ಲೈಂಗಿಕ ದೌರ್ಜನ್ಯ; ರಕ್ತಸಿಕ್ತ ಬಾಲಕಿ ಮನೆಮನೆಗೆ ತೆರಳಿ ಗೋಳಾಡಿದರೂ ಸಹಾಯ ಮಾಡದ ನಿರ್ದಯಿಗಳು! Vistara News

ಕ್ರೈಂ

ಲೈಂಗಿಕ ದೌರ್ಜನ್ಯ; ರಕ್ತಸಿಕ್ತ ಬಾಲಕಿ ಮನೆಮನೆಗೆ ತೆರಳಿ ಗೋಳಾಡಿದರೂ ಸಹಾಯ ಮಾಡದ ನಿರ್ದಯಿಗಳು!

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 12 ವರ್ಷದ ಬಾಲಕಿಯು ಲೈಂಗಿಕ ದೌರ್ಜನ್ಯಕ್ಕೀಡಾಗಿದ್ದಾಳೆ. ಆಕೆ ಮನೆ ಮನೆಗೆ ತೆರಳಿ ಸಹಾಯಕ್ಕೆ ಅಂಗಲಾಚಿದರೂ ಯಾರೂ ಸಹಾಯ ಮಾಡದಿರುವುದು ಕೂಡ ಅಮಾನವೀಯ ಎನಿಸಿದೆ.

VISTARANEWS.COM


on

Physical Abuse
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭೋಪಾಲ್:‌ ದೇಶದಲ್ಲಿ ಬಾಲಕಿಯರು ಸೇರಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು, ಅತ್ಯಾಚಾರ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಎಷ್ಟೇ ಕಠಿಣ ಕ್ರಮ ಜಾರಿಗೆ ತಂದರೂ ಕ್ರೂರ ಜನ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಮಧ್ಯಪ್ರದೇಶದಲ್ಲಿ (Madhya Pradesh) 12 ವರ್ಷದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಲೈಂಗಿಕ ದೌರ್ಜನ್ಯದ ಬಳಿಕ ಬಾಲಕಿಯು ಸಹಾಯಕ್ಕಾಗಿ ಅಂಗಲಾಚಿಕೊಂಡು ಮನೆ ಮನೆಗೆ ಹೋದರೂ ಯಾರೂ ಸಹಾಯ ಮಾಡದಿರುವುದು ಜನರ ಮನಸ್ಥಿತಿಗೂ ಕನ್ನಡಿ ಹಿಡಿದಂತಿದೆ.

ಉಜ್ಜಯಿನಿಯ ಬದ್ನಗರದ ಬಳಿ 12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಇದಾದ ಬಳಿಕ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿಯು ಅರೆಬೆತ್ತಲೆಯಾಗಿ ರಸ್ತೆ ಮೇಲೆ ನಡೆದುಕೊಂಡು ಹೋಗಿದ್ದಾಳೆ. ನನಗೆ ಸಹಾಯ ಮಾಡಿ ಎಂದು ಮನೆ ಮನೆಗೆ ತೆರಳಿ ಅಂಗಲಾಚಿದರೂ ಯಾರೋಬ್ಬರು ಕೂಡ ಬಾಲಕಿಗೆ ಸಹಾಯ ಮಾಡಿಲ್ಲ. ಬಾಲಕಿಯ ದುಸ್ಥಿತಿಯನ್ನು ನೋಡಿಕೊಂಡು ಸುಮ್ಮನಿದ್ದರೇ ಹೊರತು, ಏನಾಯ್ತಮ್ಮ ಎಂದು ಕೇಳಿಲ್ಲ, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡಿಲ್ಲ. ಇಂತಹ ಭೀಕರ ದೃಶ್ಯಗಳಿರುವ ವಿಡಿಯೊ ವೈರಲ್‌ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಸಹಾಯಕ್ಕಾಗಿ ಅಂಗಲಾಚಿದ ಬಾಲಕಿ

