ದೊಡ್ಡಬಳ್ಳಾಪುರ: ರೈಲ್ವೆ ಹಳಿ (Railway Track) ಮೇಲೆ ಮೇಕೆಗಳನ್ನು ಮೇಯಿಸುತ್ತಿದ್ದ ದಂಪತಿ, ವೇಗವಾಗಿ ಬಂದ ರೈಲಿಗೆ ಸಿಕ್ಕಿಹಾಕಿಕೊಂಡು (Train Accident) ಬಲಿಯಾಗಿದ್ದಾರೆ. ಈ ಭೀಕರ ದುರಂತ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ (Doddaballapura news) ತಾಲೂಕಿನ ಕೆಳಗಿನ ನಾಯಕರಂಡಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಚಂದ್ರ ನಾಯಕ್ ಮತ್ತು ಜಯಬಾಯಿ ಮೃತ ದಂಪತಿಗಳು. ಮೇಕೆ ಮೇಯಿಸಲು ಹೋಗಿದ್ದ ವೇಳೆ ಗಂಡ ರೈಲ್ವೆ ಹಳಿ ಮೇಲೆ ಹೋಗಿದ್ದರು. ಈ ವೇಳೆ ರೈಲು ಬರುತ್ತಿದ್ದುದನ್ನು ಕಂಡು ಕಂಡು ಪತ್ನಿಯು ಗಂಡನ ರಕ್ಷಣೆಗೆ ಧಾವಿಸಿದ್ದಳು. ವೇಗವಾಗಿ ಬಂದ ರೈಲು ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೇಲಕ್ಕೆ ಹಾರಿ ಕೆಳಕ್ಕೆ ಬಿದ್ದ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಅಪಘಾತ; ಡಿವೈಡರ್‌ಗೆ ಕಾರು ಡಿಕ್ಕಿಯಾಗಿ 2 ಸಾವು
ಮಂಡ್ಯ: ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಇಬ್ಬರು ಸಾವಿಗೀಡಾಗಿ, ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿರುವ ದುರ್ಘಟನೆ ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ವೇಯಲ್ಲಿ ಘಟಿಸಿದೆ.
ಬೆಂಗಳೂರು- ಮೈಸೂರು ಹೆದ್ದಾರಿಯ ನಡುವಿನ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ರುದ್ರಾಕ್ಷಿಪುರ ಗ್ರಾಮದಲ್ಲಿ ಅಪಘಾತ ನಡೆದಿದೆ. ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಹಾಗೂ ಪುತ್ರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಬಗಲಕುಂಟೆ ನಿವಾಸಿಗಳಾದ ಕಲಾ (40), ಪುತ್ರ ದರ್ಶನ್ (21) ಮೃತಪಟ್ಟವರು.
ಕಾರಿನ ಹಿಂಬದಿಯಲ್ಲಿದ್ದ ಪುತ್ರಿ ಮೇಘನ ಹಾಗೂ ಅಳಿಯ ಮಂಜುನಾಥ್ ಅವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಮಿಮ್ಸ್ ಶವಗಾರಕ್ಕೆ ಮೃತ ದೇಹಗಳನ್ನು ರವಾನಿಸಲಾಗಿದ್ದು, ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹತ್ಯೆ ಆರೋಪಿ ಶವವಾಗಿ ಪತ್ತೆ
ಅಪ್ರಾಪ್ತ ಬಾಲಕಿಯ ಹತ್ಯೆಗೆ ಸಂಬಂಧಿಸಿದಂತೆ ಬೇಕಾಗಿದ್ದ 26 ವರ್ಷದ ವ್ಯಕ್ತಿ ಗುರುವಾರ ಅನಕಪಲ್ಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಕೆ.ಜಿ. ಪಾಲೆಂ ಗ್ರಾಮದಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಸುರೇಶ್ ಶವ ಪತ್ತೆಯಾಗಿದೆ ಎಂದು ಅನಕಾಪಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಮುರಳಿ ಕೃಷ್ಣ ತಿಳಿಸಿದ್ದಾರೆ. ಅಪ್ರಾಪ್ತ ಬಾಲಕಿಯನ್ನು ಕೊಂದ ಸ್ಥಳದಿಂದ ಕೇವಲ 700 ಮೀಟರ್ ದೂರದಲ್ಲಿ ಸುರೇಶ್ ಶವ ಪತ್ತೆಯಾಗಿದೆ. ವಿಷ ಬೆರೆಸಿದ ಪಾನೀಯ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಮುರಳಿ ಕೃಷ್ಣ ತಿಳಿಸಿದ್ದಾರೆ.
ಆಂಧ್ರಪ್ರದೇಶ ಪೊಲೀಸರು ಶನಿವಾರ ಸಂಜೆ 14 ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ ಅನಂತರ ಸುರೇಶ್‌ಗಾಗಿ ಶೋಧ ನಡೆಸಿದ್ದರು.
ಇದನ್ನೂ ಓದಿ: Kangana Ranaut: ನನ್ನನ್ನು ಭೇಟಿಯಾಗಲು ಬರುವವರು ಆಧಾರ್ ಕಾರ್ಡ್ ತನ್ನಿ ಎಂದ ಕಂಗನಾ ರಣಾವತ್; ಏನ್ ದೌಲತ್ತು ನೋಡಿ!