ನ್ಯೂಯಾರ್ಕ್: ಚೂರಿ ಇರಿತಕ್ಕೀಡಾಗಿದ್ದ ಲೇಖಕ ಸಲ್ಮಾನ್ ರಶ್ದಿ ಅವರ ಆರೋಗ್ಯದಲ್ಲಿ ಚೇತರಿಕೆ ಉಂಟಾಗಿದ್ದು, ವೆಂಟಿಲೇಟರ್ ನೆರವನ್ನು ತೆರವುಗೊಳಿಸಲಾಗಿದೆ. ಅವರು ಈಗ ಮಾತನಾಡುತ್ತಿದ್ದಾರೆ ಎಂದು ಅವರ ಕೃತಿಗಳ ಏಜೆಂಟ್ ಆಗಿರುವ ಆಂಡ್ರ್ಯೂ ವೇಲ್ ತಿಳಿಸಿದ್ದಾರೆ. ಹೀಗಿದ್ದರೂ, ಬಳಿಕ ಅವರ ಟ್ವೀಟ್ ಡಿಲೀಟ್ ಆಗಿದೆ.
ನ್ಯೂಯಾರ್ಕ್‌ನಲ್ಲಿ ಕಳೆದ ಶುಕ್ರವಾರ ಉಪನ್ಯಾಸ ನೀಡಲು ಆಗಮಿಸಿದ್ದ ಸಲ್ಮಾನ್ ರಶ್ದಿ ಅವರ ಮೇಲೆ ಹದಿ ಮಾಟರ್ (೨೪) ಎಂಬಾತ ಹಲ್ಲೆ ನಡೆಸಿ ಚೂರಿಯಿಂದ ಇರಿದಿದ್ದ. ಗಾಯಗೊಂಡಿದ್ದ ರಶ್ದಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಲ್ಮಾನ್ ರಶ್ದಿ ಅವರ ಸಹವರ್ತಿ ಲೇಖಕ ಅತೀಶ್ ತಾಸೀರ್ ಅವರು ಶನಿವಾರ ಸಂಜೆ ಮಾಡಿರುವ ಟ್ವೀಟ್‌ನಲ್ಲಿ, ರಶ್ದಿ ಅವರು ಚೇತರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಹಲ್ಲೆಯ ಪರಿಣಾಮ ರಶ್ದಿ ಅವರ ಒಂದು ಕಣ್ಣಿನ ದೃಷ್ಠಿ ಕಳೆದುಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: Salman Rushdie attack | ರಶ್ದಿ ದಾಳಿಕೋರನ ವಿರುದ್ಧ ಕೊಲೆ ಯತ್ನ ಕೇಸ್ ದಾಖಲು