ಆಸ್ಪತ್ರೆಗೆ ಸಾಗಿಸಿದ ಸಂತ

ಗೋಳಾಡುತ್ತ ಗೋಳಾಡುತ್ತ ಬಾಲಕಿಯು ಆಶ್ರಮವೊಂದನ್ನು ಪ್ರವೇಶಿಸಿದ್ದಾಳೆ. ಅಲ್ಲಿರುವ ಸಂತರೊಬ್ಬರು ಬಾಲಕಿಗೆ ಟವೆಲ್‌ ಹೊದಿಸಿ, ಆಕೆಯನ್ನು ಉಜ್ಜಯಿನಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ನಿಜ ಎಂಬುದು ವೈದ್ಯಕೀಯ ತಪಾಸಣೆ ಬಳಿಕ ಗೊತ್ತಾಗಿದೆ. ರಕ್ತಸ್ರಾವ, ಮೈತುಂಬ ಗಾಯಗಳಾದ ಕಾರಣ ಬಾಲಕಿಯನ್ನು ಇಂದೋರ್‌ ಆಸ್ಪತ್ರೆಗೆ ಸಾಗಿಸಲಾಗಿದೆ. ಆಕೆಯ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ದೂರು ನೀಡಲು ಹೋದ ದಲಿತ ಮಹಿಳೆ ಮೇಲೆಯೇ ಅತ್ಯಾಚಾರ ಎಸಗಿದ ಪಿಎಸ್‌ಐ; ಇದೆಂಥಾ ಅನಾಚಾರ!

ಬಾಲಕಿ ಮೇಲೆ ಯಾರು ಅತ್ಯಾಚಾರ ಎಸಗಿದ್ದಾರೆ ಎಂಬ ಕುರಿತು ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ. ಬಾಲಕಿಯಂತೂ ಪೊಲೀಸರ ಒಂದು ಪ್ರಶ್ನೆಗೂ ಉತ್ತರಿಸಲು ಆಗದಷ್ಟು ಕುಗ್ಗಿಹೋಗಿದ್ದಾಳೆ. ಅಪರಿಚಿತರ ವಿರುದ್ಧ ಪೊಲೀಸರು ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗೆಯೇ, ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡವೊಂದನ್ನು ರಚಿಸಿದ್ದಾರೆ. ಹಾಗೆಯೇ, ಆರೋಪಿಗಳ ಕುರಿತು ಸುಳಿವು ಸಿಕ್ಕರೆ ಮಾಹಿತಿ ಕೊಡಿ ಎಂಬುದಾಗಿಯೂ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Murder Case : ಸ್ನೇಹಿತನ ಹಣ ಕೊಡಿಸಿ ಕಿರಿಕ್ ಮಾಡಿಕೊಂಡು ಹೆಣವಾದ ಯುವಕ!

Murder Case : ಎಣ್ಣೆಮತ್ತಿನಲ್ಲಿ ನಡೆದ ಅದೊಂದು ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿದೆ. ಸ್ನೇಹಿತನ ಹಣ ಕೊಡಿಸಿ ಕಿರಿಕ್‌ ಮಾಡಿಕೊಂಡು ಯುವಕನೊಬ್ಬ ಉಸಿರು ಚೆಲ್ಲಿದ್ದಾನೆ.

VISTARANEWS.COM


on

By

murder case in Bengaluru
Koo

ಬೆಂಗಳೂರು: ಇಲ್ಲಿನ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ಸಿಂಗಸಂದ್ರದಲ್ಲಿ ವ್ಯಕ್ತಿಯೊಬ್ಬನ ಎದೆಗೆ ಚಾಕುವಿನಿಂದ ಇರಿದು ಹತ್ಯೆ (Murder case) ಮಾಡಲಾಗಿದೆ. ಎಣ್ಣೆಮತ್ತಿನಲ್ಲಿ 1500 ರೂ ವಿಚಾರಕ್ಕೆ ನಡೆದ ಕಿರಿಕ್ ಕೊಲೆಯಲ್ಲಿ ಅಂತ್ಯವಾಗಿದೆ. ಸ್ನೇಹಿತನ ಹಣ ಕೊಡಿಸಿ ಕಿರಿಕ್ ಮಾಡಿಕೊಂಡು ಗೋಪಾಲ್‌ ಎಂಬಾತ ಹೆಣವಾಗಿದ್ದಾನೆ.

ಗೋಪಾಲ್, ಕರೆಗೌಡ ಮತ್ತು ಶಶಿಧರ್‌ ಈ ಮೂವರು ಸ್ನೇಹಿತರು ಬಾರ್‌ವೊಂದರಲ್ಲಿ ಕುಡಿಯಲು ಹೋಗಿದ್ದರು. ಅದೇ ಬಾರ್‌ಗೆ ಪ್ರದೀಪ್ ಮತ್ತು ಗಿರೀಶ್ ಎಂಬುವವರು ಬಂದಿದ್ದರು. ಹಿಂದೊಮ್ಮೆ ಎಲೆಕ್ಟ್ರಿಷಿಯನ್ ಕೆಲಸದಲ್ಲಿ ಕರೆಗೌಡಗೆ 1,500 ರೂ. ಹಣವನ್ನು ಗಿರೀಶ್ ಕೊಡಬೇಕಿತ್ತು. ಬಾರ್‌ನಲ್ಲಿ ಗಿರೀಶ್‌ ಸಿಕ್ಕಾಗ ಹಣ ಕೊಡುವಂತೆ ಕರೆಗೌಡ ಕೇಳಿದ್ದಾನೆ.

