ಮಂಡಿ-ಪಠಾಣ್ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೊ ವೈರಲ್ ಆದ ನಂತರ ಮೂವರನ್ನು ಬಂಧಿಸಲಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಂಜಾಬ್ ಮೂಲದ ಮೂವರು ವ್ಯಕ್ತಿಗಳು, ಶುಕ್ರವಾರ ಮಧ್ಯಾಹ್ನ 3:00 ರ ಸುಮಾರಿಗೆ ಸುಜಾ ಸಂದ್ರಾಹಲ್ ಗ್ರಾಮದ ನಿವಾಸಿ ನೇಹಾ ವರ್ಮಾ (20) ಎಂಬ ಕಾಲೇಜು ವಿದ್ಯಾರ್ಥಿನಿ ಬಸ್‍ಗಾಗಿ ಕಾಯುತ್ತಿದ್ದಾಗ ಅವಳನ್ನು ಗುರಿಯಾಗಿಸಿಕೊಂಡರು. ನಂತರ ಅವಳಿಂದ ಸರ, ಮೊಬೈಲ್ ಪೋನ್ ಮತ್ತು ಪರ್ಸ್ ಕಸಿದುಕೊಂಡಿದ್ದಾರೆ. ಅವಳ ಕುತ್ತಿಗೆಯಲ್ಲಿದ್ದ ಬ್ಯಾಗ್ ಅನ್ನು ಕಸಿದುಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಆಗ ಅವರು ಆಕೆಯನ್ನು ಹಿಡಿದುಕೊಂಡೇ ಕಾರನ್ನು ಓಡಿಸಿದರು, ನೇಹಾಳನ್ನು ಸುಮಾರು 20 ಅಡಿಗಳಷ್ಟು ಎಳೆದುಕೊಂಡು ಹೋಗಿ ರಸ್ತೆಗೆ ಎಸೆದಿದ್ದಾರೆ.
हिमाचल प्रदेश : मंडी जिले में छात्रा नेहा वर्मा बस का इंतजार कर रही थी। कार सवार गुंडे आए। बैग छीनने की कोशिश की। बैग छात्रा के गले में लटका था। इस कोशिश में छात्रा भी कार की खिड़की पर लटक गई और कुछ दूर तक घिसटती गई। पंजाब के 3 आरोपी पकड़े गए। pic.twitter.com/xRATSwrnic
— Sachin Gupta (@SachinGuptaUP) July 19, 2024
ಈ ಘಟನೆಯ ನಂತರ, ಶಂಕಿತರು ಜೋಗಿಂದರ್ ನಗರದತ್ತ ತೆರಳಿದರು, ಅಲ್ಲಿ ಅವರು ಸಾಯಿ ಬಜಾರ್‌ನಲ್ಲಿ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಹೋಮ್ ಗಾರ್ಡ್ ಅಧಿಕಾರಿ ಮತ್ತು ಮಹಿಳೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು. ಹೋಮ್‌ಗಾರ್ಡ್ ಅಧಿಕಾರಿ ಶಂಕಿತರಲ್ಲಿ ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾದರು, ಆದರೆ ಗೊಂದಲದಲ್ಲಿ, ದಾಳಿಕೋರರು ಅಲ್ಲಿ ನಿಲ್ಲಿಸಿದ್ದ ಐದು ವಾಹನಗಳಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಸ್ಕೂಟರ್‌ಗೆ ಅಪ್ಪಳಿಸಿದ ಕಾರು; 30 ಅಡಿ ದೂರ ಎಗರಿ ಬಿದ್ದ ಮಹಿಳಾ ಕಾನ್‌ಸ್ಟೇಬಲ್
ಅವರು ಅಪ್ರೋಚ್ ರಸ್ತೆಯ ಬಳಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದರು. ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾರಿನ ನಂಬರ್ ಪ್ಲೇಟನ್ನು ಕೂಡ ಬದಲಾಯಿಸಿದರೂ, ಅಂತಿಮವಾಗಿ ಗುಮ್ಮಾದಲ್ಲಿ ಪೊಲೀಸರು ಶಂಕಿತರನ್ನು ಸೆರೆಹಿಡಿದಿದ್ದಾರೆ. ಮೂವರು ವ್ಯಕ್ತಿಗಳನ್ನು ಪಂಜಾಬ್ ಮೂಲದವರು ಎಂದು ಗುರುತಿಸಲಾಗಿದ್ದು, ಈಗ ಪೊಲೀಸ್ ಕಸ್ಟಡಿಯಲ್ಲಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಚಿಕಿತ್ಸೆಗಾಗಿ ಬೈಜನಾಥ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.