ಬೆಂಗಳೂರು: ಬೆಂಗಳೂರಿನಲ್ಲಿ ಒಂದು ಭಯಾನಕ ಆ್ಯಕ್ಸಿಡೆಂಟ್ (Road Accident) ನಡೆದಿದೆ. ಇದಕ್ಕೆ ಕಾರಣವಾದದ್ದು ಬಸ್ಸೂ ಅಲ್ಲ, ಲಾರಿಯೂ ಅಲ್ಲ. ಅಪಘಾತದಲ್ಲಿ ಯಾರೂ ಸತ್ತಿಲ್ಲವಾದರೂ, ಪವಾಡಸದೃಶವಾಗಿ ಬೈಕ್ ಸವಾರನೊಬ್ಬ (bike rider) ಬದುಕುಳಿದಿದ್ದಾನೆ. ಅಪಘಾತಕ್ಕೆ ಕಾರಣವಾದದ್ದು ಒಂದು ಕೋಲೆಬಸವ! ಅಪಘಾತದ ವಿಡಿಯೋ (Viral video) ಲಭ್ಯವಾಗಿದೆ.
ರಸ್ತೆಯ ಬದಿಯಲ್ಲಿ ಮಾಲಕಿಯ ಜೊತೆಗೆ ನಡೆದುಕೊಂಡು ಹೋಗುತ್ತಿದ್ದ ಕೋಲೆಬಸವ, ಇದ್ದಕ್ಕಿದ್ದಂತೆ, ಯಾವುದೇ ಪ್ರಚೋದನೆಯಿಲ್ಲದೆ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನಿಗೆ ಎಗರಿ ಗುದ್ದಿದೆ. ಬೈಕ್ ಪಲ್ಟಿ ಹೊಡೆದಿದ್ದು, ಸವಾರ ರಸ್ತೆಗೆ ಬಿದ್ದಿದ್ದಾರೆ. ಪಕ್ಕದಲ್ಲಿ ಕ್ಯಾಂಟರ್ ಹಾದುಹೋಗುತ್ತಿದ್ದು, ಇನ್ನೇನು ಸವಾರನ ಮೇಲೆ ಹರಿದುಹೋಗಲಿದೆ ಎಂಬ ಕ್ಷಣದಲ್ಲಿ ಕ್ಯಾಂಟರ್ ಚಾಲಕ ಥಟ್ಟನೆ ಬ್ರೇಕ್ ಹಾಕಿದ್ದಾನೆ. ಬೈಕ್ ಸವಾರ ಪವಾಡಸದೃಶವಾಗಿ ಬದುಕುಳಿದಿದ್ದಾನೆ.
ಮಹಾಲಕ್ಷ್ಮಿ ಲೇಔಟ್ ಸ್ವಿಮ್ಮಿಂಗ್ ಪೂಲ್ ಜಂಕ್ಷನ್ ಬಳಿ ಘಟನೆ ನಡೆದಿದೆ. ಕಳೆದ ವಾರ ನಡೆದಿರುವ ಈ ಘಟನೆಯ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ವಿಡಿಯೋ ನೋಡಿದ ಅನೇಕ ಮಂದಿ, “ಇದು ಪವಾಡವೇ ಸರಿ” ಎಂದು ಕಮೆಂಟ್ ಮಾಡಿದ್ದಾರೆ.
ನಿಲ್ಲದ ರೋಡ್ ರೇಜ್; ಬೆಂಗಳೂರಿನ ಬೀದಿಗಳಲ್ಲಿ ಪುಡಿ ಪುಂಡರ ಅಟ್ಟಹಾಸ!
ಬೆಂಗಳೂರು: ರಾಜಧಾನಿಯ ಬೀದಿಗಳಲ್ಲಿ (Bangalore crime) ಬೆಚ್ಚಿ ಬೀಳಿಸುವಂಥ ರೋಡ್ ರೇಜ್ (Road Rage) ಪ್ರಕರಣಗಳು ಹೆಚ್ಚುತ್ತಿವೆ. ಒಂಟಿಯಾಗಿ ಅಥವಾ ರಾತ್ರಿ ಡ್ರೈವ್ ಮಾಡುವವರನ್ನು ಟಾರ್ಗೆಟ್ ಮಾಡಿ ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿ ಹಲ್ಲೆ (Assault) ಮಾಡುವುದು, ವಾಹನಕ್ಕೆ ಹಾನಿ ಮಾಡುವುದು ನಡೆಯುತ್ತಿದೆ. ಒಂದೇ ವಾರದಲ್ಲಿ ಮೂರನೇ ಅಂಥ ಪ್ರಕರಣ ವರದಿಯಾಗಿದೆ.