ಈ ವೇಳೆ ಗಿರೀಶ್‌ ಹಣ ಕೊಡುವುದಿಲ್ಲ ಏನ್‌ ಬೇಕಾದರೂ ಮಾಡಿಕೋ ಎಂದು ಕರೆಗೌಡಗೆ ಅವಾಜ್‌ ಹಾಕಿದ್ದಾನೆ. ಆಗ ಅಲ್ಲೇ ಇದ್ದ ಕರೆಗೌಡನ ಸ್ನೇಹಿತ ಗೋಪಾಲ್‌ ಮಧ್ಯ ಪ್ರವೇಶಿಸಿ, ಗಿರೀಶ್‌ಗೆ ಹೊಡೆದು ಹಣವನ್ನು ವಾಪಸ್‌ ಕೊಡಿಸಿದ್ದ. ಇದು ಇಷ್ಟೆಕ್ಕೆ ನಿಲ್ಲದೆ ನಂತರ ಈ ಗಿರೀಶ್‌ ಶಶಿಧರ್‌ಗೆ ಫೋನ್ ಮಾಡಿ ಅವಾಚ್ಯ ಶಬ್ಧಗಳಲ್ಲಿ ನಿಂದಿಸಿದ್ದಾನೆ.

ಇದರಿಂದ ಸಿಟ್ಟಾದ ಗೋಪಾಲ್, ಕರೆಗೌಡ, ಶಶಿಧರ್‌ನನ್ನು ಕರೆದುಕೊಂಡು ಗಿರೀಶ್ ಮನೆಗೆ ಹೋಗಿದ್ದಾರೆ. ಗಿರೀಶ್‌ಗೆ ಸರಿಯಾಗಿ ಮಾತನಾಡುವಂತೆ ಹೇಳಿ ಇಲ್ಲದಿದ್ದರೆ ಪರಿಸ್ಥಿತಿ ಸರಿಯಾಗಿ ಇರುವುದಿಲ್ಲ ಎಂದು ಆತನ ಪತ್ನಿ ಬಳಿ ಹೇಳಿದ್ದಾರೆ. ಈ ವೇಳೆ ಅಡುಗೆ ಮನೆಯಿಂದ ಚಾಕುವನ್ನು ಬೆನ್ನ ಹಿಂದೆ ಇಟ್ಟುಕೊಂಡು ಬಂದ ಗಿರೀಶ್‌, ಏಕಾಏಕಿ ಗೋಪಾಲ್ ಎದೆಗೆ ಚಾಕುವಿನಿಂದ ಚುಚ್ಚಿ, ಮನೆಯಿಂದ ಪರಾಗಿದ್ದಾನೆ.

ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಗೋಪಾಲ್‌ನನ್ನು ಸ್ನೇಹಿತರೆಲ್ಲರೂ ಸೇರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡಿದ್ದ ಗೋಪಾಲ್‌ ಚಿಕಿತ್ಸೆ ಫಲಕಾರಿಯಾಗದೆ ಎರಡು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸದ್ಯ ಆರೋಪಿ ಗಿರೀಶ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ನಿದ್ರೆಗೆ ಜಾರಿದಾಗ ವ್ಯಕ್ತಿಯ ಕತ್ತು ಕೊಯ್ದ ಹಂತಕರು!

ಕೊಪ್ಪಳ: ಜಗಲಿ ಕಟ್ಟೆಯಲ್ಲಿ ಮಲಗಿದ್ದಲೇ ವ್ಯಕ್ತಿಯ ಕತ್ತು ಕೊಯ್ದು ಹತ್ಯೆ (Murder Case ) ಮಾಡಿರುವ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ವಟಪರ್ವಿಯಲ್ಲಿ ನಡೆದಿದೆ. ವಟಪರ್ವಿ ಗ್ರಾಮದ ಪ್ರಭುರಾಜ ಎಂಬಾತ ಹತ್ಯೆಯಾದವನು.

