Site icon Vistara News

Drowned in Tank: ಜಿಂದಾಲ್‌ ಪ್ಲಾಂಟ್‌ನಲ್ಲಿ ನೀರಿನ ಟ್ಯಾಂಕ್‌ಗೆ ಬಿದ್ದು 3 ಎಂಜಿನಿಯರ್‌ಗಳ ಸಾವು

drowned in tank jindal bellary

ಬಳ್ಳಾರಿ: ನೀರಿನ ಟ್ಯಾಂಕ್‌ನಲ್ಲಿ ಬಿದ್ದು ಮೂವರು ಎಂಜಿನಿಯರ್‌ಗಳು (engineers death) ಸಾವಿಗೀಡಾದ ಘಟನೆ (Drowned in Tank) ಬಳ್ಳಾರಿ ಜಿಲ್ಲೆಯ ಜಿಂದಾಲ್‌ನ (Jindal plant) ಎಚ್ಎಸ್ಎಂ ಪ್ಲಾಂಟ್‌ನಲ್ಲಿ ನಡೆದಿದೆ.

ಮೃತರನ್ನು ಭುವನಹಳ್ಳಿಯ ಜಡೆಪ್ಪ(23), ಬೆಂಗಳೂರಿನ ಸುಶಾಂತ್(25), ಚೆನ್ನೈನ ಶಿವಮಹದೇವ(23) ಎಂದು ಗುರುತಿಸಲಾಗಿದೆ. ಪೈಪ್‌ ಜೋಡಣೆ ಕೆಲಸ ಪರಿಶೀಲನೆ ಮಾಡುತ್ತಿದ್ದಾಗ ಬೃಹತ್‌ ಪೈಪ್‌ನಲ್ಲಿ ಇದ್ದಕ್ಕಿದ್ದಂತೆ ಬಂದ ನೀರಿನಲ್ಲಿ ಕೊಚ್ಚಿಹೋಗಿ ದೊಡ್ಡ ನೀರಿನ ಟ್ಯಾಂಕ್‌ನಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸಂಡೂರು ಡಿವೈಎಸ್ಪಿ ಪ್ರಸಾದ್ ಗೋಖಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗುರುವಾರ ಸಂಜೆ ಘಟನೆ ನಡೆದಿದೆ. ಇದು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೆ ಹೋದ ಪರಿಣಾಮವೇ, ಆಕಸ್ಮಿಕವೇ ಅಥವಾ ಇದರ ಹಿಂದೆ ಒಳಸಂಚು ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಬಾಲಕಿಯ ರುಂಡ ಕತ್ತರಿಸಿ ಕೊಂದ ಪ್ರೇಮಿ

ಸೋಮವಾರಪೇಟೆ: ತನ್ನ ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಬಾಲಕಿಯೊಬ್ಬಳನ್ನು ಎಳೆದೊಯ್ದು ರುಂಡ ಕತ್ತರಿಸಿ ಕೊಲೆ ಮಾಡಿದ (Murder Case) ಘಟನೆ ಕೊಡಗಿನ ಸೋಮವಾರಪೇಟೆಯ ಸುರ್ಲಬ್ಬಿಯಲ್ಲಿ ನಡೆದಿದೆ. ಕೊಲೆ ಮಾಡಿದ ಹುಚ್ಚ ಪ್ರೇಮಿಯನ್ನು ವಿರೂಪಾಕ್ಷ ಎಂದು ಗುರುತಿಸಲಾಗಿದೆ. ಮೀನಾ ಕೊಲೆಯಾಗಿರುವ ಬಾಲಕಿ. ಮಧ್ಯಾಹ್ನ ಪೊಲೀಸರ ಸಮ್ಮುಖದಲ್ಲಿ ಮದುವೆ ನಿಶ್ಚಿತಾರ್ಥ ರದ್ದಾಗಿದ್ದರೆ ಸಂಜೆ ವೇಳೆ ಆಕೆಯ ಮನೆಗೆ ನುಗ್ಗಿದ ಆರೋಪಿ ವಿರೂಪಾಕ್ಷ ಆಕೆಯನ್ನು ಎಳೆದೊಯ್ದು ಕತ್ತು ಕೊಯ್ದು ದೇಹವನ್ನು ಬಿಸಾಡಿ ರುಂಡ ಕೊಂಡೊಯ್ದಿದ್ದಾನೆ. ಭೀಕರ ಘಟನೆಯು ಈ ಪ್ರದೇಶದ ಜನರನ್ನು ಬೆಚ್ಚಿ ಬೀಳಿಸಿದೆ.

ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿದ್ದ ಕಾರಣ ಮದುವೆ ರದ್ದು ಮಾಡಲಾಗಿತ್ತು. ಆಕೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು ಗುರುವಾರವಷ್ಟೇ ಫಲಿತಾಂಶ ಪ್ರಕಟಗೊಂಡಿತ್ತು. ಇದೇ ವೇಳೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಅಪ್ರಾಪ್ತ ವಯಸ್ಸಿನವಳಾಗಿದ್ದ ಕಾರಣ ಆಕೆಯ ಮದುವೆ ನಿಶ್ಚಿತಾರ್ಥವನ್ನು ರದ್ದು ಮಾಡಲಾಗಿತ್ತು. ಪೊಲೀಸರೇ ಮುಂದೆ ನಿಂತು ಮದುವೆಯನ್ನು ಕೊನೆಗೊಳಿಸಿದ್ದರು. ಆದರೆ ಸಂಜೆ ವೇಳೆಗೆ ಆಕೆಯನ್ನು ಎಳೆದೊಯ್ದು ಕೊಲೆ ಮಾಡಿದ್ದಾನೆ ಆರೋಪಿ ವಿರೂಪಾಕ್ಷ.

ಬಾಲಕಿಯನ್ನು ಆರೋಪಿ ವಿರೂಪಾಕ್ಷ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ, ಅವರ ಮದುವೆಗೆ ಒಪ್ಪಿಗೆ ಸಿಕ್ಕಿರಲಿಲ್ಲ. ಬಾಲಕಿಗೆ ಮದುವೆಯ ಕಾನೂನುಬದ್ಧ ವಯಸ್ಸಾಗದ ಕಾರಣ ಪೊಲೀಸರು ಅದಕ್ಕೆ ತಡೆಯೊಡ್ಡಿದ್ದರು ಎನ್ನಲಾಗಿದೆ. ಇದರಿಂದ ಆರೋಪಿ ಕೆರಳಿದ್ದ. ಸಂಜೆ ವೇಳೆ ಬಾಲಕಿಯ ಮನೆಗೆ ನುಗ್ಗಿದ ಆತ ಅಲ್ಲಿಂದ ಎಳೆದೊಯ್ದಿದ್ದ. ಬಳಿಕ ಕತ್ತು ಕತ್ತರಿಸಿ ಕೊಲೆ ಮಾಡಿ ರುಂಡವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.

ಎಸ್​ಎಸ್​ಎಲ್​ಸಿ ಪಾಸಾಗಿದ್ದ ಬಾಲಕಿ

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಗುರುವಾರವಷ್ಟೇ ಫಲಿತಾಂಶ ಪ್ರಕಟಿಸಿತ್ತು. ಅಂತೆಯೇ ಸುರ್ಲಬ್ಬಿ ಸರ್ಕಾರಿ ಹೈಸ್ಕೂಲ್​ನ ಏಕೈಕ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಮೀನಾ ಪರೀಕ್ಷೆಯಲ್ಲಿ ಪಾಸಾಗಿದ್ದರು. ಆಕೆ ತೇರ್ಗಡೆಗೊಂಡಿರುವ ಸಂಗತಿ ಶಾಲಾ ಅಧ್ಯಾಪಕರಿಗೆ ಸಂತಸ ತಂದಿದ್ದು. ಅಲ್ಲದೆ ಶಾಲೆಯಲ್ಲಿ ಶೇಕಡಾ 100 ಫಲಿತಾಂಶ ಬಂದಿತ್ತು. ಆದರೆ ಸಂಜೆಯ ವೇಳೆಗೆ ಬಾಲಕಿ ಭಯಾನಕವಾಗಿ ಕೊಲೆಯಾಗಿದ್ದಳು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ತನಿಖೆ ಆರಂಭಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್‌; ನೇಣಿಗೆ ಶರಣಾದ ವಿದ್ಯಾರ್ಥಿ

ಮಂಡ್ಯ: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ (SSLC Result 2024) ಪ್ರಕಟಗೊಂಡಿದೆ. ಮಂಡ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಫೇಲ್‌ ಆದ ಹಿನ್ನೆಲೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಿಖಿಲ್ (16) ನೇಣಿಗೆ ಶರಣಾದ ವಿದ್ಯಾರ್ಥಿ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ನಿಖಿಲ್, ಫಲಿತಾಂಶ ನೋಡಿ 3 ವಿಷಯದಲ್ಲಿ ಫೇಲ್ ಆದ ಹಿನ್ನೆಲೆಯಲ್ಲಿ ಹೊಲಕ್ಕೆ ತೆರಳಿ ಮರವೊಂದಕ್ಕೆ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಫೇಲ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

ಬೆಳಗಾವಿ: ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತಿರ್ಣಗೊಂಡ ವಿದ್ಯಾರ್ಥಿನಿಯೋರ್ವಳು ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಜರುಗಿದೆ.

ಇದನ್ನೂ ಓದಿ: Prajwal Revanna Case : ಬಿಜೆಪಿ ಮುಖಂಡ ದೇವರಾಜೇಗೌಡ ವಿರುದ್ಧ ಲೈಂಗಿಕ ಕಿರುಕುಳ ಕೇಸ್​ ದಾಖಲು

Exit mobile version