Site icon Vistara News

Weird Thief: ಇವನೆಂಥಾ ಕಳ್ಳ! ಕಳ್ಳತನಕ್ಕಿಳಿದ ಲೋಕಸಭೆ ಚುನಾವಣೆ ಪಕ್ಷೇತರ ಅಭ್ಯರ್ಥಿ, ಪ್ರಚಾರದ ವೇಳೆಯೇ ಸ್ಕೆಚ್!

weird thief

ಚಿತ್ರದುರ್ಗ: ಲೋಕಸಭೆ ಚುನಾವಣೆಯಲ್ಲಿ (Lok Sabha Election) ಪಕ್ಷೇತರ ಅಭ್ಯರ್ಥಿಯಾಗಿ (independent Candidate) ಸ್ಪರ್ಧಿಸಿದಾತನೊಬ್ಬ ಕಳ್ಳತನ (Theft) ಮಾಡಿ ಸಿಕ್ಕಿಬಿದ್ದಿದ್ದಾನೆ. ಕಳವು ಮಾಡುವ ಉದ್ದೇಶದಿಂದಲೇ ಈತ ಚುನಾವಣೆಗೆ ನಿಂತು ಮನೆ ಮನೆ ಪ್ರಚಾರ ಮಾಡಿರುವುದು (Weird thief) ಗೊತ್ತಾಗಿದೆ!

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ರಘು ಕುಮಾರ್‌, ಒಂಟಿ ಬಾರ್‌ ಹಾಗೂ ಮನೆಗಳ ಕಳವಿಗೆ ಚುನಾವಣೆ ಪ್ರಚಾರದ ವೇಳೆಯೇ ಪ್ಲ್ಯಾನ್ ಮಾಡಿದ್ದ. ಈ ಖತರ್‌ನಾಕ್‌ ರಘು ಆಂಡ್ ಗ್ಯಾಂಗ್ ಕ್ಯಾಂಪೇನ್ ಮಾಡುತ್ತಾ ಮಾಡುತ್ತಾ ಕಳ್ಳತನ ಸ್ಕೆಚ್ ಹಾಕಿತ್ತು. ಪ್ರಚಾರದ ವೇಳೆ ಒಂಟಿ ಬಾರ್‌ಗಳನ್ನು ಟಾರ್ಗೆಟ್ ಮಾಡಿಕೊಂಡಿತ್ತು. ಚುನಾವಣೆಯಲ್ಲಿ ಸೋತ ಬಳಿಕ ರಘು ಹಾಗೂ ಸಹಚರರು ಕಳ್ಳತನಕ್ಕೆ ಇಳಿದಿದ್ದರು.

ಮೊಳಕಾಲ್ಮುರು ತಾಲ್ಲೂಕಿನ ಶಿಲ್ಪ ಬಾರ್‌ನಲ್ಲಿ ಈ ಗ್ಯಾಂಗ್‌ ಕಳ್ಳತನ ಮಾಡಿತ್ತು. ಈ ಬಗ್ಗೆ ಮೊಳಕಾಲ್ಮುರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದಲ್ಲದೇ ವಿವಿಧ ಜಿಲ್ಲೆಗಳಲ್ಲಿ ಈತನ ಗ್ಯಾಂಗ್‌ ಕೈಚಳಕ ತೋರಿಸುತ್ತಿತ್ತು. ಚಿಕ್ಕಮಗಳೂರಿನಲ್ಲಿ ಕಳ್ಳತನ ಮಾಡುವ ವೇಳೆ ಲಾಕ್ ಆಗಿದ್ದ ಈ ಗ್ಯಾಂಗಿನ ಖದೀಮರನ್ನು ಚಿಕ್ಕಮಗಳೂರು ಪೊಲೀಸರು ಜೈಲಿಗೆ ಕಳಿಸಿದ್ದರು.

ಬಳಿಕ ಮೊಳಕಾಲ್ಮೂರು ಕಳ್ಳತನದ ಪ್ರಕರಣದ ಬಗ್ಗೆ ತಂಡದ ವಿಚಾರಣೆಯನ್ನು ಚಿಕ್ಕಮಗಳೂರಿಂದ ಕರೆತಂದು ಪೊಲೀಸರು ನಡೆಸಿದ್ದಾರೆ. ವಿಚಾರಣೆ ವೇಳೆ ತಾನು ಚುನಾವಣೆಗೆ ನಿಂತಿದ್ದ ಹಾಗೂ ಕಳವು ಮಾಡಿದ್ದ ವಿಚಾರವನ್ನು ಆರೋಪಿ ರಘು ಕುಮಾರ್ ಬಾಯ್ಬಿಟ್ಟಿದ್ದಾನೆ.

ಓಡಿಹೋಗಲು ಯತ್ನಿಸಿದ ಚಡ್ಡಿ ಗ್ಯಾಂಗ್‌ನ ಇಬ್ಬರ ಕಾಲಿಗೆ ಗುಂಡಿಕ್ಕಿದ ಪೊಲೀಸರು!