ಕಳೆದ ಸೋಮವಾರದಿಂದ ಪ್ರಭುರಾಜ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಪ್ರಭುರಾಜ ತೋಟದ ಮನೆಯ ಹೊರಗಿದ್ದ ಜಗಲಿ ಕಟ್ಟೆ ಮೇಲೆ ಮಲಗಿದ್ದ ಅವರ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ಮಾಡಿ ಕೊಚ್ಚಿ ಕೊಲೆ ಮಾಡಲಾಗಿದೆ. ಮಂಗಳವಾರ ಸಂಜೆ ಕೊಲೆಯಾಗಿರುವ ಶಂಕೆ ಇದ್ದು, ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಸ್ಥಳಕ್ಕೆ ಬೇವೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

6 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾದ ಯುವತಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಪತಿ ಹಾಗೂ ಪತ್ನಿ ನಡುವೆ ವೈಮನಸ್ಸು ಬಂದ ಕಾರಣ ಮನನೊಂದ ಪತ್ನಿ ಆತ್ಮಹತ್ಯೆ (Self Harm) ಮಾಡಿಕೊಂಡ ಘಟನೆ ನಡೆದಿದೆ. ಮುಸ್ಕಾತ್ ತಾಜ್ (21) ಆತ್ಮಹತ್ಯೆ ಮಾಡಿಕೊಂಡ ಪತ್ನಿ.

ಇವರು ಚಿಕ್ಕಬಳ್ಳಾಪುರ (Chikkaballapura news) ಜಿಲ್ಲೆಯ ಚಿಂತಾಮಣಿ ನಗರದ ವೆಂಕಟಗಿರಿಕೋಟೆಯಲ್ಲಿರುವ ಪತಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರು ತಿಂಗಳ ಹಿಂದೆ ಆಜಾಮ್‌ ಎಂಬಾತನನ್ನು ಪ್ರೀತಿಸಿದ್ದ ಈಕೆ ನಂತರ ವಿವಾಹ ಮಾಡಿಕೊಂಡಿದ್ದರು. ಪತಿ ಆಜಾಮ್ ವಿರುದ್ಧ ಪತ್ನಿಯ ಪೋಷಕರು ಕೊಲೆ ಆರೋಪ (murder complaint) ಹೊರಿಸಿದ್ದಾರೆ. ಚಿಂತಾಮಣಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬೆಂಗಳೂರಿನಲ್ಲಿ ಆಟೋ ಚಾಲಕನ ಬರ್ಬರ ಹತ್ಯೆ

ಬೆಂಗಳೂರು: ರಾಜಧಾನಿಯಲ್ಲಿ ಯುವಕನೊಬ್ಬನನ್ನು ಹತ್ತಕ್ಕೂ ಅಧಿಕ ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಅರುಣ್ (24) ಕೊಲೆಯಾದ ಆಟೋ ಚಾಲಕ. ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯ ಟಿಂಬರ್ ಲೇಔಟ್‌ನಲ್ಲಿ ಘಟನೆ ನಡೆದಿದೆ.

ಅರುಣ್‌ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಅರುಣ್‌ನ ಮದುವೆ ಸಹ ಮುಂದಿನ ತಿಂಗಳು ಫಿಕ್ಸ್ ಆಗಿತ್ತು. 10ಕ್ಕೂ ಅಧಿಕ ಮಂದಿ ದುಷ್ಕರ್ಮಿಗಳಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿರುವ ರೀತಿ ನೋಡಿದರೆ ಹಳೆಯ ದ್ವೇಷ ತೀರಿಸಿಕೊಳ್ಳಲು ನಡೆದ ಕೃತ್ಯದಂತೆ ಕಾಣಿಸುತ್ತಿದೆ. ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading

ಕರ್ನಾಟಕ

Road Accident : ಸಿಎಂ‌ ಬರುವ ದಾರಿಯಲ್ಲಿ ಅಪಘಾತ; ಆಂಬ್ಯುಲೆನ್ಸ್‌ ಬಾರದೆ ವ್ಯಕ್ತಿ ನರಳಾಟ

Road Accident : ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಬೆಳಗಾವಿಯಲ್ಲಿ ಬಸ್‌ ಹಾಗೂ ಬೈಕ್‌ ನಡುವೆ ಡಿಕ್ಕಿಯಾಗಿದ್ದರೆ, ಸರ್ಕಾರಿ ಬಸ್ ಹಾಗೂ ಶಾಲಾ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ.

VISTARANEWS.COM


on

By

road Accident
Koo

ಬೆಳಗಾವಿ/ಹೊಸುರು: ಸಿಎಂ ಸಿದ್ದರಾಮಯ್ಯ ಬರುವ ರಸ್ತೆಯಲ್ಲಿ ಅಪಘಾತ (Road Accident) ನಡೆದು, ವ್ಯಕ್ತಿಯೊಬ್ಬರು ನರಳಾಡಿದರು. ಫೋನ್‌ ಮಾಡಿದರೂ ಸೂಕ್ತ ಸಮಯಕ್ಕೆ ಆಂಬ್ಯುಲೆನ್ಸ್‌ ಬಾರದ ಕಾರಣಕ್ಕೆ ಪೊಲೀಸರು ಪಿಕ್ ಅಪ್ ವಾಹನದಲ್ಲಿ ಗಾಯಾಳಾನ್ನು ರವಾನಿಸಿದರು.

