Site icon Vistara News

Drowned: ಆತ್ಮಹತ್ಯೆಗಾಗಿ ನದಿಗೆ ಹಾರಿದ ಮಹಿಳೆ ರಕ್ಷಣೆ, ಬದುಕಿಸಲು ಹೋದ ಗಂಡ- ಬಂಧು ಜಲಸಮಾಧಿ

drowned kalaburagi

ಕಲಬುರಗಿ: ಆತ್ಮಹತ್ಯೆ ಮಾಡಿಕೊಳ್ಳಲೆಂದು (Self harming attempt) ಭೀಮಾ ನದಿಗೆ (Bhima River) ಹಾರಿ ಕೊಚ್ಚಿ ಹೋಗುತ್ತಿದ್ದ ಮಹಿಳೆಯ ರಕ್ಷಣೆಗೆ (Rescue) ಹೋದ ಇಬ್ಬರು ಸಂಬಂಧಿಕರು ನೀರುಪಾಲು (Drowned) ಆಗಿದ್ದಾರೆ. ಮಹಿಳೆಯನ್ನು ಇತರರು ರಕ್ಷಣೆ ಮಾಡಿದ್ದಾರೆ. ಘಟನೆ ಕಲಬುರಗಿ (Kalaburagi news) ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಬಳಿಯ ಭೀಮಾ ಬ್ರಿಡ್ಜ್ ಸಮೀಪ ನಡೆದಿದೆ.

ಮಹಿಳೆ ಲಕ್ಷ್ಮೀ ಶಿವಾನಂದ್(28) ನದಿಗೆ ಹಾರಿ‌ ಆತ್ಮಹತ್ಯೆಗೆ ಯತ್ನಿಸಿದ್ದರು. ಪತ್ನಿ ನದಿಗೆ ಹಾರಿದ್ದನ್ನು ಕಂಡು ಲಕ್ಷ್ಮಿಯ ಗಂಡ ಶಿವಾನಂದ್ ಹಾಗೂ‌ ಸಂಬಂದಿ ರಾಜೂ ಅಂಕಲಗಿ ಆಕೆಯನ್ನು ರಕ್ಷಿಸಲು ನದಿಗೆ ಜಂಪ್ ಮಾಡಿದ್ದರು. ನದಿಯಲ್ಲಿ ಸುಮಾರು 800 ಮೀಟರ್ ದೂರದಲ್ಲಿ ಮಹಿಳೆಯನ್ನು ಮೀನುಗಾರರು ರಕ್ಷಣೆ ಮಾಡಿದ್ದಾರೆ. ಲಕ್ಷ್ಮೀ ರಕ್ಷಣೆಗೆ ಹೋದ ಗಂಡ ಹಾಗೂ ಸಂಬಂಧಿ ನೀರು ಪಾಲಾಗಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಶಿವಾನಂದ ಪತ್ನಿ ಲಕ್ಷ್ಮಿ ಭಿಮಾ ನದಿಗೆ ಹಾರಿದ್ದಳು.

ಇವರು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕಡಣಿ ಗ್ರಾಮದ ನಿವಾಸಿಗಳಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ‌ ಸಿಬ್ಬಂದಿಗಳು ಹಾಗೂ ಅಫಜಲಪುರ ಪೊಲೀಸರು ಭೇಟಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಶವ ಪತ್ತೆ ಹಚ್ಚಿದ್ದಾರೆ. ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಲಕ್ಷ್ಮಿಗೆ ಚಿಕಿತ್ಸೆ ಕೊಡಿಸಲಾಗಿದೆ. ಕಲಬುರಗಿ ಎಸ್ಪಿ ಅಡ್ಡೂರು‌ ಶ್ರೀನಿವಾಸಲು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಅಫಜಲಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೊಲೆ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು

ಆನೇಕಲ್: ಪುರಸಭೆ ಸದಸ್ಯನನ್ನು ಕೊಂದಿದ್ದ ಕುಖ್ಯಾತ ರೌಡಿ ಶೀಟರ್‌ನನ್ನು (Rowdy Sheeter) ಪೊಲೀಸರು ಬಂಧಿಸಿದ್ದಾರೆ. ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ನಡೆಸಲು (Assault) ಯತ್ನಿಸಿದ ಈತನ ಕಾಲಿಗೆ ಗುಂಡು ಹಾರಿಸಿ (Police Firing) ಬಂಧಿಸಲಾಗಿದೆ. ರೌಡಿ ಶೀಟರ್ ಕಾರ್ತಿಕ್ ಅಲಿಯಾಸ್ ಜೆಕೆ ಬಂಧಿತ ಕೊಲೆ ಆರೋಪಿ (Murder Culprit).

