ಪುತ್ತೂರು: ಬಿಜೆಪಿ ಯುವಮೋರ್ಚಾ ಪದಾಧಿಕಾರಿ ಪ್ರವೀಣ್ ನೆಟ್ಟಾರು ಅವರನ್ನು ಬರ್ಬರವಾಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಝಾಕೀರ್ ಹಾಗೂ ಶಫೀಕ್ ಎಂಬ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಎಸ್‌ಪಿ ಋಷಿಕೇಶ್ ಸೋನಾವಣೆ ಈ ಕುರಿತು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಸಿಕ್ಕ ಮಾಃಇತಿ ಆಧಾರದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಮಂಗಳವಾರ ರಾತ್ರಿ ೯ ಗಂಟೆಯ ಹೊತ್ತಿಗೆ ನೆಟ್ಟಾರಿನಲ್ಲಿರುವ ತಮ್ಮ ಚಿಕನ್ ಸೆಂಟರ್‌ನ ಬಾಗಿಲು ಮುಚ್ಚಿ ಹೊರಡುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ಪ್ರವೀಣ್ ಅವರನ್ನು ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿದ್ದರು. ಬಂಧಿತ ಇಬ್ಬರಲ್ಲಿ ಒಬ್ಬ ಬೆಳ್ಳಾರೆ ನಿವಾಸಿ ಎನ್ನಲಾಗಿದೆ.
ಎಲ್ಲಿ ಬಂಧಿಸಲಾಗಿದೆ, ಅವರ ಹಿನ್ನೆಲೆ ಏನು, ಕೊಲೆಯಲ್ಲಿ ಅವರ ಪಾತ್ರವೇನು ಎಂಬುದರ ನಿಖರ ಮಾಹಿತಿಯನ್ನು ಸದ್ಯದಲ್ಲೆ ನೀಡುತ್ತೇವೆ ಎಂದು ಎಸ್.ಪಿ. ಋಷಿಕೇಶ್ ಸೋನಾವಣೆ ಹೇಳಿದ್ದಾರೆ.
ಇದನ್ನೂ ಓದಿ | Praveen Nettaru | ಪ್ರವೀಣ್ ಹತ್ಯೆಗೆ ವ್ಯಾಪಕ ಆಕ್ರೋಶ; ದಕ್ಷಿಣ ಕನ್ನಡದ ವಿವಿಧೆಡೆ ಬಂದ್