Site icon Vistara News

Suraj Revanna Case: ಅಮಾವಾಸ್ಯೆ ದಿನ ಸೂರಜ್‌ ಬಳೆ ತೊಡ್ತಾನೆ, ಸೀರೆ ಉಡ್ತಾನೆ! ಬಯಲು ಮಾಡಿದ ಸಂತ್ರಸ್ತ

suraj revanna case 1

ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ (Homosexuality, abnormal physical abuse) ಪ್ರಕರಣದಲ್ಲಿ ಈಗ ಪೊಲೀಸ್‌ ವಶದಲ್ಲಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ (Suraj Revanna Case) ಬಗ್ಗೆ ಸಂತ್ರಸ್ತ ಯುವಕ ಕುತೂಹಲಕಾರಿ ಹೇಳಿಕೆ ನೀಡಿದ್ದಾನೆ. ಸೂರಜ್‌ ರೇವಣ್ಣ ಅಮಾವಾಸ್ಯೆ ದಿನ (New Moon) ಬಳೆ (bangles) ತೊಟ್ಟು, ಸೀರೆ (Saree) ಉಡುತ್ತಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಅವರ ಹಿರಿಯ ಪುತ್ರ ಸೂರಜ್‌ ರೇವಣ್ಣನನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ವಶದಲ್ಲಿಟ್ಟುಕೊಂಡಿದ್ದಾರೆ. ಸೂರಜ್ ರೇವಣ್ಣ ಅವರ ಕುರಿತು ಜೆಡಿಎಸ್ ಕಾರ್ಯಕರ್ತ ಹಾಗೂ ಸಂತ್ರಸ್ತ ಯುವಕ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬೆಚ್ಚಿಬೀಳುವಂತಹ ಮಾಹಿತಿ ನೀಡಿದ್ದಾನೆ.

2019ರ ಚುನಾವಣೆ ಸಂದರ್ಭದಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೆ. ಅರಕಲಗೂಡಿನಲ್ಲಿ ಜೆಡಿಎಸ್ ಕಾರ್ಯಕ್ರಮ ಚೆನ್ನಾಗಿ ಮಾಡಿದ್ದೆ. ಈ ವೇಳೆ ಕಾರ್ಯಕ್ರಮ ಚೆನ್ನಾಗಿ ಮಾಡಿದೀಯ ಅಂತ ನನ್ನನ್ನು ಹೊಗಳಿ ನನ್ನ ಫೋನ್‌ ನಂಬರ್ ಅನ್ನು ತೆಗೆದುಕೊಂಡರು. ನಂತರ ಅವರ ವಿಸಿಟಿಂಗ್ ಕಾರ್ಡ್ ಕೊಟ್ಟರು. ನಂತರ ಅವರು ನನ್ನ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದರು ಎಂದಿದ್ದಾನೆ. ಸೂರಜ್ ರೇವಣ್ಣ ಅವರು Good Evening ಮೆಸೇಜ್ ಜತೆ ಲವ್ ಸಿಂಬಲ್ ಕಳಿಸಿ ಮಾತು ಆರಂಭಿಸಿದರು. ಬಳಿಕ ಫಾರ್ಮ್‌ಹೌಸ್‌ಗೆ ಒಂಟಿಯಾಗಿ ಕರೆಸಿಕೊಂಡು ಬಲಾತ್ಕಾರದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಸಂತ್ರಸ್ತ ಜೆಡಿಎಸ್ ಕಾರ್ಯಕರ್ತ ಹೇಳಿದ್ದಾನೆ.

