ಬೆಂಗಳೂರು: ಸ್ಯಾಂಟ್ರೋ ರವಿಯನ್ನು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಆಸ್ಪತ್ರೆಗೆ ದಾಖಲಿಸಿದ್ದು ಪೂರ್ವಯೋಜಿತ ಸಂಚೇ ಎಂಬ ಅನುಮಾನ ಮೂಡಿದೆ. ಆ ಮೂಲಕ ಆಸ್ಪತ್ರೆಯಲ್ಲಿ ರಹಸ್ಯವಾಗಿ ಬೇರೊಬ್ಬರ ಭೇಟಿಗೆ ಅವಕಾಶ ನೀಡಲಾಯಿತೇ ಎಂಬ ಅನುಮಾನಕ್ಕೆ ಆಸ್ಪದವಾಗಿದೆ.
ಸಿಐಡಿ ಕಚೇರಿಯಲ್ಲಿ ಸಿಸಿ ಕ್ಯಾಮರಾಗಳಿದ್ದು, ಯಾರೇ ಭೇಟಿಯಾಗಲೂ ಬಂದರೂ ದಾಖಲಾಗುತ್ತದೆ. ಅದನ್ನು ತಪ್ಪಿಸಲು ಈ ಸಂಚು ನಡೆಸಿರಬಹುದು ಎನ್ನಲಾಗಿದೆ. ಇದಕ್ಕೆ ಕಾರಣಗಳಿವೆ. ಆತ್ಮಹತ್ಯೆ ಯತ್ನ ನಡೆಸಿದರೂ FIR ದಾಖಲು ಮಾಡಿಲ್ಲ. IPC ಸೆಕ್ಷನ್ 309ರಡಿ ಕೇಸ್ ಮಾಡಬೇಕಿತ್ತು. ಅದು ಒಂದು ವರ್ಷ ಜೈಲು, ದಂಡ ವಿಧಿಸಬಹುದಾದ ಪ್ರಕರಣ. ಸಾಯಲೆಂದು ಆತ ಐದಾರು ಮಾತ್ರೆ ನುಂಗಿದ್ದ ಎನ್ನಲಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಟ್ರೀಟ್‌ಮೆಂಟ್ ನೀಡಲಾಗಿತ್ತು.
ಇದನ್ನೂ ಓದಿ: Santro Ravi Case: ಹೆಚ್ಚು ಮಾತ್ರೆ ನುಂಗಿದ ಸ್ಯಾಂಟ್ರೋ ರವಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು
ಇಲ್ಲಿ ಸಿಐಡಿ ಅಧಿಕಾರಿಗಳ ಮೇಲೂ ಅನುಮಾನ ಮೂಡುತ್ತಿದೆ. ಸಿಐಡಿ ಒಳಗೆ ಯಾರೇ ಬಂದರೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗುತ್ತದೆ. ಯಾರಾದರೊಬ್ಬರು ವಿಚಾರ ಹೊರಗೆ ಬಿಡುತ್ತಾರೆ. ಈ ಹಿನ್ನಲೆಯಲ್ಲಿ ಆಸ್ಪತ್ರೆಗೆ ಸೇರಿಸಿ ಯಾರನ್ನಾದರೂ ಮೀಟ್ ಮಾಡಿಸಿರಬಹುದು. ರವಿ ಆಸ್ಪತ್ರೆಯಲ್ಲಿ ಇರುವ ಒಂದು ಫೋಟೊ ಅಥವಾ ವಿಡಿಯೋ ಕೂಡ ಇಲ್ಲ. ಆತ ಆಸ್ಪತ್ರೆಯಲ್ಲಿ ಇರುವುದನ್ನು ಯಾರೊಬ್ಬರೂ ನೋಡಿಲ್ಲ. ಹೀಗಾಗಿ ಸ್ಯಾಂಟ್ರೊ ರವಿ ಸೂಸೈಡ್ ಕೇಸ್ ಕಟ್ಟುಕಥೆಯಂತೆ ಭಾಸವಾಗುತ್ತಿದೆ.
ಮತ್ತೊಂದು ಕಡೆ ಸ್ಯಾಂಟ್ರೋ ರವಿ ಕಾಟಕ್ಕೆ ಸಿಐಡಿ ಅಧಿಕಾರಿಗಳು ಹೆದರಿದರೇ ಎಂಬ ಅನುಮಾನವೂ ಮೂಡಿದೆ. ಕಸ್ಟಡಿ ಅವಧಿ ಮುಗಿಯುವುದಕ್ಕೂ ಮುನ್ನವೇ ಆತನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಮತ್ತೊಂದು ಕಡೆ ಸಿಸಿಬಿ ಪೊಲೀಸರಿಂದಲೂ ಸ್ಯಾಂಟ್ರೋ ಕಸ್ಟಡಿ ಪಡೆಯಲು ಹಿಂದೇಟು ವ್ಯಕ್ತವಾಗುತ್ತಿದೆ. ಬುಧವಾರ ಮೈಸೂರಿಗೆ ಹೋಗಲು ಸಿಸಿಬಿ ಚಿಂತನೆ ನಡೆಸಿದ್ದು, ಕಸ್ಟಡಿಗೆ ಪಡೆಯದೇ ಜೈಲಿನಲ್ಲೇ ಹೇಳಿಕೆ ಪಡೆಯಲು ತಯಾರು ಮಾಡಿಕೊಳ್ಳುತ್ತಿದ್ದಾರೆ. ಪೊಲೀಸರು ಕೂಡ ಸ್ಯಾಂಟ್ರೋ ರವಿ ಪ್ರಭಾವಕ್ಕೆ ಹೆದರಿದ್ದಾರಾ? ಹಾಗೊಂದು ಅನುಮಾನ ಮೂಡುತ್ತಿದೆ.
ಇದನ್ನೂ ಓದಿ: Santro Ravi Case: ಸಿಐಡಿ ಅಧಿಕಾರಿಗಳಿಂದ ಸ್ಯಾಂಟ್ರೋ ರವಿ 2ನೇ ಪತ್ನಿ ವಿಚಾರಣೆ, ಸ್ಥಳ ಮಹಜರು