ಪಾಣಿಪತ್: ಸರಗಳ್ಳರು (Chain Snatcher ) ನಿರ್ಭೀತರಾಗಿರುವುದರಿಂದ ಅಂಗಡಿಗಳಿಗೆ ನುಗ್ಗಿ ಜನರ ಚಿನ್ನಾಭರಣ ದೋಚುತ್ತಿದ್ದಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಪಿಜ್ಜಾ ತಿನ್ನುತ್ತಾ ಮೂವರು ಮಹಿಳೆಯರು ಕುಳಿತು ಮಾತನಾಡುತ್ತಿರುವಾಗಲೇ ವ್ಯಕ್ತಿಯೊಬ್ಬ ಮಹಿಳೆಯ ಚಿನ್ನದ ಸರವನ್ನು ಕಸಿದುಕೊಂಡು ಓಡಿ ಹೋದ ಘಟನೆ ಹರಿಯಾಣದ (Haryana) ಪಾಣಿಪತ್ ನಲ್ಲಿ (Panipat) ನಡೆದಿದೆ. ಇದರ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.
ಸಾಕಷ್ಟು ಹೊತ್ತು ತನ್ನ ಸ್ನೇಹಿತರೊಂದಿಗೆ ಪಿಜ್ಜಾ ಸೇವಿಸುತ್ತಿದ್ದ ಮಹಿಳೆಯ ಮೇಲೆ ನಿಗಾ ವಹಿಸುತ್ತಿದ್ದ ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬ ಚೈನ್ ಕಸಿದುಕೊಂಡು ಓಡಿ ಹೋಗಿದ್ದಾನೆ. ಇದರ ಸಂಪೂರ್ಣ ದೃಶ್ಯ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ. ಇದು ಈಗ ಸಾಮಾಜಿಕ ಜಾಲತಾಣದ ಎಕ್ಸ್ ನಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ವ್ಯಕ್ತಿಯೊಬ್ಬ ಆರ್ಡರ್ ಸಂಗ್ರಹಿಸುವ ನೆಪದಲ್ಲಿ ಪಾಣಿಪತ್ ನಗರದ ತಹಸೀಲ್ ಕ್ಯಾಂಪ್ ರಸ್ತೆಯಲ್ಲಿರುವ ಪಿಜ್ಜಾ ಗ್ಯಾಲರಿಗೆ ಬಂದಿದ್ದಾನೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಚೈನ್ ಸ್ನ್ಯಾಚರ್ ಬಹಳಷ್ಟು ಹೊತ್ತು ಅಲ್ಲೇ ಕುಳಿತು ಪಿಜ್ಜಾ ತಿನ್ನುತ್ತಿದ್ದ ಮಹಿಳೆಯರ ಮೇಲೆ ಗಮನವಿಟ್ಟಿದ್ದ. ಆತ ಮಹಿಳೆಯ ಸರ ಕಿತ್ತುಕೊಂಡು ಪರಾರಿಯಾದಾಗ ಪಿಜ್ಜಾ ಗ್ಯಾಲರಿ ಸ್ಟಾಫ್ ಯಾರೂ ಅಲ್ಲಿ ಇರಲಿಲ್ಲ.
हरियाणा के पानीपत में एक रेस्टोरेंट के भीतर चेन स्नैचर का दुस्साहस देखिए। pic.twitter.com/WLuLYzycJe
— SANJAY TRIPATHI (@sanjayjourno) June 8, 2024
ಮಹಿಳೆಯ ಚಿನ್ನದ ಸರವನ್ನು ಕಿತ್ತುಕೊಂಡು ಪಿಜ್ಜಾ ಅಂಗಡಿಯಿಂದ ಹೊರಗೋಡಿದ ಆತನನ್ನು ಇನ್ನೊಬ್ಬ ಮಹಿಳೆ ಹಿಂಬಾಲಿಸಲು ಯತ್ನಿಸಿದ್ದಾನೆ. ಆದರೆ ದರೋಡೆಕೋರರು ತಪ್ಪಿಸಿಕೊಂಡ. ಪಿಜ್ಜಾ ಅಂಗಡಿಯ ಸಿಬ್ಬಂದಿಯೊಬ್ಬರು ಆತನನ್ನು ಹಿಂಬಾಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಇದನ್ನೂ ಓದಿ: Viral Video: ಹೋಟೆಲ್ ಕಾರಿಡಾರ್ನಲ್ಲಿ ಗಾಲ್ಫ್ ಆಡಿದ ಪಂತ್-ಸೂರ್ಯಕುಮಾರ್
