ಲಖನೌ: ಉತ್ತರಪ್ರದೇಶದ ಹಳ್ಳಿಯೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಸಹೋದರಿಯನ್ನು ಕೊಂದು (murder case) ಆಕೆಯ ತಲೆ ಕತ್ತರಿಸಿ (beheading Sister) ಹಿಡಿದುಕೊಂಡು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಆತ ತನ್ನ ತಂಗಿಯ ತಲೆ ಕತ್ತರಿಸಿರುವುದು ಆಕೆ ಪ್ರೇಮಿಸಿದ ಕಾರಣಕ್ಕೆ. ಲಖನೌದಿಂದ 50 ಕಿಮೀ ದೂರದ ಬಾರಾಬಂಕಿ ಜಿಲ್ಲೆಯ ಮಿತ್ವಾರಾ ಎಂಬ ಗ್ರಾಮದ ಯುವಕ ರಿಯಾಜ್ ಎಂಬಾತ ಯುವಕನೊಬ್ಬನನ್ನು ಪ್ರೇಮಿಸಿದಳೆಂದು ತನ್ನ ತಂಗಿಯ ತಲೆಯನ್ನೇ ಕಡಿದಿದ್ದಾನೆ.
ಚಾಂದ್ ಬಾಬು ಎಂಬ ವ್ಯಕ್ತಿಯ ಜತೆಗೆ ಪ್ರೇಮದಲ್ಲಿ ಬಿದ್ದಿದ್ದ ತನ್ನ ತಂಗಿ ಆಸಿಫಾಳಿಗೆ ಪರಿಪರಿಯಾಗಿ ಬುದ್ಧಿ ಹೇಳಿದರೂ ಆಕೆ ಕೇಳಲಿಲ್ಲ ಎಂಬ ಕಾರಣಕ್ಕಾಗಿ ಆಕೆಯನ್ನು ಕೊಂದಿರುವುದಾಗಿ ಪೊಲೀಸರಿಗೆ ನೀಡಿದ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ರಿಯಾಜ್ ಹೇಳಿದ್ದಾನೆ. ಈ ಹಿಂದೆ ಆಕೆ ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು. ಈ ಬಗ್ಗೆ ತಂದೆಯೂ ದೂರು ನೀಡಿದ್ದರು. ಬಳಿಕ ಅವರಿಬ್ಬರನ್ನೂ ಹಿಡಿದು ತರಲಾಗಿತ್ತು. ಆಸಿಫಾ ಅಪ್ರಾಪ್ತ ವಯಸ್ಕಳಾಗಿದ್ದ ಕಾರಣ, ಅತ್ಯಾಚಾರ ಪ್ರಕರಣ ದಾಖಲಿಸಿ ಚಾಂದ್ ಬಾಬುವನ್ನು ಜೈಲಿಗೆ ಹಾಕಲಾಗಿತ್ತು.
ಪ್ರಿಯಕರನ ಬಗ್ಗೆ ಮನೆಯಲ್ಲಿ ಮಾತಿಗೆ ಮಾತು ಬೆಳೆದು, ಸಿಟ್ಟಿನಿಂದ ರಿಯಾಜ್ ಹರಿತವಾದ ಚೂರಿಯಿಂದ ಆಕೆಯ ಕುತ್ತಿಗೆ ಕೊಯ್ದಿದ್ದಾನೆ. ನಂತರ ಅದನ್ನು ಹಿಡಿದುಕೊಂಡು ಪೊಲೀಸ್ ಸ್ಟೇಶನ್‌ನತ್ತ ಬಂದಿದ್ದಾನೆ. ದಾರಿಹೋಕರು ಇದನ್ನು ಗಮನಿಸಿ ಗಾಬರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ರಿಯಾಜ್ ಯಾವುದೇ ಪ್ರತಿರೋಧ ತೀರದೇ ಶರಣಾಗಿದ್ದಾನೆ.
ಇದನ್ನೂ ಓದಿ: Missing Case: ಕಾಲೇಜು ವಿದ್ಯಾರ್ಥಿನಿ ನಾಪತ್ತೆಗೆ ಟ್ವಿಸ್ಟ್; ಕ್ರೈಸ್ತ ಸನ್ಯಾಸಿನಿ ಆಗಲು ಹೊರಟಿದ್ದ ಯುವತಿ!