Site icon Vistara News

Delhi Crime | ಲಿವ್‌ ಇನ್‌ ರಿಲೇಷನ್‌ನಲ್ಲಿದ್ದ ಯುವತಿ ಹತ್ಯೆಗೆ ಲವ್‌ ಜಿಹಾದ್‌ ಕಾರಣವೇ? ಜನರ ಆಕ್ರೋಶವೇಕೆ?

Delhi Crime

ನವದೆಹಲಿ: ದೆಹಲಿಯಲ್ಲಿ ಯುವತಿಯ ದೇಹವನ್ನು 35 ಭಾಗಗಳಾಗಿ ತುಂಡರಿಸಿ, 18 ಕಡೆ ಬಿಸಾಡಿದ ಪ್ರಕರಣವು (Delhi Crime) ದೇಶಾದ್ಯಂತ ಸುದ್ದಿಯಾಗಿದೆ. ಹಾಗೆಯೇ, ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಶ್ರದ್ಧಾ ವಾಲ್ಕರ್‌ಳನ್ನು ಹತ್ಯೆಗೈದ ಅಫ್ತಾಬ್‌ ಅಮೀನ್‌ ಪೂನಾವಾಲಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇಷ್ಟೇ ಅಲ್ಲ, ಪ್ರಕರಣದಲ್ಲಿ ಲವ್‌ ಜಿಹಾದ್‌ (Love Jihad) ಇರುವ ಶಂಕೆಯೂ ವ್ಯಕ್ತವಾಗುತ್ತಿದೆ.

ಅಫ್ತಾಬ್‌ ಅಮೀನ್‌ ಪೂನಾವಾಲಾ ಮುಸ್ಲಿಮನಾದ ಕಾರಣ ಹಾಗೂ ಶ್ರದ್ಧಾ ಹಿಂದೂ ಎಂಬ ಕಾರಣದಿಂದಾಗಿ ಪ್ರಕರಣದಲ್ಲಿ ಲವ್‌ ಜಿಹಾದ್‌ ಷಡ್ಯಂತ್ರ ಇರಬಹುದು ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರೀತಿಸಿದವಳನ್ನೇ ಕೊಂದು ಹಾಕಿದ, ದೇಹವನ್ನು 35 ಭಾಗಗಳಾಗಿ ಮಾಡಿದ್ದಾನೆ ಎಂದರೆ ಆತ ಕ್ರೂರಿಯೇ ಇರಬೇಕು ಹಾಗೂ ಇದು ಲವ್‌ ಜಿಹಾದ್‌ ಇರಬೇಕು ಎಂದು ಟ್ವಿಟರ್‌ನಲ್ಲಿ ಜನ ಅನುಮಾನ ವ್ಯಕ್ತಪಡಿಸಿದ್ದಾರೆ. ಟ್ವಿಟರ್‌ನಲ್ಲಿ #LoveJihad ಎಂಬುದು ಟ್ರೆಂಡ್‌ ಆಗುತ್ತಿದ್ದು, ಇದುವರೆಗೆ 12 ಸಾವಿರಕ್ಕೂ ಅಧಿಕ ಜನ ಪ್ರತಿಕ್ರಿಯಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಯುವತಿಯು ತನ್ನನ್ನು ಮದುವೆಯಾಗು ಎಂದು ಒತ್ತಾಯಿಸಿದ್ದರಿಂದ ಕೋಪಗೊಂಡ ಅಫ್ತಾಬ್‌ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ, ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಗಬಾರದು ಎಂದು ಹಿಂದಿ ಹಾಗೂ ಇಂಗ್ಲಿಷ್‌ ವೆಬ್‌ ಸಿರೀಸ್‌ಗಳಿಂದ ಪ್ರೇರಿತನಾಗಿ, ಆಕೆಯ ದೇಹವನ್ನು ತುಂಡರಿಸಿ, ಫ್ರಿಡ್ಜ್‌ನಲ್ಲಿ ಇಟ್ಟು, ಹಲವೆಡೆ ಒಂದೊಂದೇ ಭಾಗಗಳನ್ನು ಎಸೆದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಇದುವರೆಗೆ ಲವ್‌ ಜಿಹಾದ್‌ ಕುರಿತು ಯಾವುದೇ ದೃಢ ಮಾಹಿತಿ ಇಲ್ಲ.

ಇದನ್ನೂ ಓದಿ | Delhi Crime | ಶ್ರದ್ಧಾ ಹತ್ಯೆಗೆ ದಿ ಫ್ಯಾಮಿಲಿ ಮ್ಯಾನ್‌ 2 ಸಿರೀಸ್‌ನ ಸಮಂತಾ ಪಾತ್ರ ಸ್ಫೂರ್ತಿ?

Exit mobile version