ಸಾಂಬ್ರಾ ವಿಮಾನ‌ ನಿಲ್ದಾಣದಿಂದ ಬೆಳಗಾವಿ ನಗರ ಸಂಪರ್ಕಿಸುವ ರಸ್ತೆಯಲ್ಲಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ನಡೆದಿದೆ. ಪರಿಣಾಮ ಮಹೇಶ ದುಡಗುಂಡಿ ಎಂಬುವವರು ಗಂಭೀರ ಗಾಯಗೊಂಡು ನರಳಾಡಿದರು. ಇತ್ತ ಅಪಘಾತ ನಡೆಯುತ್ತಿದ್ದಂತೆ ಸ್ಥಳೀಯರೆಲ್ಲರೂ ಸಹಾಯಕ್ಕೆ ಧಾವಿಸಿದರೂ, ಆಂಬ್ಯುಲೆನ್ಸ್‌ ಕರೆ ಮಾಡಿದರು. ಆದರೆ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್‌ ಬಾರದ ಕಾರಣಕ್ಕೆ 15 ನಿಮಿಷಕ್ಕೂ ಹೆಚ್ಚು ಕಾಲ ಮಹೇಶ್‌ ನರಳಾಡಿದರು.

ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಗಾಯಾಳನ್ನು ಚಿಕಿತ್ಸೆಗೆ ರವಾನೆ ಮಾಡಲಾಗಿದೆ. ಸೂಕ್ತ ಸಮಯಕ್ಕೆ ಆಂಬ್ಯುಲೆನ್ಸ್ ಬಾರದ್ದಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದರು. ಇತ್ತ ತ್ವರಿತವಾಗಿ ಗಾಯಾಳನ್ನು ಆಸ್ಪತ್ರೆಗೆ ರವಾನಿಸಿದ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸರ್ಕಾರಿ ಬಸ್ ಹಾಗೂ ಶಾಲಾ ಬಸ್ ನಡುವೆ ಭೀಕರ ಅಪಘಾತ!

ರಾಜ್ಯ ಗಡಿಭಾಗ ತಮಿಳುನಾಡಿನ ಹೊಸೂರು – ಬಾಗಲೂರು ರಸ್ತೆಯ ಜೀಮಂಗಲಂ ಬಳಿ ಸರ್ಕಾರಿ ಬಸ್‌ ಹಾಗೂ ಶಾಲಾ ಬಸ್‌ ನಡುವೆ ಭೀಕರ ಅಪಘಾತ ಸಂಭವಿಸಿದೆ. ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಎರಡು ಬಸ್‌ಗಳ ಮುಂಭಾಗ ಛಿದ್ರಗೊಂಡಿದೆ.

ಶಾಲಾ ಬಸ್ ಚಾಲಕನಿಗೆ ಗಂಭೀರ ಗಾಯವಾಗಿದರೆ, ಸರ್ಕಾರಿ ಬಸ್‌ನಲ್ಲಿದ್ದ ಓರ್ವ ಬಾಲಕಿಯ ಸ್ಥಿತಿ‌ ಚಿಂತಾಜನಕವಾಗಿದೆ. ಇಬ್ಬರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತ ಬಸ್‌ನಲ್ಲಿ ಸಿಲುಕಿಕೊಂಡಿರುವ ಗಾಯಾಳುಗಳನ್ನು ಸ್ಥಳೀಯರು ಹೊರತೆಗೆಯುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading

ಕ್ರೈಂ

Self Harm: 6 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾದ ಯುವತಿ ಆತ್ಮಹತ್ಯೆ

ಆರು ತಿಂಗಳ ಹಿಂದೆ ಆಜಾಮ್‌ ಎಂಬಾತನನ್ನು ಪ್ರೀತಿಸಿದ್ದ ಈಕೆ ನಂತರ ವಿವಾಹ ಮಾಡಿಕೊಂಡಿದ್ದರು. ಪತಿ ಆಜಾಮ್ ವಿರುದ್ಧ ಪತ್ನಿಯ ಪೋಷಕರು ಕೊಲೆ ಆರೋಪ ಹೊರಿಸಿದ್ದಾರೆ.

