ನವದೆಹಲಿ: ಪೋಷಕರ ವಿರೋಧವನ್ನೂ ಧಿಕ್ಕರಿಸಿ ತನ್ನ ಜತೆ ಬಂದ ಶ್ರದ್ಧಾಳನ್ನು (Shraddha Walker) ಹತ್ಯೆಗೈದ ಅಫ್ತಾಬ್ ಅಮೀನ್ ಪೂನಾವಾಲಾನ (Aftab Amin Poonawalla) ಕೃತ್ಯದ (Delhi Crime) ಹಿಂದೆ ಲವ್ ಜಿಹಾದ್ (Love Jihad) ಉದ್ದೇಶವಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಆಕೆಯ ತಂದೆಯೂ ಇದೇ ಆರೋಪ ಮಾಡಿದ್ದಾರೆ. ಹಾಗೆಯೇ, ಅಫ್ತಾಬ್‌ನನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
“ಲವ್ ಜಿಹಾದ್ ಕಾರಣಕ್ಕಾಗಿಯೇ ಅಫ್ತಾಬ್ ಅಮೀನ್ ನನ್ನ ಪುತ್ರಿಯನ್ನು ಕೊಂದಿರುವ ಸಾಧ್ಯತೆ ಇದೆ. ಹಾಗೆಯೇ, ಕಾನೂನು ಪ್ರಕಾರ ಆತನನ್ನು ಗಲ್ಲಿಗೇರಿಸಬೇಕು. ಕೊಲೆ ಜತೆಗೆ ಲವ್ ಜಿಹಾದ್ ಕುರಿತು ಕೂಡ ದೆಹಲಿ ಪೊಲೀಸರು ತನಿಖೆ ನಡೆಸಬೇಕು” ಎಂದು ಶ್ರದ್ಧಾ ತಂದೆ ವಿಕಾಸ್ ಮದನ್ (Vikas Madan Walker) ಹೇಳಿದ್ದಾರೆ.
ನವೆಂಬರ್ 10ರಂದು ಪುತ್ರಿ ಕಾಣೆಯಾಗಿರುವ ಕುರಿತು ವಿಕಾಸ್ ಮದನ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್‌ಐಆರ್ ದಾಖಲಿಸಿದ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬಯಲಾಗಿದೆ. ಅಫ್ತಾಬ್ ಜತೆ ಮುಂಬೈನಿಂದ ದೆಹಲಿಗೆ ತೆರಳುವಾಗ, “ನಾನು ಅಫ್ತಾಬ್ ಜತೆ ಹೋಗುತ್ತಿದ್ದೇನೆ. ನೀವು ನನ್ನನ್ನು ಮಗಳೆಂದು ಪರಿಗಣಿಸಬೇಡಿ” ಎಂದು ಶ್ರದ್ಧಾ ಬರೆದಿದ್ದಳು ಎಂಬುದಾಗಿ ಪೊಲೀಸರ ಎಫ್‌ಐಆರ್‌ನಿಂದ ತಿಳಿದುಬಂದಿದೆ.
ಇದನ್ನೂ ಓದಿ | Delhi Crime | ದೆಹಲಿ ಹಲವೆಡೆ ಶ್ರದ್ಧಾ ದೇಹದ 10 ಭಾಗ ಪತ್ತೆ, ಕೃತ್ಯದ ಸ್ಥಳಕ್ಕೆ ಅಫ್ತಾಬ್‌ನನ್ನು ಕರೆದೊಯ್ದ ಪೊಲೀಸರು