ಇಂದು ಬೆಳಗಿನ ಜಾವ ಮತ್ತೊಂದು ಪ್ರಕರಣ ಈ ಕುರಿತು ದಾಖಲಾಗಿದ್ದು, ಕ್ಯಾಬ್ ಅಡ್ಡಗಟ್ಟಿ ಅದರ ಚಾಲಕನಿಗೆ ಇಬ್ಬರು ದ್ವಿಚಕ್ರ ವಾಹನ ಸವಾರರು ಥಳಿಸಿದ್ದಾರೆ. ಈ ಇಬ್ಬರೂ ʼಎಡಬದಿಗೆ ಹೋಗುತ್ತಿದ್ದಾಗ ಜಾಗ ಯಾಕೆ ಬಿಡಲಿಲ್ಲ, ನಿನಗ್ಯಾರು ಲೈಸೆನ್ಸ್ ಕೊಟ್ಟಿದ್ದುʼ ಎಂದು ತಗಾದೆ ತೆಗೆದು ಚಾಲಕನಿಗೆ ಥಳಿಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಡಿಯೋ ವಾಹನದಲ್ಲಿ ಫಾಲೋ ಮಾಡಿಕೊಂಡು ಬಂದ ಈ ಪುಂಡರು ಪಾನಮತ್ತರಾಗಿದ್ದು, ಅವರ ಬಳಿ ಇದ್ದ ಬ್ಯಾಗಿನಲ್ಲೂ ಲಿಕ್ಕರ್ ಬಾಟಲಿಗಳಿದ್ದವು. ರಂಕಾ ಕಾಲೋನಿ ಬಳಿ ನಡೆದ ಈ ಘಟನೆಯ ಬಗ್ಗೆ ನವೀನ್ ಕುಮಾರ್ ಎಂಬವರಿಂದ ದೂರು ದಾಖಲಾಗಿದೆ. ಈ ಪ್ರಕರಣದ ವಿಡಿಯೋವನ್ನು ಎಕ್ಸ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ದಂಪತಿಗಳಿಗೆ ಬೈಕ್ ಸವಾರನ ಕಿರಿಕ್
ಸರ್ಜಾಪುರ ರಸ್ತೆಯಲ್ಲಿ ಮಾರ್ಚ್ 29ರ ರಾತ್ರಿ 10:40ರ ಸುಮಾರಿಗೆ ಈ ಘಟನೆ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗಳನ್ನು ಅಡ್ಡಗಟ್ಟಿ ಬೈಕ್ ಸವಾರನೊಬ್ಬ ಕಿರಿಕ್ ಮಾಡಿದ್ದಾನೆ. ಓವರ್‌ಟೇಕ್ (overtake) ಮಾಡುವ ವಿಚಾರಕ್ಕೆ ಗಲಾಟೆಯಾಗಿ ಕಿರಿಕ್ ಮಾಡಿದ್ದಾನೆ ಎನ್ನಲಾಗಿದೆ.
ಓವರ್‌ಟೇಕ್ ವಿಚಾರದಲ್ಲಿ ತಗಾದೆ ಸೃಷ್ಟಿಯಾಗಿದ್ದು, ಯುವಕ ಕಾರಿನ ಹಿಂಬದಿಯಿಂದ ಸುಮಾರು 2 ಕಿಲೋಮೀಟರ್‌ನಷ್ಟು ಅಟ್ಟಿಸಿಕೊಂಡು ಬಂದಿದ್ದಾನೆ. ಸಿಗ್ನಲ್‌ನಲ್ಲಿ ಕಾರು ನಿಲ್ಲಿಸಿದಾಗ ಅದಕ್ಕೆ ಅಡ್ಡ ಬಂದು ನಿಲ್ಲಿಸಿ ಧಮಕಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಕಾರಿನಲ್ಲಿ ದಂಪತಿ ಪ್ರಯಾಣಿಸುತ್ತಿದ್ದು, ಮಹಿಳೆ ಭಯದಿಂದ ಚೀರಿಕೊಂಡಿದ್ದಾರೆ. ನಂತರ ದಂಪತಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ದಂಪತಿ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Road Rage: ನಿಲ್ಲದ ರೋಡ್ ರೇಜ್; ಬೆಂಗಳೂರಿನ ಬೀದಿಗಳಲ್ಲಿ ಪುಂಡರ ಮತ್ತೊಂದು ಅಟ್ಟಹಾಸ!