ಸೂರಜ್ ರೇವಣ್ಣಗೆ ಎರಡು ವ್ಯಕ್ತಿತ್ವ ಇದೆ. ಅವರು ಸಾರ್ವಜನಿಕ ಜೀವನದಲ್ಲಿ ಇರುವುದಕ್ಕೆ ವಿರುದ್ಧವಾಗಿ ಒಳಗಡೆ ಇರುತ್ತಾರೆ. ಸೂರಜ್ ರೇವಣ್ಣ ಕಾಮುಕ, ಹೊರಗೆ ಒಂದು ಮುಖ, ಒಳಗೆ ಇನ್ನೊಂದು ಮುಖ. ನಾಲ್ಕು ವರ್ಷದಿಂದ ಎಲ್ಲೂ ಹೇಳಿಕೊಳ್ಳೋಕೆ ನನಗೆ ಆಗಿರಲಿಲ್ಲ, ಮನಸ್ಸಿನಲ್ಲಿ ಕಾಡುತ್ತಿತ್ತು. ಒಂದು ದಿನ ನನ್ನ ಜೊತೆಗೆ ಸೂರಜ್ ರೇವಣ್ಣ ಮಾತಾಡುತ್ತಾ ನನ್ನ ಜೀವನ ಹೇಗೆ ಏನು ಅಂತ ಎಲ್ಲಾ ಕೇಳಿದ್ರು. ನಾನು ನನ್ನ ಕೆಲಸ, ಕುಟುಂಬದ ಬಗ್ಗೆ ಹೇಳಿದೆ. ಯಾವುದಕ್ಕೂ ಯೋಚನೆ ಮಾಡಬೇಡ ನಾನು ಇದ್ದೇನೆ ಎಂದು ಹೇಳಿ ರೂಮ್ ಒಳಗೆ ಕರೆದುಕೊಂಡು ಹೋದ್ರು.
ನಂತರ ನನ್ನ ಕಾಲು ಒತ್ತುವಂತೆ ಹೇಳಿದರು. ನಾನು ಕಾಲು ಒತ್ತಿದೆ.. ಮುಂದೆ ಏನಾಯ್ತು ಅಂತ ನಾನು ಹೇಳಲು ಸಾಧ್ಯವಿಲ್ಲ ಎಂದು ಸಂತ್ರಸ್ತ ಯುವಕ ವಿವರಿಸಿದ್ದಾನೆ.

ಪೊಲೀಸ್ ವಿಚಾರಣೆ ವೇಳೆ ಹಾಗೂ ದೂರು ಪ್ರತಿಯಲ್ಲಿ ಘಟನೆಯನ್ನು 27 ವರ್ಷದ ಸಂತ್ರಸ್ತ ವಿವರಿಸಿದ್ದಾರೆ. “ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪರಿಚಯವಾಗಿದ್ದ ಸೂರಜ್ ರೇವಣ್ಣ ಪಕ್ಷದ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯನಾಗಿದ್ದ ಕಾರಣ ನನ್ನ ಮೊಬೈಲ್ ನಂಬರ್ ಪಡೆದಿದ್ದರು. ಜೂ.14ರಂದು ಮೊದಲ ಬಾರಿಗೆ ಗುಡ್ ಈವಿನಿಂಗ್ ಸಂದೇಶದ ಜತೆಗೆ ಲವ್ ಸಿಂಬಲ್ ಕಳಿಸಿ ಮಾತನಾಡಲು ಆರಂಭಿಸಿದ್ದರು. ಇದಾದ ಬಳಿಕ ಜೂನ್ 16ರಂದು ಗನ್ನಿಕಡದ ಫಾರ್ಮ್‌ಹೌಸ್‌ಗೆ ಒಂಟಿಯಾಗಿ ಬರಲು ತಿಳಿಸಿದ್ದರು. ಅದರಂತೆ ಸಾಯಂಕಾಲ 6.15ರ ಸುಮಾರಿಗೆ ಫಾರ್ಮ್ ಹೌಸ್‌ಗೆ ತೆರಳಿದ್ದ ವೇಳೆ ತನ್ನ ಬೆಡ್ ರೂಂಗೆ ಕರೆದೊಯ್ದ ಸೂರಜ್ ರೇವಣ್ಣ ಬೆದರಿಕೆ ಒಡ್ಡಿ ಬಲಾತ್ಕಾರದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬೇಡ ಎಂದು ಗೋಳಾಡಿದರೂ ಸೂರಜ್ ರೇವಣ್ಣ ಬಿಡದೆ ಕೃತ್ಯ ಎಸಗಿದ್ದಾರೆ” ಎಂದು ಸಂತ್ರಸ್ತ ದೂರಿನಲ್ಲಿ ಆರೋಪಿಸಿದ್ದಾನೆ.

ಸೂರಜ್ ರೇವಣ್ಣ ನನ್ನ ಮೇಲೆ ಎಸಗಿದ ಕೃತ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಇದನ್ನು ಹೇಳಿದಾಗ, ಈ ವಿಚಾರ ಎಲ್ಲಿಯೂ ಹೇಳದಂತೆ 2 ಕೋಟಿ ರೂ. ಹಾಗೂ ಕೆಲಸದ ಆಮಿಷ ಒಡ್ಡಿದ್ದರು. ಒಪ್ಪದಿದ್ದಕ್ಕೆ ಜೀವಬೆದರಿಕೆ ಒಡ್ಡಿದ್ದರು ಎಂದು ಸಂತ್ರಸ್ತ ದೂರಿದ್ದಾನೆ.

ಇದನ್ನೂ ಓದಿ: Suraj Revanna Case: ಸೂರಜ್‌ ರೇವಣ್ಣಗೇ ʼಹಿಂದಿನಿಂದ ಇರಿದವರುʼ ಯಾರು?

Exit mobile version