ಟೆಕ್ಸಾಸ್: ಮಗುವಿನಿಂದ ತಂದೆಗೆ ವಿದಾಯ ಹೇಳಿಸಿದ ಬಳಿಕ ಮಹಿಳೆಯೊಬ್ಬಳು ಮಗುವನ್ನು ಗುಂಡಿಕ್ಕಿ (shot) ಕೊಂದು ತಾನು ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ನ್ಯೂಯಾರ್ಕ್ ನ (New York) ಟೆಕ್ಸಾಸ್ ನ (Texas) ಸ್ಯಾನ್ ಆಂಟೋನಿಯೊದ ಉದ್ಯಾನವನದಲ್ಲಿ ಮಾರ್ಚ್ 19ರಂದು ನಡೆದಿದೆ. ಸವನ್ನಾ ಕ್ರಿಗರ್ (32) ಮತ್ತು ಆಕೆಯ ಮಗ ಕೈಡೆನ್ (3) ಮೃತರು.
ಟೆಕ್ಸಾಸ್ ನಲ್ಲಿ ಮಗು ಕೈಡೆನ್ ಜೊತೆ ವಾಸವಿದ್ದ ಸವಾನ್ನಾ ಕ್ರಿಗರ್ ಇದಕ್ಕೂ ಮೊದಲು ತನ್ನ ಮದುವೆಯ ಫೋಟೋಗಳನ್ನು ಚಿತ್ರೀಕರಿಸುವುದು, ಮಾಜಿ ಗಂಡನ ನಿವಾಸವನ್ನು ಧ್ವಂಸಗೊಳಿಸುವುದು, ವೀಡಿಯೊಗಳು ಮತ್ತು ಬೆದರಿಕೆ ಸಂದೇಶಗಳನ್ನು ಕಳುಹಿಸಿ ಮಾಜಿ ಗಂಡನಿಗೆ ಬೆದರಿಕೆ ಒಡ್ಡಿದ್ದಳು.
ಮಾರ್ಚ್ 18ರ ಮಧ್ಯಾಹ್ನ ಕ್ರಿಗರ್ ಕೆಲಸ ತೊರೆದು ತನ್ನ ಮಾಜಿ ಗಂಡನ ಮನೆಗೆ ಹೋಗಿದ್ದು, ಆತ ಕೆಲಸಕ್ಕೆ ಹೋಗಿದ್ದ. ಬಳಿಕ ಆಕೆ ಅವರ ನಿವಾಸಕ್ಕೆ ಹಾನಿ ಮಾಡಿದ್ದಳು.
ಬಳಿಕ ತನ್ನ ಮನೆಗೆ ಮರಳಿ ತನ್ನ ಮದುವೆಯ ಉಡುಪು ಮತ್ತು ಭಾವಚಿತ್ರಗಳನ್ನು ಹಾಸಿಗೆಯ ಮೇಲೆ ಜೋಡಿಸಿದಳು. ಅದರ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ಒಂದು ಸಂದೇಶದಲ್ಲಿ, ಆಕೆ ನೀನು ಈಗ ಮನೆಗೆ ಹೋಗಲು ಏನೂ ಇಲ್ಲ. ನೀವು ನಿಜವಾಗಿಯೂ ಇಲ್ಲ. ದಿನದ ಕೊನೆಯಲ್ಲಿ ನೀವು ಏನನ್ನೂ ಹೊಂದಿರುವುದಿಲ್ಲ ಎಂದು ಕ್ರಿಗರ್ ಹೇಳಿದ್ದು, ಮಾಜಿ ಪತಿಗೆ ಕಳುಹಿಸಿದ ಕೊನೆಯ ಸಂದೇಶದಲಿ ನಿಮ್ಮ ಮಗನಿಗೆ ವಿದಾಯ ಹೇಳಿ ಎಂದು ಬರೆದಿದ್ದಳು.
ಇದನ್ನು ನೋಡಿ ಆಕೆಯ ಮಾಜಿ ಪತಿ ಕೂಡಲೇ ಧಾವಿಸಿ ಬಂದಾಗ ಕ್ರಿಗರ್ ಮತ್ತು ಆಕೆಯ ಮಗನ ಮೃತದೇಹ ಉದ್ಯಾನವನದ ಕಂದಕದಲ್ಲಿ ಪತ್ತೆಯಾಗಿವೆ.
ಇದನ್ನೂ ಓದಿ: Human trafficking: ಕೆಲಸ ಕೊಡಿಸೋದಾಗಿ ನಂಬಿಸಿ ರಷ್ಯಾ-ಉಕ್ರೇನ್ ಯುದ್ಧ ಪೀಡಿತ ಪ್ರದೇಶಕ್ಕೆ ರವಾನೆ-ಇಬ್ಬರು ಅರೆಸ್ಟ್
ಸಾಲಬಾಧೆಯಿಂದ ಗೃಹಿಣಿ ಆತ್ಮಹತ್ಯೆ
ಸಾಲಬಾಧೆ ತಾಳಲಾರದೇ ಗೃಹಿಣಿಯೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಅರಳಗುಪ್ಪೆಯಲ್ಲಿ ಇತ್ತೀಚೆಗೆ ನಡೆದಿತ್ತು. ಭಾಗ್ಯಮ್ಮ (50) ಮೃತರು.
ಭಾಗ್ಯಮ್ಮ ಮೈಕ್ರೋ ಫೈನಾನ್ಸ್ ಕಂಪೆನಿಯಲ್ಲಿ 5 ಲಕ್ಷ ಸಾಲ ಪಡೆದಿದ್ದರು. ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತೀವ್ರ ಬರಗಾಲ ಹಿನ್ನೆಲೆಯಲ್ಲಿ ಹಣ ಕಟ್ಟಲು ಸಾಧ್ಯವಾಗದೇ ಅವರು ಆತ್ಮಹತ್ಯೆ ದಾರಿ ತುಳಿದಿದ್ದಾರೆ. ಈ ಕುರಿತು ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
20 ವರ್ಷಗಳಲ್ಲಿ ಐಐಟಿಯ 115 ವಿದ್ಯಾರ್ಥಿಗಳು ಆತ್ಮಹತ್ಯೆ
ಮುಂಬಯಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ – IIT) 115 ವಿದ್ಯಾರ್ಥಿಗಳು 2005ರಿಂದೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಇವುಗಳಲ್ಲಿ 98 ಕ್ಯಾಂಪಸ್ ಆವರಣದಲ್ಲಿ 17 ಕ್ಯಾಂಪಸ್‌ನಿಂದ ಹೊರಗೆ ಮೃತಪಟ್ಟಿದ್ದಾರೆ. 56 ಮಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಕಳವಳಕಾರಿ ಅಂಶ ಇತ್ತೀಚಿಗೆ ಬಹಿರಂಗವಾಗಿದೆ.
ಐಐಟಿ ಕಾನ್ಪುರದ ಹಳೆಯ ವಿದ್ಯಾರ್ಥಿ ಮತ್ತು ಗ್ಲೋಬಲ್ ಐಐಟಿ ಅಲುಮ್ನಿ ಸಪೋರ್ಟ್ ಗ್ರೂಪ್‌ನ ಸಂಸ್ಥಾಪಕ ಧೀರಜ್ ಸಿಂಗ್ ಅವರು ಕೇಳಿದ ಮಾಹಿತಿ ಹಕ್ಕು (ಆರ್‌ಟಿಐ) ಪ್ರಶ್ನೆಯ ಮೂಲಕ ಸ್ವೀಕರಿಸಿದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.