Site icon Vistara News

Viral Video: ಕಬ್ಬನ್‌ ಪಾರ್ಕ್‌ನಲ್ಲಿ ಕಾಮುಕ! ಚಪಲ ಚೆನ್ನಿಗರಾಯ ವೃದ್ಧನಿಂದ ಸ್ತ್ರೀಯರ ಎದುರು ಹಸ್ತಮೈಥುನ

viral video cubbon park

ಬೆಂಗಳೂರು: ರಾಜಧಾನಿಯ ಹೃದಯ ಭಾಗದಲ್ಲಿರುವ ಕಬ್ಬನ್‌ ಪಾರ್ಕ್‌ (Cubbon Park) ಕೂಡ ಕಾಮುಕರಿಂದ, ಪೋಲಿಗಳಿಂದ ಹೊರತಾಗಿಲ್ಲ ಎಂಬುದು ರುಜುವಾತಾಗಿದೆ. ಬೆಂಗಳೂರಿನ ವಿಡಿಯೋ ಒಂದು ವೈರಲ್ (Viral video) ಆಗಿದೆ. ಅದರಲ್ಲಿ, ಕಬ್ಬನ್ ಪಾರ್ಕ್‌ನಲ್ಲಿ ಮಹಿಳೆಯರ ಬಳಿ ಸುಳಿದಾಡಿ ಹಸ್ತಮೈಥುನ (Misbehave) ಮಾಡಿಕೊಳ್ಳುತ್ತಿದ್ದ ವೃದ್ಧನೊಬ್ಬ ರೆಡ್‌ ಹ್ಯಾಂಡಾಗಿ (Bangalore Crime News) ಸಿಕ್ಕಿಬಿದ್ದಿದ್ದಾನೆ.

ವೈರಲ್‌ ಆಗಿರುವ ಈ ವಿಡಿಯೋದಲ್ಲಿ ವೃದ್ಧ ಮರದಡಿ ಕುಳಿತಿದ್ದು, ಯಾರೂ ತನ್ನನ್ನು ನೋಡುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ಹಸ್ತಮೈಥುನ ಮಾಡಿಕೊಳ್ಳುತ್ತಾನೆ. ನಂತರ ಆತನನ್ನು ಮಹಿಳೆಯೊಬ್ಬರು ಖಡಕ್ಕಾಗಿ ಪ್ರಶ್ನಿಸಿದ್ದು, ವೃದ್ಧ ಇದರಿಂದ ಗಾಬರಿಯಾಗಿ ಎದ್ದು ಅಲ್ಲಿಂದ ಓಡಿಹೋಗುತ್ತಿದ್ದಾನೆ. ಆರಂಭದಲ್ಲಿ ಆತನ ಮುಖವನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ಈತ ಕಬ್ಬನ್ ಪಾರ್ಕ್‌ನಲ್ಲಿ ಮಹಿಳೆಯರು ಕುಳಿತುಕೊಳ್ಳುವ ಜಾಗಕ್ಕೆ ಬಂದು ಹಸ್ತಮೈಥುನ ಮಾಡಿಕೊಳ್ಳುತ್ತಾನೆ ಎಂದು ಅನೇಕ ಮಹಿಳೆಯರು ಆರೋಪ ಮಾಡಿದ್ದಾರೆ ಎಂದು ವಿಡಿಯೋಗೆ ಶೀರ್ಷಿಕೆ ಹಾಕಲಾಗಿದೆ. ಏನು ಮಾಡ್ತಿದ್ದೀ ಎಂದು ಮಹಿಳೆ ಆತನನ್ನು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಆತ ಏನು ಎನ್ನುತ್ತಾನೆ. ಸೆಕ್ಯುರಿಟಿ ಕರೆಯಬೇಕಾ ಎಂದು ಮಹಿಳೆ ಕೇಳ್ತಿರೋದನ್ನು ನೀವು ವಿಡಿಯೋದಲ್ಲಿ ನೋಡಬಹುದು.

