Site icon Vistara News

Satellite phone: ರಾಯಚೂರಿನ ಗೂಗಲ್‌ ಗ್ರಾಮದಲ್ಲಿ ಸ್ಯಾಟ್‌ಲೈಟ್‌ ಫೋನ್‌ ಆನ್!‌ ಉಗ್ರಾತಂಕ?

Satellite phone turned on in Google village of Raichur Terrorist scare

ರಾಯಚೂರು: ದೇಶದಲ್ಲಿ ಉಗ್ರ ಚಟುವಟಿಕೆ (Terrorist activity) ಸಂಬಂಧ ಆಗಾಗ ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಲೇ ಇರುತ್ತವೆ. ಈಚೆಗೆ ಶಾರೀಕ್‌ ಎಂಬ ಶಂಕಿತ ಉಗ್ರ ಕುಕ್ಕರ್‌ ಬಾಂಬ್‌ (Cooker bomb) ಅನ್ನು ಮಂಗಳೂರಿನಲ್ಲಿ ಸ್ಫೋಟಿಸಲು ಸಂಚು ರೂಪಿಸಿ, ಸಿಕ್ಕಿಬಿದ್ದಿದ್ದ. ಅದಲ್ಲ, ಹಲವರು ಶಂಕಿತರು ಎನ್‌ಐಎ (NIA team) ಬಲೆಗೆ ಬಿದ್ದಿದ್ದಾರೆ. ಆಗಾಗ ಇಂತಹ ಪ್ರಕರಣಗಳು ನಮ್ಮ ಸುತ್ತಮುತ್ತ ನಡೆಯುತ್ತಿರುವ ಹೊತ್ತಿನಲ್ಲಿಯೇ ರಾಯಚೂರಿನಲ್ಲಿ ಸ್ಯಾಟ್‌ಲೈಟ್ ಪೋನ್‌ವೊಂದು (Satellite phone) ಸದ್ದು ಮಾಡಿದೆ. ಇದು ಈಗ ಆತಂಕಕ್ಕೆ ಕಾರಣವಾಗಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಎಂಬ ಗ್ರಾಮದಲ್ಲಿ ಸ್ಯಾಟ್‌ಲೈಟ್‌ ಫೋನ್‌ವೊಂದು ಒಮ್ಮೆ ಆ್ಯಕ್ವಿವ್ ಆಗಿದೆ. ಬಳಿಕ ಯಾವುದೋ ವ್ಯಕ್ತಿ ಜತೆ ಮಾತುಕತೆ ನಡೆಸಿದ್ದು, ಮತ್ತೆ ಆ ಫೋನ್‌ ಡಿಆ್ಯಕ್ವಿವ್ ಆಗಿದೆ. ಈ ಘಟನೆ ನಡೆದಿದ್ದು, ಸೆಪ್ಟೆಂಬರ್‌ ತಿಂಗಳಿನಲ್ಲಾಗಿದೆ. ಆದರೆ, ವಿಷಯ ತಿಳಿಯುತ್ತಿದ್ದಂತೆ ಗುಪ್ತಚರ ಇಲಾಖೆಯು ಫುಲ್‌ ಅಲರ್ಟ್‌ ಆಗಿದ್ದು, ಫೋನ್‌ ಆ್ಯಕ್ವಿವ್ ಮಾಡಿದವರ ಪತ್ತೆಗೆ ಮುಂದಾಗಿದೆ. ‌

Satellite phone turned on in Google village of Raichur Terrorist scare

ಇದನ್ನೂ ಓದಿ: Karnataka Holiday List 2024: ಈ ವರ್ಷ ಸರ್ಕಾರಿ ನೌಕರರಿಗೆ ಪರಿಮಿತ ರಜೆಗಳೆಷ್ಟು? ಇಲ್ಲಿದೆ ಪಟ್ಟಿ

ಗೂಗಲ್ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಪೋನ್ ಆ್ಯಕ್ವಿವ್ ಆಗಿತ್ತು. ಒಂದೇ ಬಾರಿ ಸ್ಯಾಟಲೈಟ್ ಪೋನ್ ಮೂಲಕ ಸಂಪರ್ಕ ಸಾಧಿಸಲಾಗಿದೆ. ಆದರೆ, ಯಾರು ಕರೆ ಮಾಡಿದ್ದಾರೆ? ಯಾರಿಗೆ ಕರೆ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ. ಹೀಗಾಗಿ ಗೂಗಲ್ ಸುತ್ತಮುತ್ತ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ನಡೆಯುತ್ತಿದೆ ಟ್ರೇಸಿಂಗ್‌ ಕಾರ್ಯ

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಬೇಹುಗಾರಿಕೆ ಸಂಸ್ಥೆಗಳ ಮೂಲಕ‌ ಲೋಕೇಶನ್ ಟ್ರೇಸಿಂಗ್‌ ನಡೆಸಲಾಗುತ್ತಿದೆ. ಈ ಮೂಲಕ ಯಾರು ಕರೆ ಮಾಡಿದ್ದಾರೆ? ಯಾವ ಕಾರಣಕ್ಕೆ ಕರೆ ಮಾಡಿದ್ದಾರೆ? ಇದರ ಹಿಂದಿನ ಉದ್ದೇಶ ಏನು? ಯಾರಿಗೆ ಕರೆ ಮಾಡಿದ್ದಾರೆ? ಎಂಬುದರ ಕುರಿತು ತಿಳಿದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ.