VISTARANEWS.COM


on

self harm muskath
Koo

ಚಿಕ್ಕಬಳ್ಳಾಪುರ: ಪತಿ ಹಾಗೂ ಪತ್ನಿ ನಡುವೆ ವೈಮನಸ್ಸು ಬಂದ ಕಾರಣ ಮನನೊಂದ ಪತ್ನಿ ಆತ್ಮಹತ್ಯೆ (Self Harm) ಮಾಡಿಕೊಂಡ ಘಟನೆ ನಡೆದಿದೆ. ಮುಸ್ಕಾತ್ ತಾಜ್ (21) ಆತ್ಮಹತ್ಯೆ ಮಾಡಿಕೊಂಡ ಪತ್ನಿ.

ಇವರು ಚಿಕ್ಕಬಳ್ಳಾಪುರ (Chikkaballapura news) ಜಿಲ್ಲೆಯ ಚಿಂತಾಮಣಿ ನಗರದ ವೆಂಕಟಗಿರಿಕೋಟೆಯಲ್ಲಿರುವ ಪತಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರು ತಿಂಗಳ ಹಿಂದೆ ಆಜಾಮ್‌ ಎಂಬಾತನನ್ನು ಪ್ರೀತಿಸಿದ್ದ ಈಕೆ ನಂತರ ವಿವಾಹ ಮಾಡಿಕೊಂಡಿದ್ದರು. ಪತಿ ಆಜಾಮ್ ವಿರುದ್ಧ ಪತ್ನಿಯ ಪೋಷಕರು ಕೊಲೆ ಆರೋಪ (murder complaint) ಹೊರಿಸಿದ್ದಾರೆ. ಚಿಂತಾಮಣಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹೆಜ್ಜೇನು ದಾಳಿಯಿಂದ ಕಾರ್ಮಿಕ ಸಾವು

ರಾಮನಗರ: ಟಿಂಬರ್ ಕೆಲಸ ಮಾಡುತ್ತಿದ್ದಾಗ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಕಾರ್ಮಿಕರೊಬ್ಬರು ಸಾವಿಗೀಡಾಗಿದ್ದಾರೆ. ರಾಮನಗರದ (ramanagara news) ಮಾಗಡಿ ತಾಲೂಕಿನ ಬೆಳಗವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ.

ಬಜ್ಜಯ್ಯ (53) ಸ್ಥಳದಲ್ಲೇ ಸಾವಿಗೀಡಾದ ವ್ಯಕ್ತಿ. ಮರ ಕಡಿಯುವಾಗ ಹೆಜ್ಜೇನು ಗೂಡು ಬಜ್ಜಯ್ಯ ಮೇಲೆ ಬಿದ್ದಿದೆ. ಹೆಜ್ಜೇನು ಹುಳುಗಳು ಗುಂಪಾಗಿ ದಾಳಿ ನಡೆಸಿವೆ. ಹೆಜ್ಜೇನು ದಾಳಿಯಿಂದ ಇನ್ನಿತರ ಕೆಲವು ಕಾರ್ಮಿಕರಿಗೂ ಗಾಯಗಳಾಗಿದ್ದು, ಸ್ಥಳದಿಂದ ಓಡಿಹೋಗಿದ್ದಾರೆ. ಬಜ್ಜಯ್ಯನವರಿಗೆ ನೂರಾರು ಹುಳಗಳು ಕಡಿದ ಪರಿಣಾಮ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ. ಮಾಗಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಆಟೋ ಚಾಲಕನ ಬರ್ಬರ ಹತ್ಯೆ

ಬೆಂಗಳೂರು: ರಾಜಧಾನಿಯಲ್ಲಿ ಯುವಕನೊಬ್ಬನನ್ನು ಹತ್ತಕ್ಕೂ ಅಧಿಕ ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಅರುಣ್ (24) ಕೊಲೆಯಾದ ಆಟೋ ಚಾಲಕ. ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯ ಟಿಂಬರ್ ಲೇಔಟ್‌ನಲ್ಲಿ ಘಟನೆ ನಡೆದಿದೆ.

ಅರುಣ್‌ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಅರುಣ್‌ನ ಮದುವೆ ಸಹ ಮುಂದಿನ ತಿಂಗಳು ಫಿಕ್ಸ್ ಆಗಿತ್ತು. 10ಕ್ಕೂ ಅಧಿಕ ಮಂದಿ ದುಷ್ಕರ್ಮಿಗಳಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿರುವ ರೀತಿ ನೋಡಿದರೆ ಹಳೆಯ ದ್ವೇಷ ತೀರಿಸಿಕೊಳ್ಳಲು ನಡೆದ ಕೃತ್ಯದಂತೆ ಕಾಣಿಸುತ್ತಿದೆ. ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Sukhdev Singh: ಆತ್ಮೀಯವಾಗಿ ಮಾತನಾಡುತ್ತಲೇ ಸುಖ್​ದೇವ್ ಮೇಲೆ ಹಾರಿಸಿದ್ರು 5 ಗುಂಡು; ಇಲ್ಲಿದೆ ವಿಡಿಯೊ!

