Site icon Vistara News

Robbery Case : ರಾಯಚೂರಿನಲ್ಲಿ ಸ್ವಾಮೀಜಿ ತಲೆಗೆ ಗನ್ ಇಟ್ಟು ದರೋಡೆ!

Robbery Case

ರಾಯಚೂರು/ಬೆಳಗಾವಿ: ತಲೆಗೆ ಗನ್ ಪಾಯಿಂಟ್ ಹಿಡಿದು ಸ್ವಾಮೀಜಿಯನ್ನು ಬೆದರಿಸಿ ದರೋಡೆ (Robbery Case) ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ನಡೆದಿದೆ. ವಿಜಯಮಹಾಂತೇಶ್ವರ ಶಾಖಾ ಮಠದ ಸ್ವಾಮೀಜಿ ಸಿದ್ದಲಿಂಗಸ್ವಾಮಿ ತಲೆಗೆ ಗನ್ ಪಾಯಿಂಟ್ ಹಿಡಿದು, ಮಠದಲ್ಲಿದ್ದ ಚಿನ್ನಾಭರಣ ಮತ್ತು ಬೆಳ್ಳಿ ಸಾಮಾಗ್ರಿಗಳನ್ನು ಕದ್ದು ಪರಾರಿ ಆಗಿದ್ದಾರೆ.

ಗುರುವಾರ ರಾತ್ರಿ ಮಠಕ್ಕೆ ಬಂದಿದ್ದ ದರೋಡೆಕೋರರು ಮಲಗಲು ಜಾಗ ಕೊಡಿ ಎಂದು ಕೇಳಿಕೊಂಡಿದ್ದರು. ಯಾರೋ ಭಕ್ತರು ಇರಬೇಕೆಂದು ನಂಬಿದ ಸ್ವಾಮೀಜಿ ಆವರಣದಲ್ಲಿ ಮಲಗಿ ಎಂದು ಹೇಳಿದ್ದರು. ರಾತ್ರಿ ತಂಗಿದ್ದ ದರೋಡೆಕೋರರು ಮಧ್ಯ ರಾತ್ರಿ ಎದ್ದು ನೀರು ಕೇಳುವ ನೆಪದಲ್ಲಿ ಬಾಗಿಲು ಬಡಿದಿದ್ದಾರೆ. ವಿಜಯಮಹಾಂತೇಶ್ವರ ಶಾಖಾ ಮಠದ ಸ್ವಾಮೀಜಿ ತಮ್ಮ ಆತ್ಮರಕ್ಷಣೆಗಾಗಿ ಗನ್‌ ಇಟ್ಟುಕೊಂಡಿದ್ದರು. ಅದೇ ಗನ್ ಕಸಿದುಕೊಂಡ ತಲೆಗೆ ಗನ್ ಪಾಯಿಂಟ್‌ ಇಟ್ಟು ಬೆದರಿಸಿದ್ದಾರೆ.

ಮಠದಲ್ಲಿದ್ದ 20 ಲಕ್ಷ ರೂ. ನಗದು ಹಣ, 80 ಗ್ರಾಂ ಚಿನ್ನಾಭರಣ, 7 ಕೆಜಿ ಬೆಳ್ಳಿಯನ್ನೆಲ್ಲ ದೋಚಿ ಪರಾರಿ ಆಗಿದ್ದಾರೆ. ಸ್ಥಳಕ್ಕೆ ಎಎಸ್‌ಪಿ ಹಾಗೂ ಡಿವೈಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಿಂಗಸ್ಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದರೋಡೆಕೋರರಿಗಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

ಚಿಕ್ಕೋಡಿಯಲ್ಲಿ ಮಾರಕಾಸ್ತ್ರ ಹಿಡಿದು ಮನೆಗೆ ನುಗ್ಗಿ ದರೋಡೆ

ತಡರಾತ್ರಿ ಮಾರಕಾಸ್ತ್ರ ಹಿಡಿದು ಮನೆಗೆ ನುಗ್ಗಿದ ದರೋಡೆಕೋರರು ದಂಪತಿಗೆ ಚಾಕುವಿನಿಂದ ಇರಿದು ಮೈಮೇಲಿದ್ದ ಆಭರಣ ಕದ್ದಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಸ್ಟೇಷನ್ ವಸತಿಯಲ್ಲಿ ಘಟನೆ ನಡೆದಿದೆ. ಸಾಹುಬಾಯಿ ಸಂಕಪಾಳ ಹಾಗೂ ಯಮನಪ್ಪ ಸಂಕಪಾಳ ಎಂಬ ದಂಪತಿಗೆ ಹಲ್ಲೆ ನಡೆಸಿದ್ದಾರೆ.

ದಂಪತಿ ಮುಖ‌ ಹಾಗೂ ಹೊಟ್ಟೆಯ ಭಾಗಕ್ಕೆ‌ಮನಸೋ ಇಚ್ಛೆ ಹಲ್ಲೆ‌ ಮಾಡಿದ್ದಾರೆ. ತಡರಾತ್ರಿ ನಡೆದ ಈ ಘಟನೆಯಿಂದ‌‌ ಶೇಡಬಾಳ‌ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ದಂಪತಿಯ ಮೈಮೇಲಿದ್ದ ಒಂದು ತೊಲ ಬಂಗಾರ ಕಸಿದು ಗ್ಯಾಂಗ್ ಪರಾರಿ ಆಗಿದೆ. ಗಾಯಗೊಂಡ ದಂಪತಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದರೋಡೆಕೋರರಿಗಾಗಿ ಹುಡುಕಾಟ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version