ಉಗ್ರವಾದಿಗಳು ತಮ್ಮ ಇರುವಿಕೆ ಗೊತ್ತಾಗಬಾರದು ಎಂಬ ಕಾರಣಕ್ಕಾಗಿ ಹೆಚ್ಚಾಗಿ ಸ್ಯಾಟ್‌ಲೈಟ್‌ ಫೋನ್‌ಗಳನ್ನು ಬಳಕೆ ಮಾಡುತ್ತಾರೆ. ಹೀಗಾಗಿ ರಾಯಚೂರಿನಲ್ಲಿ ಉಗ್ರರು ಇದ್ದಾರೆಯೇ? ಸ್ಲೀಪರ್‌ ಸೆಲ್‌ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆಯೇ? ಯಾರು ಈ ಕಾರ್ಯವನ್ನು ಮಾಡಿರಬಹುದು? ದೇವದುರ್ಗ ತಾಲೂಕು, ಗೂಗಲ್‌ ಗ್ರಾಮ ಸಹಿತ ಸುತ್ತಮುತ್ತ ಅನುಮಾನಾಸ್ಪದ ವ್ಯಕ್ತಿಗಳು ಯಾರಾದರೂ ಇದ್ದಾರೆಯೇ? ಎಂಬಿತ್ಯಾದಿ ವಿಷಯಗಳ ಮೇಲೆ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

ಚುರುಕುಗೊಂಡಿರುವ ತನಿಖೆ

ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ, ಆ ಗೂಗಲ್‌ ಗ್ರಾಮಕ್ಕೆ ಈಚೆಗೆ ಯಾರಾದರೂ ಹೊಸಬರು ಬಂದಿದ್ದಾರೆಯೇ? ಇಲ್ಲವೇ ಅಲ್ಲಿಯೇ ನೆಲೆಸಿದ್ದವರು ಬಹಳ ತಿಂಗಳ ಕಾಲ ಹೊರದೇಶಕ್ಕೋ, ಪರ ಊರಿಗೋ ಹೋಗಿ ವಾಪಸಾಗಿದ್ದಾರೆಯೇ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ರೀತಿಯಾಗಿ ಸಣ್ಣ ಜಾಡು ಸಿಕ್ಕರೂ ಪೊಲೀಸರು ಶಂಕಿತರನ್ನು ವಶಕ್ಕೆ ಪಡೆದುಕೊಳ್ಳಲಿದ್ದಾರೆ. ಆದರೆ, ಈ ವರೆಗೆ ಅಂತಹ ಯಾವುದೇ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Security Breach in Lok Sabha: ಸ್ಥಳೀಯ ಹೋರಾಟಗಾರರಿಗೂ ಲಿಂಕ್‌? ರಾಜ್ಯ ಗುಪ್ತಚರ ಇಲಾಖೆ ಇನ್ನಷ್ಟು ತನಿಖೆ

ಗೂಗಲ್‌ ಗ್ರಾಮದ ಜನರಲ್ಲಿ ಮೂಡಿದ ಆತಂಕ

ಇನ್ನು ತಮ್ಮ ಗ್ರಾಮದಲ್ಲಿ ಸ್ಯಾಟ್‌ಲೈಟ್‌ ಫೋನ್‌ವೊಂದು ಆ್ಯಕ್ವಿವ್ ಆಗಿತ್ತು ಎಂಬ ಸುದ್ದಿ ಕೇಳಿ ಗ್ರಾಮದ ಜನರು ಆತಂಕಕ್ಕೆ ಈಡಾಗಿದ್ದಾರೆ. ತಮಗೆ ಅರಿವೇ ಇಲ್ಲದಂತೆ ಇಂತಹ ಕೃತ್ಯ ನಡೆದೆದಿಯೇ ಎಂದು ಭಯಗೊಂಡಿದ್ದಾರೆ. ಇದನ್ನು ಬೇರೆ ಕಡೆಯಿಂದ ಯಾರಾದರೂ ಬಂದು ಮಾಡಿರಬಹುದೇ ಎಂಬ ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ. ಪ್ರಕರಣ ಈಗ ತನಿಖಾ ಹಂತದಲ್ಲಿದೆ.

Exit mobile version