Site icon Vistara News

Smuggling Case: ಬ್ಯಾಂಕಾಕ್‌ನಿಂದ ಸ್ಮಗ್ಲಿಂಗ್‌ ಮಾಡುತ್ತಿದ್ದ 10 ಹಳದಿ ಅನಕೊಂಡ ವಶಕ್ಕೆ, ಆರೋಪಿ ಬಂಧನ

anaconda smuggling case

ಬೆಂಗಳೂರು: ಬೆಂಗಳೂರು ಏರ್ ಕಸ್ಟಮ್ (Air Customs) ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ, ಬ್ಯಾಂಕಾಕ್‌ನಿಂದ (Bangkok) ಅಕ್ರಮವಾಗಿ (Smuggling Case) ಕದ್ದು ತರಲಾಗುತ್ತಿದ್ದ 10 ಅನಕೊಂಡ ಹಾವುಗಳು (Anakonda Snake) ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIL) ಪತ್ತೆಯಾಗಿವೆ.

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ತರಲಾಗಿದ್ದ 10 ಹಳದಿ ಆನಕೊಂಡಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬ್ಯಾಂಕಾಕ್‌ನಿಂದ ಪ್ರಯಾಣಿಕರೊಬ್ಬರು ಅಕ್ರಮವಾಗಿ ಲಗೇಜ್ ಬ್ಯಾಗ್‌ನಲ್ಲಿ ಈ ಆನಕೊಂಡಗಳನ್ನು ತಂದಿದ್ದರು. ಏರ್ ಕಸ್ಟಮ್ ಅಧಿಕಾರಿಗಳ ಪರಿಶೀಲನೆ ವೇಳೆ ಇವು ಪತ್ತೆಯಾಗಿವೆ. ಸದ್ಯ ಅನಕೊಂಡಗಳನ್ನು ರಕ್ಷಿಸಿ ಆರೋಪಿಯನ್ನು ಏರ್ ಕಸ್ಟಮ್ ಅಧಿಕಾರಿಗಳು ಬಂಧಿಸಿದ್ದಾರೆ. ಹಳದಿ ಬಣ್ಣ ಉಳ್ಳ ಆನಕೊಂಡ ಹಾವುಗಳನ್ನು ರಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಅರಣ್ಯ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

ಹಳದಿ ಅನಕೊಂಡವನ್ನು ಪರಾಗ್ವೆಯನ್ ಅನಕೊಂಡ ಎಂದೂ ಕರೆಯುತ್ತಾರೆ. ಇದು ದಕ್ಷಿಣ ಅಮೆರಿಕಾಕ್ಕೆ ಸೇರಿದ ಬೋವಾ ಜಾತಿಯ ಹಾವು. ಇದು ವಿಶ್ವದ ಅತಿದೊಡ್ಡ ಹಾವುಗಳಲ್ಲಿ ಒಂದು. ಆದರೆ ಅದರ ಹತ್ತಿರದ ಸಂಬಂಧಿ ಹಸಿರು ಅನಕೊಂಡಕ್ಕಿಂತ ಚಿಕ್ಕದು. ಇವುಗಳ ಮರಿಗಳನ್ನು ಕದ್ದು ಸಾಗಿಸುವ ವ್ಯಾಪಕ ಜಾಲ ಅಂತಾರಾಷ್ಟ್ರೀಯವಾಗಿ ಸಕ್ರಿಯವಾಗಿದೆ. ಈ ನಿಟ್ಟಿನಲ್ಲಿ ಕಸ್ಟಮ್‌ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಭಾರತದಲ್ಲಿ ವಿದೇಶದ ವಿಶಿಷ್ಟ ಪ್ರಾಣಿಗಳನ್ನು (Exotic Animals) ಆಮದು ಮಾಡುವುದು ಹಾಗೂ ಸಾಕುವುದನ್ನು ನಿಷೇಧಿಸಲಾಗಿದೆ.

ʻಚುನಾವಣೆ ಪ್ರಚಾರ ಮಾಡಿದ್ರೆ ಹುಷಾರ್!‌ʼ ಎಂದು ಲಾಂಗ್‌ ಝಳಪಿಸಿದ ಜೆಡಿಎಸ್‌ ನಾಯಕ

ಚಿಕ್ಕಬಳ್ಳಾಪುರ: ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ‌ ಚಿಂತಾಮಣಿಯಲ್ಲಿ ಜೆಡಿಎಸ್‌ ನಾಯಕನೊಬ್ಬ ಎದುರಾಳಿಗಳ ಮುಂದೆ ಲಾಂಗ್‌ ಝಳಪಿಸಿ ಆವಾಜ್ ಹಾಕಿದ್ದಾನೆ. ಚುನಾವಣೆ ಪ್ರಚಾರ, ಮತದಾನದಲ್ಲಿ ಪಾಲ್ಗೊಂಡರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಚಿಂತಾಮಣಿ ತಾಲ್ಲೂಕಿನ ಕೋನಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಜೆಡಿಎಸ್ ಮುಖಂಡನಿಂದ ಕಾಂಗ್ರೆಸ್ ಬೆಂಬಲಿಗರಿಗೆ ಬೆದರಿಕೆ ಹಾಕಿದ ಆರೋಪವಿದೆ. ಗ್ರಾಮದಲ್ಲಿ ನಡೆಯುತ್ತಿದ್ದ ಪಲ್ಲಕ್ಕಿ ಉತ್ಸವದಲ್ಲಿ ಲಾಂಗು ಹಿಡಿದು ಬೆದರಿಕೆ ಹಾಕಿದ್ದಾನೆ. ಇದರ ವಿಡಿಯೋ ಸಾಕ್ಷಿ ಲಭ್ಯವಾಗಿದೆ.

ಕೋದಂಡಸ್ವಾಮಿ ಜಾತ್ರಾ ಮಹೋತ್ಸವ ಹಿನ್ನೆಲೆ ನಡೆಯುತಿದ್ದ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಕೆ.ವಿ‌ ಶ್ರೀನಿವಾಸರೆಡ್ಡಿ (ಕೆವಿಎಸ್) ಎಂಬಾತ ಲಾಂಗ್‌ ತೋರಿಸಿ ಬೆದರಿಕೆ ಹಾಕಿದ್ದಾನೆ. “ಏ ನನ್ನ ಮಕ್ಳಾ, ಚುನಾವಣಾ ಪ್ರಚಾರ ಅಥವಾ ಮತದಾನದಲ್ಲಿ ಪಾಲ್ಗೊಂಡರೆ‌ ಕತ್ತರಿಸುತ್ತೇನೆ” ಎಂದು ಬೆದರಿಕೆ‌ ಹಾಕಿದ್ದಾನೆ ಎನ್ನಲಾಗಿದೆ. ಎದುರಾಳಿಗಳಾದ ಕಲ್ಯಾಣ್‌ ರೆಡ್ಡಿ ಹಾಗು ಆತನ ಕುಟುಂಬದವರನ್ನು ಅಟ್ಟಾಡಿಸಿ ಬೆದರಿಸಿದ್ದಾನೆ.

ಈ ಕುರಿತು ಶ್ರೀನಿವಾಸರೆಡ್ಡಿ ವಿರುದ್ಧ ಕಲ್ಯಾಣ್ ಕುಮಾರ್ ಪ್ರಾಣಬೆದರಿಕೆ ದೂರು ದಾಖಲಿಸಿದ್ದಾರೆ. ಕಲ್ಯಾಣ್ ಕುಮಾರ್ ಹಾಲಿ ಸಚಿವ ಡಾ. ಎಂ. ಸಿ‌ ಸುಧಾಕರ್ ಬೆಂಬಲಿಗರಾಗಿದ್ದು, ಚಿಂತಾಮಣಿ‌ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಿಯತಮೆಯ ಮದುವೆ ದಿನವೇ ಪ್ರಿಯತಮನ ರುಂಡ-ಮುಂಡ ಕಟ್‌; ಕೊಲೆಯೋ? ಆತ್ಮಹತ್ಯೆಯೋ?

ಬೀದರ್: ಪ್ರಿಯತಮೆಯ ಮದುವೆ ದಿನವೇ ಪ್ರಿಯತಮ ಮಸಣ (love case) ಸೇರಿದ್ದಾನೆ. ರೈಲ್ವೆ ಹಳಿ ಮೇಲೆ ರುಂಡ-ಮುಂಡ ತುಂಡರಿಸಿ ಬಿದ್ದ ಸ್ಥಿತಿಯಲ್ಲಿ ಯುವಕನ ಶವ (dead body found) ಪತ್ತೆಯಾಗಿದೆ. ಬೀದರ್‌ ನಗರದ ಹೊರವಲಯದ ನೌಬಾದ್ ಹೈವೇ ಬ್ರಿಡ್ಜ್ ಬಳಿ ಘಟನೆ ನಡೆದಿದೆ. ಬೀದರ್ ತಾಲೂಕಿನ ನಿಜಾಂಪೂರ್ ಗ್ರಾಮದ ವೆಂಕಟೇಶ ಕುಮಾರ್ (22) ಮೃತ ದುರ್ದೈವಿ.

ಬೀದರ್ ತಾಲೂಕಿನ ರಂಜೋಳ ಖೇಣಿ ಗ್ರಾಮದ ವೆಂಕಟೇಶ್‌ ನಿಜಾಂಪುರ ಗ್ರಾಮದ ಅಜ್ಜಿಯ‌ ಮನೆಯಲ್ಲಿ ವಾಸವಾಗಿದ್ದ. ಖಾಸಗಿ ಕಂಪನಿಯೊಂದರಲ್ಲಿ‌ ಕೆಲಸ ಮಾಡುತ್ತಿದ್ದ ವೆಂಕಟೇಶ್ ಎರಡು ವರ್ಷಗಳಿಂದ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಕುಟುಂಬಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಯುವತಿಯ ಮದುವೆ ದಿನವೇ ಯುವಕನ ಕೊಲೆ‌ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ನಡೆದ ಸ್ಥಳದಿಂದ 1 ಕಿ.ಮೀ. ದೂರದಲ್ಲಿ ಬೈಕ್ ಇದೆ. ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಮೃತ ಕುಟುಂಬಸ್ಥರು ಆರೋಪಿಸಿದ್ದಾರೆ. ಯುವತಿಯ ಕುಟುಂಬಸ್ಥರೇ ಕೊಲೆ ಮಾಡಿ, ರೈಲ್ವೆ ಟ್ರ್ಯಾಕ್‌ ಮೇಲೆ ಬಿಸಾಡಿ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನ್ಯೂಟೌನ್ ಪೊಲೀಸರು ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹುಡುಗಿಯ‌ ವಿಚಾರಕ್ಕೆ ಕೊಲೆಯಾಗಿದೆ ಎಂದು ಪಾಲಕರು ಆರೋಪಿಸಿದ್ದಾರೆ. ಹೀಗಾಗಿ ಈ ಆಯಾಮದಲ್ಲೂ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Murder Case: ಯಾದಗಿರಿ ಹಿಂದು ಯುವಕನ ಕೊಲೆ ಪ್ರಕರಣ; ಇಬ್ಬರ ವಿರುದ್ಧ ಎಫ್‌ಐಆರ್‌

Exit mobile version