ಮುಂಬೈ: ಮಹಿಯೊಬ್ಬಳು 15 ವರ್ಷದ ಬಾಲಕನ ಮೇಲೇ ಲೈಂಗಿಕ ದೌರ್ಜನ್ಯ (Sexual Abuse) ಎಸಗಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ಮಹಿಳೆಯ ವಿರುದ್ಧ ಪೋಸ್ಕೋ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Bihar : ಲೈಂಗಿಕ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಬಸ್ಸಿನಿಂದ ಹಾರಿದ ಮಹಿಳೆ
32 ವರ್ಷದ ವಿವಾಹಿತ ಮಹಿಳೆ ಬಾಲಕನ ಕುಟುಂಬಕ್ಕೆ ಪರಿಚಯಸ್ಥಳಾಗಿದ್ದು, ಇತ್ತೀಚೆಗೆ ನಾಸಿಕ್‌ನ ಕಲ್ಯಾಣ್‌ದಲ್ಲಿರುವ ಅವರ ಮನೆಗೆ ಬಂದಿದ್ದಳು. ಆಗಲೇ ಆಕೆಗೆ ಬಾಲಕನ ಮೇಲೆ ಪ್ರೀತಿ ಹುಟ್ಟಿದ್ದು, ಬಾಲಕನಿಗೆ ತನ್ನೊಂದಿಗೆ ದೈಹಿಕ ಸಂಬಂಧ ಇಟ್ಟುಕೊಳ್ಳುವಂತೆ ಪುಸಲಾಯಿಸಿದ್ದಾಳೆ. ಬಾಲಕನಿಗೆ 20,000 ರೂ. ಮೌಲ್ಯದ ಫೋನ್ ಅನ್ನೂ ಕೊಡಿಸಿದ್ದಾಳೆ.
ಮಹಿಳೆಯು ಬಾಲಕನ ಮನೆಯಿಂದ ಹೋದ ನಂತರವೂ ಆತನಿಗೆ ಕರೆ ಮಾಡಿ ಸಂಪರ್ಕ ಬೆಳೆಸಿದ್ದಾಳೆ. ಬಾಲಕನ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದ ಹಿನ್ನೆಲೆ ಪೋಷಕರು ನಿಜಾಂಶವನ್ನು ತಿಳಿದುಕೊಳ್ಳಲು ಯತ್ನಿಸಿದ್ದಾರೆ. ಶಾಲೆಯ ಶಿಕ್ಷಕರ ಸಹಾಯವನ್ನೂ ಪಡೆದುಕೊಳ್ಳಲಾಗಿದೆ. ಶಿಕ್ಷಕರು ಬಾಲಕನನ್ನು ಕರೆದು ವಿಚಾರಿಸಿದಾಗ ಆತ ನಡೆದ ವಿಚಾರ ತಿಳಿಸಿದ್ದಾನೆ.
ಇದನ್ನೂ ಓದಿ: Wrestlers Protest | ಲೈಂಗಿಕ ಕಿರುಕುಳ ಪ್ರಕರಣ; ಕುಸ್ತಿಪಟುಗಳ ಹೋರಾಟ ಅಂತ್ಯ
ಈ ವಿಚಾರವಾಗಿ ಬಾಲಕನ ಪೋಷಕರು ಮಹಿಳೆಗೆ ಎಚ್ಚರಿಕೆ ನೀಡಿದ್ದು, ಸಂಪರ್ಕ ಮಾಡದಿರುವಂತೆ ತಿಳಿಸಿದ್ದಾರೆ. ಆದರೂ ಸುಮ್ಮನಾಗದ ಮಹಿಳೆ ಬಾಲಕನನ್ನು ಸಂಪರ್ಕಿಸಿದ್ದು, ಆತನನ್ನು ಭೇಟಿಯಾಗಿರುವುದಾಗಿಯೂ ಹೇಳಲಾಗಿದೆ. ಆ ಹಿನ್ನೆಲೆ ಪೋಷಕರು ಮಹಿಳೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಕೊಲ್ಸೆವಾಡಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.