ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಶ್ರದ್ಧಾ ವಾಲ್ಕರ್‌ಳನ್ನು (Shraddha Walker) ಅಫ್ತಾಬ್ ಅಮೀನ್ ಪೂನಾವಾಲಾ (Aftab Ameen Poonawalla) ಎಂಬಾತ ಆರು ತಿಂಗಳ ಹಿಂದೆಯೇ ಕೊಲೆ ಮಾಡಿ, ಆಕೆಯ ದೇಹವನ್ನು 35 ಭಾಗಗಳಾಗಿ ತುಂಡರಿಸಿ, ದೆಹಲಿಯ 18 ಕಡೆ ಎಸೆದ ವಿಕೃತ ಪ್ರಕರಣವು (Delhi Crime) ದೇಶಾದ್ಯಂತ ಅಚ್ಚರಿ ಮೂಡಿಸಿದೆ.
ಹಾಗೆಯೇ, ಆರು ತಿಂಗಳಿನಿಂದ ಯುವತಿ ನಾಪತ್ತೆಯಾಗಿದ್ದ ಪ್ರಕರಣವನ್ನು, ಅದರಲ್ಲೂ, ಆಕೆಯ ಬಗ್ಗೆ ಯಾವುದೇ ಮಾಹಿತಿ ಸಿಗದ ಪ್ರಕರಣವನ್ನು ಪೊಲೀಸರು ಭೇದಿಸಿರುವುದು ಗಮನ ಸೆಳೆದಿದೆ. ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ, ಅದು ಪ್ರೀತಿಯಾಗಿಯೂ ಮಾರ್ಪಾಡಾಗಿದೆ. ಬಳಿಕ, ಪೋಷಕರ ವಿರೋಧವನ್ನೂ ಧಿಕ್ಕರಿಸಿ ಅಫ್ತಾಬ್‌ನ ಜತೆ ದೆಹಲಿಗೆ ಬಂದು ಪ್ರಿಯತಮನಿಂದಲೇ ಹತ್ಯೆಗೀಡಾದ ಶ್ರದ್ಧಾಳ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳೇ ಕೊಲೆ ಪ್ರಕರಣ ಭೇದಿಸಲು ಕಾರಣವಾಗಿವೆ.
ಪೋಷಕರಿಂದ ಸಂಪರ್ಕ ಕಡಿದುಕೊಂಡು ದೆಹಲಿಯಲ್ಲಿ ಪ್ರಿಯತಮನ ಜತೆ ವಾಸಿಸುತ್ತಿದ್ದ ಶ್ರದ್ಧಾಳ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳ ಮೇಲೆ ಆಕೆಯ ಪೋಷಕರು ನಿಗಾ ಇಟ್ಟಿದ್ದರು. ಯಾವಾಗ, ಶ್ರದ್ಧಾ ಜಾಲತಾಣಗಳಲ್ಲಿ ಪೋಸ್ಟ್ ಹಾಕುವುದು ಕಡಿಮೆಯಾಯಿತೋ ಪೋಷಕರಿಗೆ ಅನುಮಾನ ಶುರುವಾಯಿತು. ಅದರಂತೆ, ಅವರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ತಕ್ಷಣ ತಂತ್ರಜ್ಞಾನ ಬಳಸಿ ಹಾಗೂ ಗುಪ್ತಚರ ಮಾಹಿತಿ ಆಧರಿಸಿ ತನಿಖೆ ಆರಂಭಿಸಿದರು. ಚುರುಕಿನ ತನಿಖೆಯ ನಂತರವೇ ಪ್ರಕರಣ ಬಯಲಾಗಿದೆ.
ಇದನ್ನೂ ಓದಿ | Delhi Crime | ಹೆಣ ಇಡಲು ಫ್ರಿಡ್ಜ್, ದುರ್ನಾತ ತಡೆಯಲು ಅಗರಬತ್ತಿ, ಟಿವಿ ಶೋ ನೋಡಿ ಕ್ರೈಂ, ಅಫ್ತಾಬ್ ಅಮೀನ್ ಕರಾಳ ಮುಖ