ವಿಡಿಯೋ ವೈರಲ್ ಆಗುತ್ತಿದ್ದಂತೆ ಅದಕ್ಕೆ ಬೆಂಗಳೂರು ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸರಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಯಾವಾಗ ನಡೆದಿದ್ದು ಎಂಬುದು ಸ್ಪಷ್ಟವಾಗಿಲ್ಲ.

ಸಿಟಿಯಲ್ಲಿ ಕದ್ದು ಕಾಡಿನಲ್ಲಿರುತ್ತಿದ್ದ ನಟೋರಿಯಸ್ ಕಳ್ಳ; 50ಕ್ಕೂ ಹೆಚ್ಚು ಕೇಸ್‌ಗಳ ಆರೋಪಿ ಅರೆಸ್ಟ್!

ಬೆಂಗಳೂರು: ನಗರದಲ್ಲಿ ಕಳ್ಳತನ ಮಾಡಿ, ಕಾಡನ್ನು ವಾಸಸ್ಥಾನ ಮಾಡಿಕೊಂಡಿದ್ದ ನಟೋರಿಯಸ್ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕದ್ದ ಆಭರಣಗಳೊಂದಿಗೆ ಕಾಡಿಗೆ ಎಸ್ಕೇಪ್ ಆಗುತ್ತಿದ್ದ ಆಸಾಮಿ, ಪೊಲೀಸರು ಬೆನ್ನತ್ತಿದಾಗ ಚಾಲೆಂಜ್ ಮಾಡಿ ಪರಾರಿಯಾಗುತ್ತಿದ್ದ. ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ (Notorious Thief) ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಗಿರಿನಗರ ಪೊಲೀಸರಿಂದ ನೆಲಮಂಗಲದ ಸೋಲೂರು ಮೂಲದ ಆರೋಪಿ ನರಸಿಂಹ ರೆಡ್ಡಿ ಬಂಧನವಾಗಿದೆ. ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆಸಾಮಿ, ಇತ್ತೀಚಿಗೆ ಗಿರಿನಗರ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿದ್ದ. ಕದ್ದ ಆಭರಣ ಸಮೇತ ಕಾಡಿಗೆ ಎಸ್ಕೇಪ್ ಆಗಿದ್ದ.

ನೆಲಮಂಗಲ ಬಳಿಯ ಗುಡೇಮಾರನಹಳ್ಳಿ ಹಾಗೂ ಕೃಷ್ಣಗಿರಿಯ ಫಾರೆಸ್ಟ್‌ನಲ್ಲಿರುತ್ತಿದ್ದ ಈತ, ಕಾಡಿನ ಬಂಡೆಗಳ ಮೇಲೆ ಮಲಗುತ್ತಿದ್ದ. ಪೊಲೀಸರು ಬೆನ್ನತ್ತಿದರೆ ಚಾಲೆಂಜ್ ಮಾಡಿ ಪರಾರಿಯಾಗುತ್ತಿದ್ದ. ಪೊಲೀಸರು ನನ್ನ ಹಿಂದೆ ಬರಬೇಕು, ಬೆನ್ನತ್ತಬೇಕು ಅಂತ ಚಾಲೆಂಜ್ ಮಾಡಿ ಹೋಗುತ್ತಿದ್ದ. ಹೀಗೆ ಗುಡೇಮಾರನಹಳ್ಳಿ ಕಾಡಿನಲ್ಲಿದ್ದ ವೇಳೆ ಆರೋಪಿಯನ್ನು ಬಂಧಿಸಲಾಗಿದೆ. ಆತನಿಂದ 70 ಲಕ್ಷ ಮೌಲ್ಯದ ಒಂದು ಕೆ.ಜಿ. ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ | False Case: ಪಿಎಸ್ಐ ಮನೆಯಲ್ಲಿ 12 ಲಕ್ಷ ಕಳವು ಕೇಸ್; ತನಿಖೆ ವೇಳೆ ಬಯಲಾಯ್ತು ನಕಲಿ ದೂರಿನ‌ ಅಸಲಿ ಕತೆ!

Exit mobile version