Site icon Vistara News

Ujjain Case: ರಕ್ತಸಿಕ್ತ ಬಾಲಕಿಯ ನೋಡಿ ಎಲ್ಲರೂ ಸುಮ್ಮನಿದ್ದಾಗ ಆಕೆಯನ್ನು ರಕ್ಷಿಸಿದ್ದು ಹಿಂದು ಸನ್ಯಾಸಿ!

Ujjain Priest Rahul Sharma

Ujjain Case: Hindu Priest Helped 12 year old Harassment Survivor

ಭೋಪಾಲ್:‌ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 12 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ (Ujjain Case) ಎಸಗಿ, ಆಕೆಯು ರಕ್ತಸಿಕ್ತವಾಗಿ ನರಳುತ್ತ ಸಹಾಯಕ್ಕಾಗಿ ಮನೆ ಮನೆಗೆ ತೆರಳಿದ ವಿಡಿಯೊ ವೈರಲ್‌ ಆಗಿದೆ. ಅಷ್ಟೇ ಅಲ್ಲ, ನಾಗರಿಕ ಸಮಾಜವೂ ಇಂತಹ ಘಟನೆಯಿಂದ ತಲೆತಗ್ಗಿಸುವಂತಾಗಿದೆ. ಆದರೆ, ಲೈಂಗಿಕ ದೌರ್ಜನ್ಯಕ್ಕೀಡಾಗಿ, ಮೈತುಂಬ ಗಾಯಳಾಗಿದ್ದರೂ, ಆಕೆ 8 ಕಿ.ಮೀ ನಡೆದರೂ ಯಾರೂ ಕೂಡ ಸಹಾಯ ಮಾಡಿಲ್ಲ ಎಂಬುದು ಕೂಡ ನಾಗರಿಕ ಸಮಾಜದ ಮೌಲ್ಯಗಳಿಗೆ ಧಕ್ಕೆಯಾಗಿದೆ. ಇಂತಹ ಪರಿಸ್ಥಿತಿಯ ಮಧ್ಯೆಯೇ ಹಿಂದು ಸನ್ಯಾಸಿಯೊಬ್ಬರು (Hindu Priest) ಬಾಲಕಿಗೆ ನೆರವು ನೀಡಿದ ವಿಷಯ ಈಗ ಗಮನ ಸೆಳೆದಿದೆ.

ಹೌದು, ರಕ್ತಸಿಕ್ತವಾಗಿ ನಡೆಯುತ್ತಿದ್ದರೂ ಯಾರೂ ಸಹಾಯ ಮಾಡದಿದ್ದಾಗ ಬದ್ನಗರ ರಸ್ತೆ ಬಳಿ ಇದ್ದ ಆಶ್ರಮಕ್ಕೆ ಬಾಲಕಿ ತೆರಳಿದ್ದಾಳೆ. ಆಗ ಆಶ್ರಮದಲ್ಲಿದ್ದ ರಾಹುಲ್‌ ಶರ್ಮಾ ಎಂಬ ಹಿಂದು ಸನ್ಯಾಸಿಯು ಬಾಲಕಿಗೆ ಬಟ್ಟೆ ಹೊದಿಸಿ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕವೇ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿ, ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

“ಸೆಪ್ಟೆಂಬರ್‌ 25ರಂದು ಬೆಳಗ್ಗೆ 9.30ರ ಸುಮಾರಿಗೆ ಬಾಲಕಿಯು ಆಶ್ರಮದೊಳಗೆ ಬಂದಳು. ಕೂಡಲೇ ಆಕೆಗೆ ನನ್ನ ಬಟ್ಟೆ ನೀಡಿದೆ. ತೀವ್ರವಾಗಿ ರಕ್ತಸ್ರಾವ ಆಗುತ್ತಿತ್ತು. ಮೈತುಂಬ ಗಾಯಗಳಾಗಿದ್ದವು, ಆಕೆಯ ಕಣ್ಣುಗಳು ಊದಿಕೊಂಡಿದ್ದವು. ಮಾತನಾಡಲು ಕೂಡ ಬಾಲಕಿಗೆ ಸಾಧ್ಯವಾಗುತ್ತಿರಲಿಲ್ಲ. ನಾನು ಕೂಡಲೇ ಮಹಾಕಾಳ್‌ ಪೊಲೀಸ್‌ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದೆ. 20 ನಿಮಿಷದಲ್ಲಿ ಪೊಲೀಸರು ಸ್ಥಳಕ್ಕೆ ಬಂದರು” ಎಂಬುದಾಗಿ ಮಾಧ್ಯಮಗಳಿಗೆ ರಾಹುಲ್‌ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ; ರಕ್ತಸಿಕ್ತ ಬಾಲಕಿ ಮನೆಮನೆಗೆ ತೆರಳಿ ಗೋಳಾಡಿದರೂ ಸಹಾಯ ಮಾಡದ ನಿರ್ದಯಿಗಳು!

ಆಟೋ ಚಾಲಕ ಸೇರಿ ಮೂವರ ಬಂಧನ

ಬಾಲಕಿಯೊಬ್ಬಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ, ಆಕೆ ಅಂಗಲಾಚಿದ ವಿಡಿಯೊ ವೈರಲ್‌ ಆಗುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ, ಕಾರ್ಯಪ್ರವೃತ್ತರಾದ ಪೊಲೀಸರು ಆಟೋ ಚಾಲಕ ಸೇರಿ ಮೂವರನ್ನು ಬಂಧಿಸಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಕೇಶ್‌ ಎಂಬ ಆಟೋ ಚಾಲಕ ಸೇರಿ ಮೂವರನ್ನು ವಶಪಡಿಸಿಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇಷ್ಟಾದರೂ, ಬಾಲಕಿಗೆ ಸರಿಯಾದ ನೆರವು ಸಿಗದಿರುವುದು, ಪೊಲೀಸರ ಹೇಳಿಕೆಗಳಲ್ಲಿ ಬದಲಾಗುತ್ತಿರುವುದು ಹಲವು ಅನುಮಾನ ಹುಟ್ಟಿಸಿದೆ.

Exit mobile version