Site icon Vistara News

Self Harming: ಐಎಎಸ್‌ ದಂಪತಿ ಪುತ್ರಿ ಬಹುಮಹಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

Self Harming

ಮುಂಬೈ: ಮಹಾರಾಷ್ಟ್ರದ ಐಎಎಸ್‌ ದಂಪತಿ(IAS Officers) ಪುತ್ರಿ ಬಹುಮಹಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆ(Self Harming)ಗೆ ಶರಣಾಗಿದ್ದಾಳೆ. ದಕ್ಷಿಣ ಮುಂಬೈಯ ಮಂತ್ರಾಲಯ ಸಮೀಪದಲ್ಲಿರುವ ಕಟ್ಟಡದ 10 ಮಹಡಿಯಿಂದ ಲಿಪಿ ಎಂಬ ಯುವತಿ ಹಾರಿ ಸೂಸೈಡ್‌ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಕಚೇರಿ ಬಳಿ ಇರುವ ಕಟ್ಟಡದಿಂದ ಸೋಮವಾರ ಬೆಳ್ಳಂಬೆಳಗ್ಗೆ 4 ಗಂಟೆಗೆ ಹಾರಿದ್ದಾಳೆ.

ಐಎಎಸ್‌ ಅಧಿಕಾರಿ ಪುತ್ರಿಯಾಗಿರುವ ಲಿಪಿ ಕಾನೂನು ಪದವಿ ಓದುತ್ತಿದ್ದಳು. ಹರ್ಯಾಣದ ಸೋನಿಪತ್‌ ಕಾಲೇಜಿನಲ್ಲಿ ಎಲ್‌ಎಲ್‌ಬಿ ವ್ಯಾಸಾಂಗ ಮಾಡುತ್ತಿದ್ದಳು. ಆಟ-ಪಾಠ ಎರಡರಲ್ಲೂ ಆಕೆ ಸದಾ ಮುಂದಿದ್ದಳು ಎನ್ನಲಾಗಿದೆ. ಇನ್ನು ಲಿಪಿಯ ತಂದೆ ವಿಕಾಸ್‌ ರಸ್ತೋಗಿ ಮಹಾರಾಷ್ಟ್ರದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನು ಲಿಪಿಯ ತಾಯಿ ರಾಧಿಕಾ ಕೂಡ ಐಎಎಸ್‌ ಅಧಿಕಾರಿಯಾಗಿ ಕಾರ್ಯನಿರ್ಹಿಸುತ್ತಿದ್ದಾರೆ.

ಕಟ್ಟಡದ ಮೇಲಿನಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸುವ ಮುನ್ನವೇ ಕೊನೆಯುಸಿರೆಳೆದಿದ್ದಾಳೆ. GT ಆಸ್ಪತ್ರೆ ವೈದ್ಯರು ಆಕೆ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಇನ್ನು ಘಟನಾ ಸ್ಥಳದಲ್ಲಿ ಆಕೆ ಬರೆದ ಡೆತ್‌ನೋಟ್‌ ದೊರೆತಿದ್ದು, ತನ್ನ ಸಾವಿಗೆ ಯಾರೂ ಹೊಣೆಯಲ್ಲ. ಇದು ತನ್ನದೇ ನಿರ್ಧಾರ ಎಂದು ಬರೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಫೆ ಪರೇಡ್‌ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

2017ರಲ್ಲಿ ಇಂತಹ ಮತ್ತೊಂದು ಘಟನೆ ನಡೆದಿದ್ದು, ಮಹಾರಾಷ್ಟ್ರದ ಹಿರಿಯ ಐಎಎಸ್ ದಂಪತಿಯ 22 ವರ್ಷದ ಮಗ ಬಹುಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಮಲಬಾರ್ ಹಿಲ್ ಪೊಲೀಸರ ಪ್ರಕಾರ, ಬೆಳಿಗ್ಗೆ 7 ಗಂಟೆ ಸುಮಾರಿಗೆ ಮನ್ಮತ್ ಮ್ಹೈಸ್ಕರ್ ತನ್ನ ಮರೀನ್ ಡ್ರೈವ್ ಹೋಮ್, ಬ್ಲೂ ಹೆವನ್ ಅಪಾರ್ಟ್‌ಮೆಂಟ್‌ನಿಂದ ಹೊರಟು, ಹತ್ತಿರದ ಮಲಬಾರ್ ಹಿಲ್‌ನಲ್ಲಿ ಸ್ನೇಹಿತನನ್ನು ಭೇಟಿಯಾಗಲು ಹೋಗುವುದಾಗಿ ತಿಳಿಸಿದ್ದ. ಆದರೆ, ಕೇವಲ ಅರ್ಧ ಗಂಟೆಯ ನಂತರ, ಮನ್ಮಥ್ ನೇಪಿಯನ್ ಸಮುದ್ರ ರಸ್ತೆಯಲ್ಲಿರುವ ದರಿಯಾ ಮಹಲ್ ಕಟ್ಟಡದಿಂದ ಜಿಗಿದಿದ್ದಾನೆ. ತಲೆಗೆ ಗಂಭೀರ ಗಾಯಗಳಾಗಿದ್ದು, ಅವರು ತಕ್ಷಣ ಸಾವನ್ನಪ್ಪಿದ್ದಾರೆ ಎಂದು ನಂಬಲಾಗಿದೆ. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ್ದಾರೆ. ಕೂಡಲೇ ಅವರನ್ನು ಸರ್ ಜೆಜೆ ಆಸ್ಪತ್ರೆಗೆ ಕರೆದೊಯ್ದು ದಾಖಲಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಇದನ್ನೂ ಓದಿ:PM Narendra Modi: ವಿಕಸಿತ ಭಾರತಕ್ಕೆ ಭದ್ರ ಅಡಿಪಾಯ; ದೇಶದ ಜನತೆಗೆ ಮೋದಿ ಭಾವುಕ ಪತ್ರ

Exit mobile version