ಆನೇಕಲ್ ತಾಲ್ಲೂಕಿನ ಮೈಸೂರಮ್ಮನ ದೊಡ್ಡಿ ಬಳಿ ಫೈರಿಂಗ್ ನಡೆದಿದೆ. ಆನೇಕಲ್ ಭಾಗದ ಕುಖ್ಯಾತ ರೌಡಿ ಶೀಟರ್ ಆಗಿರುವ ಜೆಕೆ, ಮೈಸೂರಮ್ಮನ ದೊಡ್ಡಿಯಲ್ಲಿ ಅವಿತು ಕುಳಿತಿದ್ದ. ಪೊಲೀಸರು ಖಚಿತ ಮಾಹಿತಿ ಮೇರೆಗೆ ಆರೋಪಿ ಬಂಧನಕ್ಕೆ ತೆರಳಿದ್ದರು. ಸೆರೆಯಾಗುವಂತೆ ಆದೇಶಿಸಿ ಆನೇಕಲ್ ಇನ್‌ಸ್ಪೆಕ್ಟರ್ ತಿಪ್ಪೇಸ್ವಾಮಿ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಗ ಜೆಕೆ ಪೊಲೀಸ್ ಸಿಬ್ಬಂದಿ ಸುರೇಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾನೆ. ಇನ್‌ಸ್ಪೆಕ್ಟರ್ ತಿಪ್ಪೇಸ್ವಾಮಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಸೆರೆಹಿಡಿದಿದ್ದಾರೆ.

ಈತ ಪುರಸಭಾ ಸದಸ್ಯ ಸ್ಕ್ರಾಪ್ ರವಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಕಳೆದ 24ನೇ ತಾರೀಕು ಬುಧವಾರ ಕೊಲೆ ನಡೆದಿತ್ತು. ಸ್ಕ್ರಾಪ್ ರವಿ ಕಚೇರಿಯಲ್ಲಿದ್ದಾಗ ರೌಡಿ ಶೀಟರ್ ಕಾರ್ತಿಕ್ ಅಲಿಯಾಸ್ ಜೆಕೆ ಗ್ಯಾಂಗ್ ಕಚೇರಿಗೆ ನುಗ್ಗಿ ಕೊಲೆ ಮಾಡಿತ್ತು. ಕಾರ್ತಿಕ್ ಅಲಿಯಾಸ್ ಜೆಕೆ, ಹರೀಶ್ ಅಲಿಯಾಸ್ ಹಂದಿ ಹರೀಶ್, ವಿನಯ್ ಅಲಿಯಾಸ್ ವಿನಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳು.

ಆರೋಪಿಗಳ ಬಂಧನಕ್ಕೆ ಪೊಲೀಸರ ಎರಡು ತಂಡ ರಚಿಸಲಾಗಿತ್ತು. ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಕೊಲೆ ಆರೋಪಿಗಳ ಪೈಕಿ ಹರೀಶ್ ಮತ್ತು ವಿನಯ್ ಕೋರ್ಟಿಗೆ ಶರಣಾಗಿದ್ದಾರೆ. ಪ್ರಮುಖ ಆರೋಪಿ ರೌಡಿ ಶೀಟರ್ ಜೆಕೆ ಕಾರ್ತಿಕ್ ತಲೆಮರೆಸಿಕೊಂಡಿದ್ದ.

ಇದನ್ನೂ ಓದಿ | Brutal Murder: ಎದೆ, ಗುಪ್ತಾಂಗಕ್ಕೆ ಚಾಕು ಇರಿದು ಹತ್ಯೆ; ಬೀದಿಯಲ್ಲಿ ಬಿದ್ದಿದ್ದ ಯುವತಿಯ ಶವವನ್ನುಕಚ್ಚಿ ಎಳೆದಾಡಿದ ಶ್ವಾನಗಳು; ಕರ್ನಾಟಕ ಮೂಲದ ದಾವೂದ್‌ ಎಸ್ಕೇಪ್‌

Exit mobile version