Site icon Vistara News

Robbery Case: ಬೆಂಗಳೂರಿನಲ್ಲಿ ಮಿತಿ ಮೀರಿದ ಕಳ್ಳರ ಹಾವಳಿ; ಆನ್‌ಲೈನ್‌ ಡೆಲಿವರಿ ಬಾಯ್‌ಗಳೇ ಇವರ ಟಾರ್ಗೆಟ್‌: Video ಇಲ್ಲಿದೆ

Robbery Case

ಬೆಂಗಳೂರು: ಬೆಂಗಳೂರಿನಲ್ಲಿ ಕಳ್ಳರ ಹಾವಳಿ ಮಿತಿ ಮೀರಿದ್ದು, ಆನ್‌ಲೈನ್‌ ಡೆಲಿವರಿ ನೀಡುವವರೇ ಇವರ ಮುಖ್ಯ ಟಾರ್ಗೆಟ್‌. ಭಯವಿಲ್ಲದೆ ಗಾಡಿ ನಿಲ್ಲಿಸಿದರೆ ಕಳ್ಳರ ಕಾಟ ತಪ್ಪಿದ್ದಲ್ಲ. ಹೀಗಾಗಿ ಆಲ್‌ಲೈನ್‌ ಡೆಲಿವರಿ ಮಾಡುವವರು ಎಚ್ಚರಿಕೆವಹಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ (Robbery Case).

ಡೆಲಿವರಿ ನೀಡುವ ಭರದಲ್ಲಿ ಎಲ್ಲೆಂದರಲ್ಲಿ ಗಾಡಿ ನಿಲ್ಲಿಸಿದರೆ ಕ್ಷಣ ಮಾತ್ರದಲ್ಲಿ ಬ್ಯಾಗ್ ಮಾಯವಾಗುತ್ತದೆ. ವೈಟ್ ಫೀಲ್ಡ್ ಭಾಗದಲ್ಲಿ ಆ. 1ರಂದು ರಸ್ತೆ ಪಕ್ಕ ನಿಂತಿದ್ದ ಡೆಲಿವರಿ ಬಾಯ್ ಬೈಕ್‌ನಲ್ಲಿದ್ದ ಬ್ಯಾಗ್ ಅನ್ನು ಖದೀಮರು ಹಾಡಹಗಲೇ ಎಗರಿಸಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ಟ್ಯಾಗ್ ಮಾಡಿ ಸಾರ್ವಜನಿಕರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಅಮೇಜಾನ್, ಪ್ಲಿಫ್‌ಕಾರ್ಟ್ ಡೆಲಿವರಿ ಬಾಯ್‌ಗಳೇ ಇವರ ಮುಖ್ಯ ಟಾರ್ಗೆಟ್‌. ಆನ್‌ಲೈನ್‌ ಡೆಲಿವರಿ ಬಾಯ್‌ಗಳನ್ನು ಟಾರ್ಗೆಟ್‌ ಮಾಡುವ ಖತರ್ನಾಕ್ ಗ್ಯಾಂಗ್ ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಕ್ಷಣಮಾತ್ರದಲ್ಲಿ ಬ್ಯಾಗ್ ಅಪಹರಿಸಿ ಮಾಯವಾಗುತ್ತದೆ. ಪ್ರಾಡಕ್ಟ್‌ ಡೆಲಿವರಿ ಮಾಡಿ ಬರುವಷ್ಟರಲ್ಲಿ ಬೈಕ್‌ನಲ್ಲಿದ್ದ ಬ್ಯಾಗ್ ಜತೆ ಪರಾರಿ ಆಗುತ್ತದೆ.

