ಪುಣೆ: ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ದಂಪತಿ ಹಾರಿ ರಸ್ತೆಯ ಮೇಲೆ ಬಿದ್ದ ಘಟನೆ ಪುಣೆಯ ಅಹ್ಮದ್ ನಗರ-ಕಲ್ಯಾಣ್ ಹೆದ್ದಾರಿಯಲ್ಲಿ ನಡೆದಿದೆ. ಅದೃಷ್ಟವಶಾತ್, ದಂಪತಿಗೆ ಅಪಘಾತದಲ್ಲಿ ಗಾಯವಾದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿವೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬರುವಂತೆ, ವೇಗವಾಗಿ ಬಂದ ಕಾರು ದಂಪತಿ ಹೋಗುತ್ತಿದ್ದ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ನಂತರ ಅವರು ಮೇಲೆ ಹಾರಿ ಹೋಗಿ ನೆಲಕ್ಕೆ ಅಪ್ಪಳಿಸಿ ಬಿದ್ದಿದ್ದಾರೆ. ಪುಣೆ ಜಿಲ್ಲೆಯ ಜುನ್ನಾರ್ ತಾಲ್ಲೂಕಿನ ಪಿಂಪ್ರಿ ಪೆಂಧರ್ ಗ್ರಾಮದ ಬಳಿ ಗುರುವಾರ ಈ ಘಟನೆ ನಡೆದಿದೆ. ದಂಪತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಅಲ್ಲದೆ, ಕಾರಿನ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
PUNE | मिळालेल्या माहितीनुसार, नगर-कल्याण महामार्गावर पिंपरी पेंढार येथे अपघाताची ही घटना घडली आहे. भरधाव कारने दुचाकीला जोरदार धडक दिली. रस्ता ओलांडत असताना पाठीमागून आलेल्या भरधाव कारने दुचाकीला धडक दिली. कारच्या धडकेनंतर दुचाकीवरील दोघेही फुलबॉलप्रमाणे हवेत १० फुटांपर्यंत उंच… pic.twitter.com/1mcshxHJaA
— ℝ𝕒𝕛 𝕄𝕒𝕛𝕚 (@Rajmajiofficial) July 20, 2024
ಕಳೆದ ಕೆಲವು ತಿಂಗಳುಗಳಿಂದ ಪುಣೆ ಹೈ ಪ್ರೊಫೈಲ್ ಹಿಟ್ ಅಂಡ್ ರನ್ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಉದ್ಯಮಿಯ ಅಪ್ರಾಪ್ತ ವಯಸ್ಸಿನ ಮಗನೊಬ್ಬನ ಕಾರು ಅಪಘಾತವು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿತ್ತು. ಅಪ್ರಾಪ್ತ ವಯಸ್ಕನೊಬ್ಬ ಚಲಾಯಿಸುತ್ತಿದ್ದ ಐಷಾರಾಮಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಪುಣೆಯಲ್ಲಿ ನಡೆದಿದೆ. 17 ವರ್ಷದ ಕಾರು ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಲ್ಯಾಣಿ ನಗರದಲ್ಲಿ ಮೇ 18ರಂದು ಮುಂಜಾನೆ 3.15 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ, ಇಲ್ಲಿನ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮುಗಿಸಿದ ಸ್ನೇಹಿತರ ಗುಂಪು ತಮ್ಮ ಮೋಟಾರು ಬೈಕುಗಳಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಲ್ಯಾಣಿ ನಗರ ಜಂಕ್ಷನ್ ಬಳಿ, ವೇಗವಾಗಿ ಬಂದ ಐಷಾರಾಮಿ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಅದರ ಇಬ್ಬರು ಸವಾರರು ವಾಹನದಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಕಾರಿನಲ್ಲಿ ಬಂದ ಡಕಾಯಿತರು; ಬ್ಯಾಗ್ ಕಸಿಯಲು ವಿದ್ಯಾರ್ಥಿನಿಯನ್ನು 20 ಅಡಿ ದೂರ ಎಳೆದೊಯ್ದರು! ಆಘಾತಕಾರಿ ವಿಡಿಯೊ
ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ, ಇದರಲ್ಲಿ ಅಪಘಾತಕ್ಕೀಡಾದ ಕಾರಿನಿಂದ ಹೊರಬರಲು ಪ್ರಯತ್ನಿಸಿದ ಚಾಲಕನನ್ನು ಜನರ ಗುಂಪು ಥಳಿಸುತ್ತಿರುವುದು ಕಂಡುಬಂದಿದೆ. ಕಾರು ಚಾಲಕನ ವಿರುದ್ಧ ಯೆರವಾಡಾ ಪೊಲೀಸ್ ಠಾಣೆಯಲ್ಲಿ ವಿವಿಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ,