Site icon Vistara News

Self Harm: ಇಂಟರ್‌ನೆಟ್‌ ದ್ವೇಷದ ಕಾಮೆಂಟ್‌ಗಳಿಗೆ ನೊಂದು ಆತ್ಮಹತ್ಯೆ ಮಾಡಿಕೊಂಡ ಕ್ವಿಯರ್‌ ಕಲಾವಿದ

queer artist

ಉಜ್ಜಯಿನಿ: ಸಾಮಾಜಿಕ ಜಾಲತಾಣ Instagramನಲ್ಲಿ ತನ್ನ ವಿರುದ್ಧ ಪದೇ ಪದೆ ಬರುತ್ತಿದ್ದ ದ್ವೇಷದ, ಮನನೋಯಿಸುವ ಕಾಮೆಂಟ್‌ಗಳಿಂದ (hate comments) ನೊಂದ ಕ್ವಿಯರ್‌ (Queer) ಕಲಾವಿದರೊಬ್ಬರು ಆತ್ಮಹತ್ಯೆ (Self Harm) ಮಾಡಿಕೊಂಡ ಘಟನೆ ನಡೆದಿದೆ.

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಘಟನೆ ನಡೆದಿದ್ದು, 16 ವರ್ಷದ ಪ್ರಾಂಶು ಆತ್ಮಹತ್ಯೆ ಮಾಡಿಕೊಂಡ ಕಲಾವಿದ. ಆತ ಮಂಗಳವಾರ ತಮ್ಮ ತಾಯಿಯ ದುಪಟ್ಟಾದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಪ್ರಾಂಶು ಸಿನಿಮಾ ನಟ ನಟಿಯರಿಗೆ ಮೇಕಪ್ ಕಲಾವಿದರಾಗಿದ್ದರು. Instagramನಲ್ಲಿ ಮೇಕಪ್ ಮತ್ತು ಸೌಂದರ್ಯಕ್ಕೆ ಸಂಬಂಧಿಸಿದ ವಿಷಯವನ್ನು ಹಂಚಿಕೊಳ್ಳುತ್ತಿದ್ದ ಅವರಿಗೆ ಅಲ್ಲಿ 14,500ಕ್ಕೂ ಹೆಚ್ಚು ಫಾಲೋವರ್ಸ್‌ ಇದ್ದರು. ದೀಪಾವಳಿಯ ಸಮಯದಲ್ಲಿ, ಪ್ರಾಂಶು ತಾನು ಸೀರೆ ಧರಿಸಿದ್ದ ರೀಲ್‌ನ್ನು ಪೋಸ್ಟ್ ಮಾಡಿದ್ದರು. ಅದಕ್ಕೆ ಅನೇಕ ಜನ ದ್ವೇಷಪೂರಿತ ಮತ್ತು ಹೋಮೋಫೋಬಿಕ್ (ಸಲಿಂಗಕಾಮ ದ್ವೇಷಿ) ಟೀಕೆಗಳನ್ನು ಮಾಡಿದ್ದರು.

ʼʼಕಲಾವಿದ ಪ್ರಾಂಶು ಅವರಿಗೆ ಇನ್‌ಸ್ಟಾಗ್ರಾಂನಲ್ಲಿ 4,000ಕ್ಕೂ ಹೆಚ್ಚು ಹೋಮೋಫೋಬಿಕ್ ಟೀಕೆಗಳು ಕಾಮೆಂಟ್ ವಿಭಾಗದಲ್ಲಿ ಬಂದಿವೆ. ಅದು ಅವರನ್ನು ಆತ್ಮಹತ್ಯೆಗೆ ಪ್ರಚೋದಿಸಿದೆ. ಪ್ರಾಂಶು ತಮ್ಮ Instagram ಹ್ಯಾಂಡಲ್‌ನಲ್ಲಿ 16,500ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರು. glamitupwithpranshu” ಎಂದು ‘ಮೇಡ್ ಇನ್ ಹೆವನ್’ ವೆಬ್ ಸರಣಿಯ ನಟ ತ್ರಿನೇತ್ರ ಹಲ್ದಾರ್ ಗುಮ್ಮರಾಜು ಅವರು ಪೋಸ್ಟ್ ಮಾಡಿದ್ದಾರೆ.

“ಮೆಟಾ ಒಡೆತನದ Instagramನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು LGBTQ ಸಮುದಾಯದ ಜನರಿಗೆ ಸುರಕ್ಷಿತ ಸ್ಥಳ ಒದಗಿಸಲು ವಿಫಲವಾಗಿವೆ” ಎಂದು ನಟ ತ್ರಿನೇತ್ರ ಅಸಮಾಧಾನ ಹೊರಹಾಕಿದ್ದಾರೆ. ಈ ಘಟನೆ ಬಳಿಕ LGBTQ ಸಮುದಾಯದ ಹಲವಾರು ಸದಸ್ಯರು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಮಾತನಾಡಿದ ನಾಗ್‌ಜಿರಿ ಪೊಲೀಸ್ ಠಾಣೆಯ ಉಸ್ತುವಾರಿ ಕೆಎಸ್ ಗೆಹ್ಲೋಟ್ ಅವರು, “ಆತ್ಮಹತ್ಯೆಗೆ ನಿಖರವಾದ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಈ ವಿಷಯದಲ್ಲಿ ತನಿಖೆ ನಡೆಯುತ್ತಿದೆ” ಎಂದಿದ್ದಾರೆ.

ಇದನ್ನೂ ಓದಿ: Self Harming : ಯುವಕನ ಸಾವಿನಿಂದ ನೊಂದ ತಾಯಿ, ಸೋದರಿ ಆತ್ಮಹತ್ಯೆ

Exit mobile version