ಮಂಗಳೂರು: ನಿನ್ನೆ ವಶಪಡಿಸಿಕೊಳ್ಳಲಾದ ಖತರ್ನಾಕ್‌ ಚಡ್ಡಿ ಗ್ಯಾಂಗ್‌ (Chaddi gang) ದರೋಡೆಕೋರರ (Robbers) ಗುಂಪಿನ ಇಬ್ಬರ ಕಾಲಿಗೆ ಮಂಗಳೂರು ಪೊಲೀಸರು (Mangalore Police) ಗುಂಡು ಹಾರಿಸಿ (Shoot Out) ಮತ್ತೆ ಬಂಧಿಸಿದ್ದಾರೆ. ಇಂದು ಬೆಳಗ್ಗೆ ಸ್ಥಳ ಮಹಜರು ಮಾಡಲು ಹೋದಾಗ ಇವರು ತಪ್ಪಿಸಿಕೊಳ್ಳಲು ಯತ್ನಿಸಿದ್ದರು.

ಮಂಗಳೂರು ಹೊರವಲಯದ ಮುಲ್ಕಿ ಎಂಬಲ್ಲಿ ಘಟನೆ ನಡೆದಿದೆ. ನಿನ್ನೆ ಸಕಲೇಶಪುರದಿಂದ ಬಂಧಿಸಿ ಕರೆತಂದಿದ್ದ ಕಳ್ಳರನ್ನು ಈ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಉಡುಪಿಯಲ್ಲಿ ಒಬ್ಬರು ವೃದ್ಧ ದಂಪತಿಯ ಮನೆ ದರೋಡೆ ಮಾಡಿದ್ದ ಕಳ್ಳರು, ಆ ಮನೆಯ ಕಾರನ್ನೂ ಕದ್ದು ಅದರಲ್ಲಿ ಪರಾರಿಯಾಗಿದ್ದರು. ಆ ಕಾರನ್ನು ಬಿಟ್ಟು ಬೆಂಗಳೂರಿಗೆ ಬಸ್ಸಿನಲ್ಲಿ ಹೊರಟಿದ್ದರು. ಕಾರು ಇದ್ದ ಸ್ಥಳಕ್ಕೆ ಮಹಜರಿಗೆ ಇವರನ್ನು ಕರೆತಂದಾಗ ಇಬ್ಬರು ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದರು.

ಎಎಸ್‌ಐ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಇವರ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಮೊನ್ನೆ ರಾತ್ರಿ ವೃದ್ಧ ದಂಪತಿಗಳಿದ್ದ ಮನೆಗೆ ಕನ್ನ ಹಾಕಿದ್ದ ಈ ತಂಡ ದರೋಡೆ ಮಾಡಿತ್ತು. ವೃದ್ಧ ದಂಪತಿಗೆ ಹಲ್ಲೆ ಮಾಡಿ ಲೂಟಿ ಮಾಡಿದ್ದರು. ಹಲ್ಲೆಗೊಳಗಾದ ವಿಕ್ಟರ್ ಮೆಂಡೋನ್ಸಾ(71), ಪ್ಯಾಟ್ರಿಷಾ ಮೆಂಡೋನ್ಸಾ(60) ಆಸ್ಪತ್ರೆಗೆ ದಾಖಲಾಗಿದ್ದರು. ಆರೋಪಿಗಳಿಂದ 12 ಲಕ್ಷ ರೂ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ, ಸ್ಯಾಮ್ ಸಂಗ್ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು 1 ಲಕ್ಷ ರೂ. ಮೌಲ್ಯದ 10 ಬ್ರಾಂಡೆಡ್ ವಾಚ್ ಗಳು, ರೂ 3೦00 ರೂಪಾಯಿ ನಗದು ಹಣವನ್ನು ದರೋಡೆ ಮಾಡಿದ್ದರು. ಪ್ರಕರಣ ನಡೆದ ಮಾಹಿತಿ ಬಂದ ಕೂಡಲೇ ಉರ್ವಾ ಠಾಣೆಯ ಪೊಲೀಸ್ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಅದರಲ್ಲಿ ಕೆ.ಎಸ್.ಅರ್.ಟಿ.ಸಿ ಬಸ್​​ನಲ್ಲಿ ದರೋಡೆಕೋರರರು ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಕಂಡು ಬಂದಿತ್ತು. ಬಳಿಕ ಬಸ್ ಫಾಲೋ ಮಾಡಿ ಬಂಧಿಸಿದ್ದರು.

ಇದನ್ನೂ ಓದಿ: Chudidar Gang: ಚಡ್ಡಿ ಗ್ಯಾಂಗ್ ಆಯ್ತು, ಈಗ ದರೋಡೆಕೋರರ ಚೂಡಿದಾರ್ ಗ್ಯಾಂಗ್ ಆ್ಯಕ್ಟಿವ್ ಆಗಿದೆ; ಹುಷಾರ್! ವಿಡಿಯೊ ನೋಡಿ

Exit mobile version