Continue Reading

ಕ್ರೈಂ

Murder Case: ಮುಂದಿನ ತಿಂಗಳು ಮದುವೆಯಾಗಲಿ‌ದ್ದ ಆಟೋ ಚಾಲಕನ ಬರ್ಬರ ಹತ್ಯೆ

ಅರುಣ್‌ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. 10ಕ್ಕೂ ಅಧಿಕ ಮಂದಿ ದುಷ್ಕರ್ಮಿಗಳಿಂದ ಕೃತ್ಯ (Murder Case) ನಡೆದಿರುವ ಶಂಕೆ ವ್ಯಕ್ತವಾಗಿದೆ.

VISTARANEWS.COM


on

arun murderd
Koo

ಬೆಂಗಳೂರು: ರಾಜಧಾನಿಯಲ್ಲಿ ಯುವಕನೊಬ್ಬನನ್ನು ಹತ್ತಕ್ಕೂ ಅಧಿಕ ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆ (Murder Case) ಮಾಡಿದ್ದಾರೆ. ಅರುಣ್ (24) ಕೊಲೆಯಾದ ಆಟೋ ಚಾಲಕ. ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯ ಟಿಂಬರ್ ಲೇಔಟ್‌ನಲ್ಲಿ ಘಟನೆ ನಡೆದಿದೆ.

ಅರುಣ್‌ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಅರುಣ್‌ನ ಮದುವೆ ಸಹ ಮುಂದಿನ ತಿಂಗಳು ಫಿಕ್ಸ್ ಆಗಿತ್ತು. 10ಕ್ಕೂ ಅಧಿಕ ಮಂದಿ ದುಷ್ಕರ್ಮಿಗಳಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿರುವ ರೀತಿ ನೋಡಿದರೆ ಹಳೆಯ ದ್ವೇಷ ತೀರಿಸಿಕೊಳ್ಳಲು ನಡೆದ ಕೃತ್ಯದಂತೆ ಕಾಣಿಸುತ್ತಿದೆ. ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಮಚ್ಚಿನಿಂದ ಕೊಚ್ಚಿ ಮಗನನ್ನೇ ಕೊಂದ ತಂದೆ

ಆನೇಕಲ್: ಮಚ್ಚಿನಿಂದ ಕೊಚ್ಚಿ ಮಗನನ್ನು ತಂದೆಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್‌ ಸಮೀಪದ ನಾರಾಯಣಪುರದಲ್ಲಿ ನಡೆದಿದೆ. ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿದಾಗ ಮಗನನ್ನು ತಂದೆಯೇ ಹತ್ಯೆ (Murder Case) ಮಾಡಿದ್ದಾರೆ.

ಸುರೇಶ್ (35) ಕೊಲೆಯಾದ ವ್ಯಕ್ತಿ. ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಸುರೇಶ್, ನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಅದೇ ರೀತಿ ಮಂಗಳವಾರವೂ ಕುಡಿದು ಬಂದು ಗಲಾಟೆ ಮಾಡಿದ್ದ. ತಾಯಿಯನ್ನ ಹಿಡಿದು ಹೊಡೆಯುತ್ತಿದ್ದ ಹಿನ್ನೆಲೆಯಲ್ಲಿ ಗಲಾಟೆ ಬಿಡಿಸಲು ತಂದೆ ಮುಂದಾಗಿದ್ದಾರೆ. ಆದರೆ, ಗಲಾಟೆ ವಿಕೋಪಕ್ಕೆ ತಿರುಗಿದಾಗ ತಂದೆ ಮಚ್ಚಿನಿಂದ ಸುರೇಶ್‌ಗೆ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಗನನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ, ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ಆನೇಕಲ್ ಸರ್ಕಾರಿ ಆಸ್ಪತ್ರೆ ಶವಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದ್ದು, ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Sukhdev Singh Gogamedi: ರಜಪೂತ್ ಕರ್ಣಿ ಸೇನಾ ಮುಖಂಡ ಸುಖ್​ದೇವ್​​ ಗೋಗಮೇಡಿ ಗುಂಡಿಟ್ಟು ಹತ್ಯೆ

