Site icon Vistara News

UK Nurse: ರಕ್ಷಿಸಬೇಕಾದ ಕೈಗಳೇ 7 ಶಿಶುಗಳನ್ನು ಕೊಂದವು; ಈಕೆ ನರ್ಸ್‌ ಅಲ್ಲ ಹಂತಕಿ, ಹಿಡಿದಿದ್ದು ಭಾರತ ಮೂಲದ ವೈದ್ಯ

UK Nurse Lucy Letby

UK Nurse Lucy Letby guilty of murdering seven babies in Hospital

ಲಂಡನ್‌: ಬ್ರಿಟನ್‌ನಲ್ಲಿ ಕಂಡು ಕೇಳರಿಯದ ಘಟನೆಯೊಂದು ನಡೆದಿದೆ. ಆಸ್ಪತ್ರೆಯೊಂದರಲ್ಲಿ ನರ್ಸ್‌ (UK Nurse) ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಏಳು ಶಿಶುಗಳನ್ನು ಕೊಂದಿದ್ದು, ಆಕೆಯ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಹಾಗಾಗಿ, ಲೂಸಿ ಲೆಟ್‌ಬೈ (33) (Lucy Letby) ಎಂಬ ನರ್ಸ್‌ ಈಗ ಬ್ರಿಟನ್‌ ಮಾತ್ರವಲ್ಲ, ತನ್ನ ಕ್ರೂರ ಕೃತ್ಯದಿಂದ ಜಗತ್ತಿನಾದ್ಯಂತ ಸುದ್ದಿಯಾಗಿದ್ದಾಳೆ.

ಬ್ರಿಟನ್‌ನ ಕೌಂಟೆಸ್‌ ಆಫ್‌ ಚೆಸ್ಟರ್‌ ಆಸ್ಪತ್ರೆಯಲ್ಲಿ (Countess of Chester Hospital) ಲೂಸಿ ಲೆಟ್‌ಬೈ ನರ್ಸ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು, ಈಕೆ 2015ರ ಜೂನ್‌ನಿಂದ 2016ರ ಅವಧಿಯಲ್ಲಿ ಈಕೆ ಏಳು ಶಿಶುಗಳನ್ನು ದಾರುಣವಾಗಿ ಕೊಂದು ಹಾಕಿದ್ದಾಳೆ. ಏಳು ಮಕ್ಕಳಲ್ಲಿ ಐವರು ಗಂಡು ಶಿಶುಗಳಾದರೆ, ಇಬ್ಬರು ಹೆಣ್ಣುಮಕ್ಕಳು ಎಂದು ತಿಳಿದುಬಂದಿದೆ. ಎರಡು ಶಿಶುಗಳ ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲಿ ಈಕೆಯನ್ನು ನಿರ್ದೋಷಿ ಎಂದು ಘೋಷಿಸಲಾಗಿದೆ.

ನಾನು ಕೆಟ್ಟವಳು ಎಂದ ಲೂಸಿ

ಕೊಲೆ ನಿರ್ದೋಷಿ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದ ಬೆನ್ನಲ್ಲೇ ಆಕೆ ನೀಡಿರುವ ಹೇಳಿಕೆಗಳು, ಆಸ್ಪತ್ರೆಯ ಸಿಬ್ಬಂದಿಯ ಮೆಸೇಜ್‌ಗಳು, ಪತ್ರವು ಹಲವು ಮಾಹಿತಿಯನ್ನು ಬಹಿರಂಗಪಡಿಸಿದೆ. “ನಾನು ಆ ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳಲು ಆಗಲಿಲ್ಲ. ಹಾಗಾಗಿ ನಾನು ಆ ಮಕ್ಕಳನ್ನು ಕೊಂದು ಹಾಕಿದೆ. ನಾನು ಕೆಟ್ಟವಳು, ಹಾಗಾಗಿ ಇಂತಹ ಕೃತ್ಯ ಎಸಗಿದೆ” ಎಂದು ಆಕೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮಕ್ಕಳಿಗೆ ನೀಡುವ ಹಾಲಿನಲ್ಲಿ ವಿಷ ಬೆರೆಸಿ, ಇನ್ಸುಲಿನ್‌ನಲ್ಲಿ ವಿಷ ಮಿಕ್ಸ್‌ ಮಾಡಿ ಹತ್ಯೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Murder Case: ಖಾಸಗಿ ವಿಡಿಯೊ ವಿಚಾರಕ್ಕೆ ಸ್ನೇಹಿತನ ಕೊಲೆಗೈದು ರುಂಡದೊಂದಿಗೆ ಗ್ರಾಮಕ್ಕೆ ಬಂದ!

ಕೃತ್ಯ ಬಯಲಾಗಲು ಭಾರತ ಮೂಲದ ವೈದ್ಯ ಕಾರಣ

ಆಸ್ಪತ್ರೆಯಲ್ಲಿ ಶಿಶುಗಳ ಸಾವಿನ ಕುರಿತು ಭಾರತ ಮೂಲದ ರವಿ ಜಯರಾಮ್‌ ಅವರು ಅಲರ್ಟ್‌ ಮಾಡಿದ್ದು ಹಾಗೂ ಅವರು ತನಿಖೆಗೆ ಸಹಾಯ ಮಾಡಿದ ಕಾರಣ ಪ್ರಕರಣ ಭೇದಿಸಲು ಸಾಧ್ಯವಾಗಿದೆ ಎಂದು ತಿಳಿದುಬಂದಿದೆ. ಆಸ್ಪತ್ರೆಯಲ್ಲಿ ಮೂರು ಮಕ್ಕಳು ಮೃತಪಟ್ಟ ಕೂಡಲೇ ಕೊಲೆಯ ಕುರಿತು ರವಿ ಜಯರಾಮ್‌ ಅವರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಆಗಲೇ ಪ್ರಕರಣವನ್ನು ದೊಡ್ಡದು ಮಾಡಿದ್ದರೆ ನಾಲ್ಕು ಮಕ್ಕಳ ಜೀವ ಉಳಿಯುತ್ತಿತ್ತು ಎಂಬ ಮಾತುಗಳು ಕೇಳಿಬಂದಿವೆ. ಈ ಕುರಿತು ಅವರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

Exit mobile version