ಕಳೆದ ಮೂರ್ನಾಲ್ಕು ದಿನಗಳಲ್ಲಿ ವೈಟ್ ಫೀಲ್ಡ್, ಮಹದೇವಪುರ ಸೇರಿ ಮೂರು ಕಡೆ ಇದೇ ರೀತಿ ಕೈ ಚಳಕ ತೋರಿಸಿರುವ ಕಳ್ಳರ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೊಗಳನ್ನು ಹರಿಯಬಿಟ್ಟು ಎಚ್ಚರದಿಂದಿರುವಂತೆ ಹಲವರು ಮನವಿ ಮಾಡಿದ್ದಾರೆ.

ಮನೆ ಮುಂದೆ ನಿಂತಿದ್ದ ಕಾರಿಗೆ ಹಾನಿ ಮಾಡಿದ ಪುಂಡರು

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಪುಂಡರ ಹಾವಳಿ ಮಿತಿ ಮೀರುತ್ತಿದೆ ಎನುವುದಕ್ಕೆ ಇನ್ನೊಂದು ಉದಾಹರಣೆ ಇಲ್ಲಿದೆ. ತಮ್ಮ ತಮ್ಮ ಮನೆ ಮುಂದೆ ವಾಹನ ನಿಲ್ಲಿಸಿದ್ದರೂ ಸೇಫ್ ಅಲ್ಲ ಎನ್ನುವ ಸ್ಥಿತಿ ಬೆಂಗಳೂರಿನಲ್ಲಿ ನಿರ್ಮಾಣವಾಗಿದೆ. ಮನೆ ಮುಂದೆ ನಿಂತಿದ್ದ ಕಾರಿಗೆ ದುಷ್ಕರ್ಮಿಗಳು ಹಾನಿ ಮಾಡಿದ್ದು, ಇಂತವರ ಕೃತ್ಯಗಳಿಗೆ ಬ್ರೇಕ್ ಯಾವಾಗ? ಎನ್ನುವ ಪ್ರಶ್ನೆ ಎದ್ದಿದೆ.

ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಪುಂಡರು ಅಟ್ಟಹಾಸ ಮೆರೆದಿರುವ ಘಟನೆ ಫ್ರೇಜರ್ ಟೌನ್‌ನ ಮೂರೇ ರೋಡ್‌ನಲ್ಲಿ ನಡೆದಿದೆ. ಮನೆ ಮುಂದೆ ನಿಂತಿದ್ದ ಕಾರಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಶನಿವಾರ ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರಸ್ತೆಯಲ್ಲಿ ನಡೆದು ಬಂದ ಇಬ್ಬರು ಯುವಕರು ನಿಂತಿದ್ದ ಕಾರಿಗೆ ಡ್ಯಾಮೇಜ್ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳಿಗಾಗಿ ಹುಟುಕಾಟ ನಡೆಯುತ್ತಿದೆ.

ಇದನ್ನೂ ಓದಿ: Farmer Death: ಪವರ್ ಟಿಲ್ಲರ್ ಚಕ್ರಕ್ಕೆ ಸಿಲುಕಿ ರೈತ ದಾರುಣ ಸಾವು

ಪಿಎಸ್ಐ ಪರಶುರಾಮ್ ಸಾವು ಪ್ರಕರಣ ಸಿಐಡಿಗೆ ವರ್ಗಾವಣೆ

ಬೆಂಗಳೂರು: ಯಾದಗಿರಿ ಪಿಎಸ್ಐ ಪರಶುರಾಮ್ ಸಾವು ಪ್ರಕರಣವನ್ನು (PSI Parashuram Case) ಸಿಐಡಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ. ಪ್ರಕರಣದ ಹೆಚ್ಚಿನ ತನಿಖೆ ಸಲುವಾಗಿ ಸಿಐಡಿ ಡಿಜಿಪಿಗೆ ಪತ್ರ ಬರೆದ ಗೃಹ ಇಲಾಖೆ, ಪ್ರಕರಣದ ಕೂಲಂಕಷವಾಗಿ ತನಿಖೆ ನಡೆಸುವಂತೆ ಸೂಚನೆ ನೀಡಿದೆ.

Exit mobile version