Site icon Vistara News

ಕಾಬೂಲ್‌ನ ಶಾಲೆಯಲ್ಲಿ ಬಾಂಬ್‌ ಸ್ಫೋಟ, ತಾಲಿಬಾನ್‌ ಧರ್ಮಗುರು ಹಕ್ಕಾನಿ ಸಾವು

haqqani

ಕಾಬೂಲ್‌: ಅಪಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಧಾರ್ಮಿಕ ಶಾಲೆಯೊಂದರಲ್ಲಿ ಬಾಂಬ್‌ ಸ್ಫೋಟ ಸಂಭವಿಸಿ ತಾಲಿಬಾನಿಗಳ ಪ್ರಮುಖ ಧರ್ಮಗುರುಗಳಲ್ಲಿ ಒಬ್ಬನಾದ ಶೇಖ್‌ ರಹಿಮತುಲ್ಲಾ ಹಕ್ಕಾನಿ ಮೃತಪಟ್ಟಿದ್ದಾನೆ

ಅಫಘಾನಿಸ್ತಾನದಲ್ಲಿ ಪ್ರಸಕ್ತ ಆಡಳಿತ ನಡೆಸುತ್ತಿರುವ ಇಸ್ಲಾಮಿಕ್‌ ಎಮಿರೇಟ್‌ನ ಉಪವಕ್ತಾರನಾಗಿರುವ ಬಿಲಾಲ್‌ ಕರೀಮಿ ಗುರುವಾರ ನಡೆದಿರುವ ಈ ಸ್ಫೋಟ ಮತ್ತು ಸಾವನ್ನು ದೃಢಪಡಿಸಿದ್ದಾರೆ ಎಂದು ಟೋಲೋ ನ್ಯೂಸ್‌ ವರದಿ ಮಾಡಿದೆ.

ಕಾಲು ಕಳೆದುಕೊಂಡ ವ್ಯಕ್ತಿಯೊಬ್ಬ ತನ್ನ ಕೃತಕ ಕಾಲುಗಳ ಒಳಗೆ ಬಾಂಬು ಇಟ್ಟುಕೊಂಡು ಬಂದು ಧಾರ್ಮಿಕ ಕೇಂದ್ರದಲ್ಲಿ ಸ್ಫೋಟಿಸಿಕೊಂಡಿದ್ದಾನೆ. ಈ ಸ್ಫೋಟದಲ್ಲಿ ಹಕ್ಕಾನಿ ಸಾವುಕಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಹಕ್ಕಾನಿಯನ್ನೇ ಗುರಿಯಾಗಿಟ್ಟು ಮಾಡಿದ ಕೊಲೆಯೇ ಅಥವಾ ಸಾಮೂಹಿಕ ಕೊಲೆಯ ಹುನ್ನಾರವೇ ಎನ್ನುವುದು ಸ್ಪಷ್ಟವಾಗಿಲ್ಲ.

ಕೆಲವೇ ದಿನಗಳ ಹಿಂದಷ್ಟೇ ಕಾಬೂಲ್‌ನ ಮನೆಯೊಂದರ ಮೇಲೆ ಅಮೆರಿಕನ್‌ ಪಡೆಗಳು ನಡೆಸಿದ ಡ್ರೋನ್‌ ಆಧರಿತ ದಾಳಿಯಲ್ಲಿ ಅಲ್‌ಖೈದಾ ಮುಖ್ಯಸ್ಥ ಅಲ್‌ ಜವಾಹಿರಿ ಮೃತಪಟ್ಟಿದ್ದ.

ಇದನ್ನೂ ಓದಿ| Al-jawahiri dead| ಕಾಬೂಲ್‌ನ ಆ ಮನೆಯ ಬಾಲ್ಕನಿಗೇ ಬಡಿದಿತ್ತು ಮಿಸೈಲ್‌, ಹೆಣವಾಗಿ ಬಿದ್ದಿದ್ದ ಜವಾಹಿರಿ

Exit mobile version