ಈ ಘಟನೆಯು ಜೂನ್ 8ರಂದು ಶನಿವಾರ ಮಧ್ಯಾಹ್ನ 3.40 ರ ಸುಮಾರಿಗೆ ಸಂಭವಿಸಿದೆ ಎಂದು ವೈರಲ್ ವಿಡಿಯೋದ ಸಮಯ ತೋರಿಸುತ್ತದೆ. ಮಹಿಳೆಯ ಸರ ಸುಮಾರು 20 ಗ್ರಾಂನದ್ದು ಎಂದು ಹೇಳಲಾಗಿದೆ. ಈ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರೆಸ್ಟೋರೆಂಟ್ ಮಾಲೀಕನಿಗೆ ಟಿಎಂಸಿ ಶಾಸಕನಿಂದ ಕಪಾಳಮೋಕ್ಷ
ಕೋಲ್ಕತ್ತಾದ ರೆಸ್ಟೋರೆಂಟ್ ಮಾಲೀಕರಿಗೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಶಾಸಕ ಕಪಾಳಮೋಕ್ಷ ಮಾಡುವ ಮೂಲಕ ದಾಂಧಲೆ ಎಬ್ಬಿಸಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೋಲ್ಕತ್ತಾದಲ್ಲಿ ಈ ಘಟನೆ ನಡೆದಿದ್ದು, ನಟ, ಟಿಎಂಸಿ ಶಾಸಕ ಸೋಹಮ್ ಚಕ್ರವರ್ತಿ ರೆಸ್ಟೋರೆಂಟ್ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದಾರೆ.
ಕೋಲ್ಕತ್ತಾ ಡಿಲೈಟ್ ಎಂಬ ರೆಸ್ಟೋರೆಂಟ್ ಮಾಲೀಕ ಅನಿಸುರ್ ಆಲಂ ಮತ್ತು ಶಾಸಕ ಸೋಹಮ್ ನಡುವೆ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ನಡೆದಿತ್ತು. ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿತ್ತು. ಈ ವೇಳೆ ಆಲಂ ಟಿಎಂಸಿ ಪಕ್ಷ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂಬ ಕಾರಣಕ್ಕೆ ಸೋಹಮ್ ಆತನಿಗೆ ಕಪಾಳ ಮೋಕ್ಷ ಮಾಡಿ ಥಳಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸೋಹಮ್, ರೆಸ್ಟೋರೆಂಟ್ ಮಾಲೀಕನ ಮೇಲೆ ಹಲ್ಲೆ ನಡೆಸಿರುವುದು ನಿಜ. ಕೆಳಗೆ ಮಾರಾಮಾರಿ ಸದ್ದು ಕೇಳಿ ಧಾವಿಸಿ ಬಂದೆ. ಮಾಲೀಕರು ನನ್ನ ಸಿಬ್ಬಂದಿಯನ್ನು ನಿಂದಿಸುತ್ತಿರುವುದನ್ನು ನಾನು ನೋಡಿದೆ. ಅವರು ನನ್ನನ್ನು ಮತ್ತು ಅಭಿಷೇಕ್ ಬ್ಯಾನರ್ಜಿಯನ್ನು ನಿಂದಿಸಿದ್ದಾರೆ. ನಾನು ನನ್ನ ತಾಳ್ಮೆ ಕಳೆದುಕೊಂಡೆ ಮತ್ತು ಅವನಿಗೆ ಕಪಾಳಮೋಕ್ಷ ಮಾಡಿದ್ದೇನೆ ಎಂದು ಹೇಳಿದರು.
ಇನ್ನು ಸೋಹಮ್ ಒಬ್ಬ ಸೋಶಿಯಲ್ ಮೀಡಿಯಾ ಇನ್‌ಫ್ಲೂವೆನ್ಶಿಯಲ್. ಅವರು ಶೂಟಿಂಗ್‌ಗಾಗಿ ಹೊಟೇಲ್‌ಗೆ ಬಂದಿದ್ದಾಗ ಈ ಘಟನೆ ನಡೆದಿದೆ. ಸೋಹಮ್ ಸೆಕ್ಯುರಿಟಿಯವರು ಕೂಡ ನಮ್ಮನ್ನು ಥಳಿಸಿದ್ದಾರೆ. ನಾವು ಇನ್ನೂ ಪೊಲೀಸರಿಗೆ ದೂರು ನೀಡಿಲ್ಲ ಎಂದು ಹೊಟೇಲ್ ಮ್ಯಾನೇಜರ್ ಹೇಳಿದ್ದಾರೆ.