ಮಂಡ್ಯ: ಮಲಗಿದ್ದ ವೃದ್ಧನ ಮೇಲೆ ಬೀದಿ ನಾಯಿಗಳು ದಾಳಿ (Street Dog Attack) ನಡೆಸಿ ಕೊಂದು ಹಾಕಿದ (Old man dead) ಭೀಕರ ಘಟನೆಯೊಂದು ಮಂಡ್ಯ ಜಿಲ್ಲೆಯ (Mandya News) ಬೆಸಗರಹಳ್ಳಿಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಅಪರಿಚಿತನಾಗಿದ್ದು, ಇಲ್ಲಿನ ಬಾರ್ ಒಂದರ ಮುಂದೆ ಮಲಗಿದ್ದ ವೇಳೆ ಈ ದಾಳಿ ನಡೆದಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿಗೆ ಬಂದಿದ್ದ ಅಪರಿಚಿತ ವೃದ್ಧನೊಬ್ಬ ಅಲ್ಲಿನ ಬಾರ್‌ನಲ್ಲಿ ಮದ್ಯಪಾನ ಮಾಡಿ ಹೊರಗಡೆ ರಸ್ತೆ ಬದಿಯಲ್ಲಿ ಮಲಗಿಕೊಂಡಿದ್ದ. ಈ ವೇಳೆ ಬೀದಿ ನಾಯಿಗಳು ಆತನ ಮೇಲೆ ದಾಳಿ ಮಾಡಿ ಕೊಂದು ಹಾಕಿವೆ. ವೃದ್ಧನ ಮುಖ ಮತ್ತು ತಲೆಯ ಭಾಗದ ಮೇಲೆ ಅತಿ ಹೆಚ್ಚು ಅಟ್ಯಾಕ್ ನಡೆದಿದ್ದು, ಆ ಭಾಗಗಳೆಲ್ಲ ಜರ್ಜರಿತವಾಗಿವೆ.
ಬೀದಿ ನಾಯಿಗಳು ರಾತ್ರಿಯ ವೇಳೆ ದಾಳಿ ಮಾಡಿದ್ದರಿಂದ ಆತನನ್ನು ರಕ್ಷಿಸಲು ಯಾರಿಗೂ ಸಾಧ್ಯವಾಗಲಿಲ್ಲ. ಬಹುಶಃ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸ್ಥಿತಿಯಲ್ಲಿಯೂ ಆ ವೃದ್ಧ ಇರಲಿಲ್ಲ ಅನಿಸುತ್ತದೆ.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಸಗರಹಳ್ಳಿ ಪೊಲೀಸರು ಮೃತ ವೃದ್ದನ ಗುರುತು ಹಾಗೂ ವಿಳಾಸ ಪತ್ತೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: Street dog attack: ಬಾಲಕನ ಮೇಲೆ ಬೀದಿ ನಾಯಿಗಳ ಬರ್ಬರ ದಾಳಿ
ಕುಣಿಗಲ್‌ನಲ್ಲಿ ನಾಲ್ಕು ವರ್ಷದ ಮಗುವಿನ ಮೇಲೆ ದಾಳಿ ನಡೆದಿತ್ತು
ಕುಣಿಗಲ್‌ನಲ್ಲಿ ಮನೆ ಮುಂದೆ ಆಟವಾಡುತ್ತಿದ್ದ 4 ವರ್ಷದ ಮಗುವಿನ ಮೇಲೆ ಏಕಾಏಕಿ ಬೀದಿನಾಯಿಯೊಂದು (Dog Attack) ದಾಳಿ ಮಾಡಿದ ಘಟನೆ ಕೆಲವು ಸಮಯದ ಹಿಂದೆ. ಸುಪೀಯಾ (4) ಬೀದಿನಾಯಿ ದಾಳಿಗೊಳಗಾದ ಮಗು. ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ 17ನೇ ವಾರ್ಡ್‌ನಲ್ಲಿ ಈ ಘಟನೆ ನಡೆದಿದೆ. ಸುಪ್ರೀಯಾ ಮನೆ ಮುಂದೆ ಆಟವಾಡುತ್ತಾ ನಿಂತಿದ್ದಳು.
ಈ ವೇಳೆ ಪಕ್ಕದ ರಸ್ತೆಯಿಂದ ನಾಯಿ ಓಡಿ ಬಂದಿದೆ. ನಾಯಿ ಕಂಡು ಸುಪ್ರೀಯಾ ಪಕ್ಕಕ್ಕೆ ಸರಿದು ನಿಲ್ಲಲು ಮುಂದಾಗಿದ್ದು, ಈ ವೇಳೆ ಏಕಾಏಕಿ ಆಕೆ ಮೇಲೆ ದಾಳಿ ನಡೆಸಿತ್ತು. ಮಗುವಿನ ಕೂಗಾಟ ಕೇಳಿ ಅಲ್ಲೆ ಇದ್ದ ಇತರೆ ಮಕ್ಕಳು ಹಾಗೂ ಸ್ಥಳೀಯರು ಕೂಡಲೇ ನಾಯಿಯನ್ನು ಓಡಿಸಿದ್ದಾರೆ. ನಾಯಿಯಿಂದ ಮಗುವನ್ನು ರಕ್ಷಿಸಿದ್ದಾರೆ. ಗಂಭೀರ ಗಾಯಗೊಂಡಿರುವ ಸುಪ್ರೀಯಾಗೆ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಈಗ ಆಕೆ ಆರೋಗ್ಯವಾಗಿದ್ದಾಳೆ.