Continue Reading
Advertisement
kim
ವಿದೇಶ15 mins ago

Viral Video: ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟ ಉತ್ತರ ಕೊರಿಯಾ ಸರ್ವಾಧಿಕಾರಿ!

narendra modi amit shah jp nadda
ದೇಶ28 mins ago

Assembly Election 2023: 3 ರಾಜ್ಯಗಳಲ್ಲೂ ಮುಖ್ಯಮಂತ್ರಿಯಾಗಿ ಬಿಜೆಪಿಯಿಂದ ಹೊಸ ಮುಖ

Vinay Gowda and sangeetha Bigg boss
ಬಿಗ್ ಬಾಸ್29 mins ago

BBK SEASON 10: ಪಾತ್ರದಿಂದ ಹೊರಗೆ ಬಂದ್ರೆ ಸಂಗೀತಾ ಟೀಮ್‌ಗೆ ʻಹುಚ್ಚೇಟುʼ ಕೊಡ್ತೀನಿ ಎಂದ ವಿನಯ್‌!

murder case in Bengaluru
ಕರ್ನಾಟಕ44 mins ago

Murder Case : ಸ್ನೇಹಿತನ ಹಣ ಕೊಡಿಸಿ ಕಿರಿಕ್ ಮಾಡಿಕೊಂಡು ಹೆಣವಾದ ಯುವಕ!

Government Job Vistara Exclusive
ಉದ್ಯೋಗ1 hour ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

danish
ಕ್ರಿಕೆಟ್1 hour ago

Danish Kaneria: ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ; ಕಾರಣವೇನು?

Snehith Gowda Became Villain In Bigg Boss Kannada in rakshasa task
ಬಿಗ್ ಬಾಸ್1 hour ago

BBK SEASON 10: ನ್ಯಾಯವಾಗಿ ಆಡೋಕ್‌ ಬಂದಿಲ್ಲ ಅಂದ್ರೆ ಹೋಗ್ತಿರ್ಬೇಕು; ಸ್ನೇಹಿತ್‌ ವಿರುದ್ಧ ರಕ್ಕಸರು ಉರಿ ಉರಿ!

pranab mukherjee and rahul gandhi
ದೇಶ1 hour ago

ʼರಾಹುಲ್‌ ಗಾಂಧಿಗೆ ರಾಜಕೀಯದಲ್ಲಿ ಪ್ರಬುದ್ಧತೆ ಇಲ್ಲʼ ಎಂದಿದ್ದರು ಪ್ರಣಬ್‌ ಮುಖರ್ಜಿ!

Murder case in kopal
ಕರ್ನಾಟಕ1 hour ago

Murder Case : ನಿದ್ರೆಗೆ ಜಾರಿದಾಗ ವ್ಯಕ್ತಿಯ ಕತ್ತು ಕೊಯ್ದ ಹಂತಕರು!

gold bride
ಕರ್ನಾಟಕ2 hours ago

Gold Rate Today: ಬಂಗಾರದ ಬೆಲೆಯಲ್ಲಿ ತುಸು ಇಳಿಕೆ, ಬೆಳ್ಳಿ ದರವೂ ಕುಸಿತ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Government Job Vistara Exclusive
ಉದ್ಯೋಗ1 hour ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

read your daily horoscope predictions for december 6 2023
ಪ್ರಮುಖ ಸುದ್ದಿ8 hours ago

Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ!

CM Siddaramaiah and Black magic
ಕರ್ನಾಟಕ16 hours ago

Belagavi Winter Session: ಸಿದ್ದರಾಮಯ್ಯಗೆ ಮಾಟ – ಮಂತ್ರ; ಗಾಳಿ ಬಿಡಿಸಲು ರೇವಣ್ಣಗೆ ಅಶೋಕ್‌ ಮನವಿ!

R Ashok in assembly session
ಕರ್ನಾಟಕ17 hours ago

Belagavi Winter Session: ಟಿಸಿ ಬದಲಾಯಿಸಲು ಹಣ ಕೇಳ್ತಾರೆ, ರೈತರು ಬದುಕೋದು ಬೇಡವಾ? ಅಶೋಕ್‌ ಕ್ಲಾಸ್‌

R Ashok
ಕರ್ನಾಟಕ17 hours ago

Belagavi Winter Session: ಬರ ಪ್ರದೇಶಕ್ಕೆ ಹೋಗದ ಸಿಎಂ, ಸಚಿವರು; ಸರ್ಕಾರಕ್ಕೆ ಆರ್.‌ ಅಶೋಕ್‌ ಚಾಟಿ

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ2 days ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ3 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ3 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ4 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

ಟ್ರೆಂಡಿಂಗ್‌