬ ಹೆಸರಿನ ಟಾಟಾ ಏಸ್ ವಾಹನ ಚಾಲಕ ವರದರಾಜು ಮರುದಿನ ಬೆಳಗ್ಗೆ ಬಂದು ಠಾಣೆಗೆ ಹಾಜರಾಗಿದ್ದ.